ಕೇರಳ ದರೋಡೆ ಗ್ಯಾಂಗ್: ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದವರು ಅಂದರ್..!

Oct 30, 2023, 11:52 AM IST

ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಕೇರಳ ದರೋಡೆ ಗ್ಯಾಂಗ್ ಅಟ್ಟಹಾಸ ಮೆರೀತಿತ್ತು.. ಚಿನ್ನದ ವ್ಯಾಪಾರಿಗಳ (Gold businessmen)ಟಾರ್ಗೆಟ್ ಮಾಡಿ ಲೂಟಿ ಮಾಡುತ್ತಿದ್ರು.. ವ್ಯಾಪಾರಿಯೊಬ್ಬರ ಬಳಿ 40 ಲಕ್ಷ ಕಿತ್ತಿದ್ದವರು ಕೊನೆಗೂ ಲಾಕ್ ಆಗಿದ್ದಾರೆ.ಮೊಹಮ್ಮದ್ ತಾಜ್ ರೆಹಮಾನ್,ಮೊಮದ್ ಸಲಮ್,ಸಂಜಯ್,ಜಯಪ್ರಕಾಶ್, ರಾಕೇಶ್, ಒಬ್ಬರಲ್ಲ ಇಬ್ಬರಲ್ಲ ದೊಡ್ಡ ಗ್ಯಾಂಗೇ ಇದೆ. ದರೋಡೆಗೆಂದೇ(Robbery) ಸ್ಕೆಚ್ ಹಾಕಿ ಕುಳಿತುಕೊಳ್ಳೋ ಈ ಗ್ಯಾಂಗ್‌ಗೆ ಚಿನ್ನದ ವ್ಯಾಪಾರಿಗಳೇ ಟಾರ್ಗೆಟ್. ಅಷ್ಟಕ್ಕೂ ಇವರೆಲ್ಲ ಕೇರಳದವರು(Kerala).. ಪಕ್ಕದ ರಾಜ್ಯದ ದರೋಡೆ ಗ್ಯಾಂಗ್(Kerala gang) ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ(Chamarajanagar) ದರೋಡೆ ಕೃತ್ಯಕ್ಕೆ ಇಳಿದಿತ್ತು.. ಕೊನೆಗೂ ಗ್ಯಾಂಗ್ನಲ್ಲಿದ್ದ 11 ಮಂದಿಯೂ ಅಂದರ್ ಆಗಿದ್ದಾರೆ. ಹಾಡಹಗಲೇ ಮಾರಾಕಾಸ್ತ್ರ ಹಿಡಿದು ನಡುರಸ್ತೆಯಲ್ಲೇ ಚಿನ್ನದ ವ್ಯಾಪಾರಿಗಳನ್ನು ಬೆದರಿಸಿ ದರೋಡೆ ಮಾಡೋದೇ ಇವರ ಕಾಯಕವಾಗಿತ್ತು.ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಬೇಗೂರು ಠಾಣಾ ವ್ಯಾಪ್ತಿಯ ಶಿವಾ ಎಂಬ ಚಿನ್ನದ ವ್ಯಾಪಾರಿಯ ಕಾರನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ 40 ಲಕ್ಷ ದೋಚಿ ಪರಾರಿಯಾಗಿದ್ರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬೇಗೂರು ಪೊಲೀಸರು ಈಗ ಮೊಹಮ್ಮದ್ ತಾಜ್ ಸೇರಿದಂತೆ 11 ಮಂದಿ ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ.ಚಿನ್ನದ ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಹೊಂಚು ಹಾಕಿ ದರೋಡೆ  ನಡೆಸುತ್ತಿದ್ದರು. ಚಿನ್ನದ ವ್ಯಾಪಾರಿಗಳು ಹಣ ತೆಗೆದುಕೊಂಡು ಹೋಗುವುದನ್ನೇ ಎದುರು ನೋಡುತ್ತಿದ್ದ ಗ್ಯಾಂಗ್, ಫಾಲೋವ್ ಮಾಡಿಕೊಂಡು ಹೋಗ್ತಿದ್ರು. ಯಾವಾಗ ಊಟಿ ಹಾಗೂ ಮೈಸೂರು ರಸ್ತೆಗೆ ಚಿನ್ನದ ವ್ಯಾಪಾರಿಗಳು ಎಂಟ್ರಿಯಾಗುತ್ತಿದ್ರೋ, ಆಗ ಅವರ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಹಣ ದೋಚಿ ಪರಾರಿಯಾಗ್ತಿದ್ರು.ವಾ ಎಂಬ ಚಿನ್ನದ ವ್ಯಾಪಾರಿ ದರೋಡೆ ಕೇಸ್ನಲ್ಲಿ ಬಂಧನವಾಗಿರೋ ಗ್ಯಾಂಗ್ ಈ ಹಿಂದೆಯೂ ಇಂಥದ್ದೆ ದರೋಡೆಗಳನ್ನ ನಡೆಸಿದೆ.. ಕಳೆದ ಆಗಸ್ಟ್ನಲ್ಲೂ ಮಹೇಶ್ ಎಂಬ ಚಿನ್ನದ ವ್ಯಾಪಾರಿ ಬೆದರಿಸಿ 5 ಲಕ್ಷ ಹಣ ದೋಚಿ ಪರಾರಿಯಾಗಿದ್ರು. ಆಗ ಇದೇ ಗ್ಯಾಂಗ್ನ 10 ಮಂದಿ ಆರೆಸ್ಟಾಗಿದ್ದರು.. ಈಗ 11 ಮಂದಿ ಸರೆಸ್ಟಾಗಿದ್ದಾರೆ.. ಇನ್ನು ಈ ಕೇಸ್ನಲ್ಲಿ ದೂರುದಾರರು ಪೊಲೀಸರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಹಣದ ಮೂಲದ ಕುರಿತು ಸ್ಪಷ್ಟ ಮಾಹಿತಿಯನ್ನೂ ಕೊಡ್ತಿಲ್ಲವಂತೆ.. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ವೀಕ್ಷಿಸಿ:  ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಗೆ ಎಚ್ಚೆತ್ತ ಸರ್ಕಾರ: ನೇಕಾರರ ‘ಪವರ್’ ಸಮಸ್ಯೆಗೆ ಕೊನೆಗೂ ಸಿಕ್ತು ಪರಿಹಾರ