ಇಮ್ರಾನ್​ ಹಶ್ಮಿಯಂಥದ್ದೇ ಗಂಡ ಬಯಸ್ತಾರಂತೆ ಯುವತಿಯರು! ಅಸಲಿ ಕಾರಣ ಅದಲ್ಲ, ಇಲ್ಲಿದೆ ನೋಡಿ...

By Suchethana D  |  First Published Nov 29, 2024, 11:01 PM IST

ಬಾಲಿವುಡ್​ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​ ಆಗಿರೋರು ಇಮ್ರಾನ್​ ಹಶ್ಮಿಯಂಥದ್ದೇ ಗಂಡ ಬಯಸ್ತಾರಂತೆ ಯುವತಿಯರು! ಆದರೆ ಅಸಲಿ ಕಾರಣ ಅದಲ್ಲ, ಇಲ್ಲಿದೆ ನೋಡಿ... 
 


ಬಾಲಿವುಡ್​ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​ ಆಗಿರೋರು ಇಮ್ರಾನ್​ ಹಶ್ಮಿ. 2004ರಲ್ಲಿ ಮರ್ಡರ್‌ ಚಿತ್ರದಲ್ಲಿ ಸೆಕ್ಸ್​ ಬಾಂಬ್​ ಎಂದೇ ಫೇಮಸ್​ ಆಗಿರೋ ಮಾದಕ ನಟಿ ಮಲ್ಲಿಕಾ ಶೆರಾವತ್​ ಅವರ ಜೊತೆಗಿನ ಇಮ್ರಾನ್​ ಹಶ್ಮಿ ಅವರ  ಇಂಟಿಮೇಟ್​ ದೃಶ್ಯಗಳು ಎಲ್ಲರ ಹುಬ್ಬೇರಿಸಿದ್ದವು. ಈ ಚಿತ್ರದಲ್ಲಿ ಕಿಸ್ಸಿಂಗ್​ಗೆ ಅಂತೂ ಬರವೇ ಇರಲಿಲ್ಲ. ಆ ಪರಿಯಲ್ಲಿ ಇಂಟಿಮೇಟ್​ ದೃಶ್ಯಗಳು ಇದ್ದವು. 20 ವರ್ಷಗಳ ಹಿಂದೆ ಇಂಥ ದೃಶ್ಯಗಳು ಬಿಸಿಬಿಸಿ ಚರ್ಚೆಗೂ ಗ್ರಾಸವಾಗಿತ್ತು.  ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಖ್ಯಾತಿ ಕೊಟ್ಟಿದ್ದು ಇದೇ ಚಿತ್ರ. ಏಕೆಂದರೆ ಇಬ್ಬರೂ ಈ  ಸಿನಿಮಾದಲ್ಲಿ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡರು. ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.  ಟಾಪ್ ರೇಟೆಡ್ ಜೋಡಿ ಎಂಬ ಬಿರುದೂ ಅವರಿಗೆ ಬಂತು.  
 
ಇಂತಿಪ್ಪ ಇಮ್ರಾನ್​ ಹಶ್ಮಿ ಅವರಂಥ ಗಂಡನೇ ತಮಗೆ ಬೇಕು ಎಂದು ಇಂದಿನ ಬಹುತೇಕ ಹೆಣ್ಣುಮಕ್ಕಳು ಬಯಸ್ತಾರಂತೆ! ಹಾಗಂತ ಇದಕ್ಕೂ ಕಿಸ್ಸಿಗೂ ಸಂಬಂಧ ಇಲ್ಲ ಬಿಡಿ. ಇದರ ಅಸಲಿಯತ್ತು ಏನು ಎನ್ನುವ ವಿಷಯವನ್ನು ಪಾಡ್​ಕಾಸ್ಟ್​ ಡಾಟ್​ ಪಬ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಇದರಲ್ಲಿ ಇಂದಿನ ಬಹುತೇಕ ಮಂದಿ ಇಮ್ರಾನ್​ ಹಶ್ಮಿ ಅವರಂಥದ್ದೇ ಗಂಡ ಬೇಕು ಎಂದು ಬಯಸುತ್ತಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿಸಿದ್ದಾರೆ. ಅದೇನೆಂದರೆ, ಇಮ್ರಾನ್​ ಹಶ್ಮಿ ಅವರು ಎಷ್ಟೇ ಇಂಟಿಮೇಟ್​ ಸೀನ್​ ಮಾಡಿದ್ದರೂ, ಹಲವಾರು ನಟಿಯರ ಜೊತೆ ಹಾಟ್​ ಆಗಿ ಕಾಣಿಸಿಕೊಂಡಿದ್ದರೂ, ಅವರು ಯಾರ ಜೊತೆಯೂ ಡೇಟಿಂಗ್​ಮಾಡಿರಲಿಲ್ಲ. ಅಕ್ರಮ ಸಂಬಂಧವೂ ಇರಲಿಲ್ಲ ಎನ್ನುವ ಕಾರಣಕ್ಕೆ!

