ತಂದೆಯೇ ಮಗಳಿಗೆ ತಾಯಿ ಆಗಿದ್ದ..! ರೀಲ್ಸ್ ಗೆಳಯನಿಗಾಗಿ ಮಗುವನ್ನೇ ಬಿಟ್ಟಳು..!

Jan 5, 2024, 2:59 PM IST

ಅಮ್ಮನಿಲ್ಲದ ಮನೆಯಲ್ಲಿ ಅಪ್ಪನೇ ಎಲ್ಲಾ ಆಗಿದ್ದ. ಅವನ ಪುಟ್ಟ ಕಂದಮ್ಮಳನ್ನ ತಾಯಿಯಂತೆ ನೋಡಿಕೊಳ್ತಿದ್ದ. ಆದ್ರೆ ಆವತ್ತೊಂದು ದಿನ.. ಮನೆ ಮುಂದೆ ಆಟವಾಡ್ತಿದ್ದ ಮಗು ನಾಪತ್ತೆಯಾಗಿಬಿಟ್ಟಿತ್ತು. ಎಲ್ಲಿ ಹುಡುಕಿದ್ರು ಮಗಳು ಎಲ್ಲೂ ಕಾಣಿಸೋದೇ ಇಲ್ಲ. ಸಿಸಿ ಕ್ಯಾಮರಾದಲ್ಲಿ ಆಕೆ ಕಿಡ್ನ್ಯಾಪ್(Kidnap) ದೃಶ್ಯ ನೋಡಿ ಅಪ್ಪ ಕುಸಿದು ಹೋಗಿದ್ದ.. ಪೊಲೀಸರಿಗೆ(Police) ಕಂಪ್ಲೆಂಟ್ ಕೊಟ್ಟ.. ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಕಾದೀತ್ತು.. ಕಾರಣ ಮಗುವನ್ನ ಕಿಡ್ನ್ಯಾಪ್ ಮಾಡಿದ್ದು ಅವರ ಮನೆಗೆ ಸಂಬಂಧಿಸಿದವರೇ ಆಗಿದ್ರು. ರಡು ವರ್ಷಗಳ ಹಿಂದೆ ಹಾಲು ಕುಡಿಯೋ ಮಗುವನ್ನ ಬಿಟ್ಟು ಹೋದವಳು ಇವತ್ತು ಮತ್ತೆ ಪ್ರತ್ಯಕ್ಷಳಾಗಿದ್ದಾಳೆ. ತನ್ನದೇ ಮಗುವನ್ನ ಸುಪಾರಿ ಕೊಟ್ಟು ಕಿಡ್ನ್ಯಾಪ್ ಮಾಡಿಸಿದ್ದಾಳೆ. ಅವಳು ರೀಲ್ಸ್ ರಾಣಿ.. ಸದಾ ರೀಲ್ಸ್ನಲ್ಲಿ ಬ್ಯುಸಿ ಇರ್ತಿದ್ದ ಅವಳು ಗಂಡ ಮತ್ತು ಮಗುವನ್ನ ಕಡೆಗಣಿಸಿದ್ಲು. ಒಂದು ದಿನ ಮಗುವನ್ನ ಪರಿಚಯಸ್ತರ ಮನೆಯಲ್ಲಿ ಬಿಟ್ಟು ಆಕೆ ಮತ್ತೊಬ್ಬನ ಜೊತೆ ಎಸ್ಕೆಪ್ ಆಗಿಬಿಟ್ಟಿದ್ಲು. ಹಾಲು ಕುಡಿಯೋ ಮಗುವನ್ನ ನಡುದಾರಿಯಲ್ಲಿ ಬಿಟ್ಟು ಹೋದಮೇಲೆ ತಂದೆಯೇ ಆ ಮಗುವನ್ನ ತಾಯಿಯಂತೆ ನೋಡಿಕೊಂಡಿದ್ದ.. ಆದ್ರೆ ಎರಡು ವರ್ಷದ ನಂತರ ಆ ತಾಯಿಗೆ ಅದೇನು ಬುದ್ಧಿ ಬಂತೋ ಏನೋ ಸುಪಾರಿ ಕೊಟ್ಟು ತನ್ನದೇ ಮಗುವನ್ನ ಕಿಡ್ನ್ಯಾಪ್ ಮಾಡಿಸಿದ್ಲು.. ಈಗ ತಂದೆ ಹೋಗಿ ಮಗುವನ್ನ ಕೇಳಿದ್ರೆ ಆಕೆ ಮಾತ್ರ ನಾನು ಮಗುವನ್ನ ಕೊಡಲ್ಲ ಅಂತ ಹೇಳ್ತಿದ್ದ ಕಾನೂನಿನ ಪ್ರಕಾರ ಆ ಮಗು ಈಗ ತಾಯಿಯ ಬಳಿ ಇರಬೇಕು... ಅದರಲ್ಲಿ ಯಾವುದೇ ಅನುಮಾನವಿಲ್ಲ.. ಆದ್ರೆ ಹಾಲು ಕುಡಿಯೋ ಮಗು ಅನ್ನೋದನ್ನೂ ನೋಡದೇ ಜಸ್ಟ್ ಪ್ರೀಯಕರನಿಗಾಗಿ ಎಲ್ಲವನ್ನ ಬಿಟ್ಟು ಹೋದವಳ ಬಳಿ ಆ ಮಗು ಸಂತೋಷದಿಂದ ಇರೋದಕ್ಕಾದ್ರೂ ಆಗುತ್ತಾ..? ಆ ಮಗು ತಂದೆಯನ್ನ ಬಿಟ್ಟು ಇರೋದಕ್ಕೆ  ಆಗುತ್ತಾ..? ತಂದೆ ಮಾತ್ರ ಮಗು ಇಲ್ಲ ಅಂದರೆ ನಾನು ಬದುಕೋದಿಲ್ಲ ಅಂತ ಹೇಳ್ತಿದ್ದಾರೆ.

ಇದನ್ನೂ ವೀಕ್ಷಿಸಿ: ರಾಮ ಮಂದಿರ ಆಹ್ವಾನ ಪತ್ರಿ ಕೆ.. ಯಾವುದು ಸತ್ಯ..? ಯಾವುದು ಮಿಥ್ಯ..?