Sep 5, 2023, 12:41 PM IST
ಹೀಗೆ ಕೈಯಲ್ಲಿ ಸೇವಿಂಗ್ ರೇಜರ್ ಹಿಡಿದು ಕುಯ್ದು ಬಿಡ್ತಿನಿ ಅಂತ ಹೆದರಿಸ್ತಿರೋ ವ್ಯಕ್ತಿ ಯಾರೋ ರೌಡಿ ಅಲ್ಲ. ಬದಲಿಗೆ ಖಾಕಿ ತೊಟ್ಟು, ಹೆಗಲ ಮೇಲೆ ಐಪಿಎಸ್(IPS) ಲೋಗೋ ಹಾಕಿಕೊಂಡ ಐಪಿಎಸ್ ಅಧಿಕಾರಿ. ಸದ್ಯ ಮಂಗಳೂರಿನಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ಎಸ್ಪಿ ಆಗಿರುವ ಪ್ರಕಾಶ್ ಗೌಡ. ಈ ಬೆದರಿಕೆಯ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಆಗಿ ಲಭ್ಯವಾಗಿದೆ. ಡಾ.ಪ್ರಕಾಶ್ ಗೌಡ ಪೊಲೀಸ್ ಹುದ್ದೆಯಲ್ಲಿದ್ರೂ ಮಾಡೋದು ರಿಯಲ್ ಎಸ್ಟೇಟ್ ಧಂದೆ(Real estate business). ತನ್ನ ಅತ್ಯಾಪ್ತ ಪ್ರಸನ್ನ ಹೆಸರಲ್ಲಿರುವ ಪಂಚಮಿ ಬಿಲ್ಡರ್ ಕಂಪನಿಯ ಅಸಲಿ ಓನರ್. ಅಸಲಿಗೆ ಪ್ರಸನ್ನ ಪಂಚಮಿ ಬಿಲ್ಡರ್ ಕಂಪನಿ(Panchami Builder Company) ಪ್ರೋಪರೈಟರ್ ಆಗಿದ್ರೂ, ನಿಜವಾದ ಓನರ್ ಇದೇ ಐಪಿಎಸ್ ಅಧಿಕಾರಿ ಡಾ.ಪ್ರಕಾಶ್ ಗೌಡ. ಸದ್ಯ ನೀವಿಗ ನೋಡ್ತಾ ಇರುವ ಸಿಸಿಟಿವಿ ವಿಡಿಯೋ(CCTV video) ಮೇ.24ರಂದು ಮೈಸೂರಿನ ಜ್ಯೋತಿ ಹಾಗೂ ಶ್ರೀಕಾಂತ್ ದಂಪತಿ ಮನೆಯಲ್ಲಿ ರೆಕಾರ್ಡ್ ಆದದ್ದು. ಶ್ರೀಕಾಂತ್ ಹಾಗೂ ಜ್ಯೋತಿ ದಂಪತಿ ಕೂಡ ರಿಯಲ್ ಎಸ್ಟೇಟ್ ಉದ್ಯಮಿಗಳು. ಮೈಸೂರು- ಬನ್ನೂರು ಮುಖ್ಯ ರಸ್ತೆಯಲ್ಲಿರುವ ಇವರ 70 ಎಕರೆ ಜಾಗದ ಮೇಲೆ ಬಿದ್ದಿದೆ ಎಸ್ಪಿ ಪ್ರಕಾಶ್ ಗೌಡ ಕಣ್ಣು. ರಿಯಲ್ ಎಸ್ಟೇಟ್ ಬೂಮ್ ನಲ್ಲಿ ಇರುವ ಈ ಜಾಗವನ್ನ ಖರೀದಿ ಮಾಡಲೇಬೇಕು ಎಂದು ನಿರ್ಧಾರ ಮಾಡಿರು ಪ್ರಕಾಶ್ ಗೌಡ ಈ ದಂಪತಿ ಮನೆಗೆ ಪದೇ ಪದೇ ಬಂದು ತಮ್ಮ ಹೆಸರಿಗೆ ಮಾಡಿಕೊಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಡಾ.ಪ್ರಕಾಶ್ ಗೌಡ ಅವರ ಬೇನಾಮಿ ಬಿಲ್ಡರ್ ಕಂಪನಿಯಿಂದ 2015 ರಲ್ಲಿ ಶ್ರೀಕಾಂತ್ ದಂಪತಿಯಿಂದ 40 ಎಕರೆ ಜಮೀನು(Land) ಖರೀದಿಉ ಎಂಓಯು ಆಗಿತ್ತು... ಆದ್ರೆ ಆ ಸಂದರ್ಭದಲ್ಲಿ ಹಣ ಕೊಟ್ಟು ಖರೀದಿ ಪೂರ್ಣಗೊಂಡಿರಲಿಲ್ಲ.. ಆದ್ರೆ ಇದೀಗ ಬಂದ ಪ್ರಸನ್ನ ಹಾಗೂ ಪ್ರಕಾಶ್ ಗೌಡ ನಮಗೆ 70ಎಕರೆ ಜಾಗ ಮಾರಲೇಬೇಕು. ಅಷ್ಟೇ ಅಲ್ಲದೆ ಹಳೆಯ ರೇಟ್ ಗೆ ಜಮೀನು ನೀಡಬೇಕು ಎಂದು ಒತ್ತಡ ಹಾಕಿದ್ದಾರೆ. ಜಮೀನು ನೋಡಲು ನಿರಾಕರಿಸಿದ ಜ್ಯೋತಿ-ಶ್ರೀಕಾಂತ್ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ. ಹಲವು ಬಾರಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಮೇ.24 ರಂದು ಖುದ್ದು ಎಸ್ಪಿ ಪ್ರಕಾಶ್ ಗೌಡ ರೇಜರ್ ಹಿಡಿದು ಬೆದರಿಕೆ ಹಾಕಿದ್ದಾರೆ.
ಇದನ್ನೂ ವೀಕ್ಷಿಸಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಪ್ರಧಾನಿಗೆ ಅಧಿಕೃತ ಆಹ್ವಾನ ನೀಡಲಿರುವ ಸಿಎಂ ಯೋಗಿ