ಮಾದಕ ನಟಿ ಮಲ್ಲಿಕಾ ಶೆರಾವತ್​ಗೇ ಕಿಸ್​ ಕೊಡಲು ಬರಲ್ಲ ಎನ್ನೋದಾ ಇಮ್ರಾನ್​? ನಟಿ ಕೊಟ್ಟ ತಿರುಗೇಟು ನೋಡಿ...

Tap to resize

Latest Videos

ಈ ಪ್ರಶ್ನೆಯನ್ನು ನಟನ ಮುಂದೆ ಇಟ್ಟಾಗ, ಇಮ್ರಾನ್​ ಹಶ್ಮಿ ಇದು ನಿಜ. ಇಂದು ಬಹುತೇಕ ಎಲ್ಲ ನಟ-ನಟಿಯರ ಹೆಸರು ಬೇರೆಯವರ ಜೊತೆ ಕೇಳಿಬರುತ್ತದೆ. ಡೇಟಿಂಗ್​, ಬ್ರೇಕಪ್​, ಇನ್ನೊಬ್ಬರ ಜೊತೆ ಮತ್ತೆ ಡೇಟಿಂಗ್​ ಎಲ್ಲವೂ ಮಾಮೂಲು. ಆದರೆ ನಾನು ಡೇಟಿಂಗ್​ ಮಾಡಿದ್ದು ಪರ್ವೀನ್​ ಸಹಾನಿ ಜೊತೆ ಮಾತ್ರ. ಆಕೆಯೇ ಮೊದಲಿನವಳು, ಆಕೆಯೇ ಕೊನೆಯವಳು. ಅವರನ್ನೇ ಮದುವೆಯಾದೆ. ಇದನ್ನು ಬಿಟ್ಟು ಬೇರೆಯವರ ಜೊತೆ ಡೇಟಿಂಗ್​ ಎಲ್ಲವೂ ನನಗೆ ಆಗಿಬರುವುದಿಲ್ಲ. ಆದ್ದರಿಂದ ನಾನು ಒಳ್ಳೆಯ ಹೆಸರು ಉಳಿಸಿಕೊಂಡಿದ್ದೇನೆ ಎಂದಿದ್ದಾರೆ. ಇದೇ ಕಾರಣಕ್ಕೆ ಹಲವು ಹೆಣ್ಣುಮಕ್ಕಳು ಇಂಥ ಗಂಡನನ್ನೇ ಬಯಸುವುದು ಎನ್ನಲಾಗುತ್ತಿದೆ. 

ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಪತ್ನಿಯ ಬಗ್ಗೆ ಇಮ್ರಾನ್​ ಮಾತನಾಡಿದ್ದರು.  ಕೆಲವು ನಟು ತೆರೆ ಮೇಲೆ ಕಿಸ್ಸಿಂಗ್ ದೃಶ್ಯ ಮಾಡೋದು ಕೆಲವು ಪತ್ನಿಯರಿಗೆ ಇಷ್ಟ ಆಗುವುದಿಲ್ಲ. ಕೆಲವರು ಸಿಟ್ಟಾಗುತ್ತಾರೆ ಎನ್ನುತ್ತಲೇ ತಮ್ಮ ಮನೆಯ ಗುಟ್ಟನ್ನು ಬಿಚ್ಚಿಟ್ಟಿದ್ದ ನಟ,  ಇದನ್ನು ನೇರವಾಗಿ ಒಪ್ಪಿಕೊಳ್ಳದಿದ್ದರೂ, ಪ್ರತಿ ಬಾರಿ ಕಿಸ್ಸಿಂಗ್ ದೃಶ್ಯ ಮಾಡಿದಾಗಲೂ ತಾವು ಪತ್ನಿಗೆ ಬ್ಯಾಗ್ ಗಿಫ್ಟ್​ ಕೊಟ್ಟು ಆಕೆಯ  ಸಿಟ್ಟನ್ನು ಅವರು ಶಮನ ಮಾಡುತ್ತಿರುವುದಾಗಿ ಹೇಳಿದ್ದರು. ಕೆಲವೊಮ್ಮೆ ತಾವೇ ಖುದ್ದಾಗಿ  ಬೋಲ್ಡ್ ದೃಶ್ಯಗಳನ್ನು ತೋರಿಸಿದಾಗ, ಪತ್ನಿ ನೋಡುತ್ತಿರಲಿಲ್ಲ ಎಂದಿದ್ದರು. ಅಂದಹಾಗೆ, ನಟ ಇಮ್ರಾನ್ ಹಶ್ಮಿ ಅವರು ಸೀರಿಯಲ್​ ಕಿಸ್ಸರ್​ ಇಮೇಜ್​ನಿಂದ ಬದಲಾಗಲು ನೋಡಿದ್ದಾರೆ. ಇದೇ ಕಾರಣಕ್ಕೆ ‘ಟೈಗರ್ 3’ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ‘ದೆ ಕಾಲ್ ಮಿ ಒಜಿ’ ಹೆಸರಿನ ತೆಲುಗು ಸಿನಿಮಾದಲ್ಲಿ ಅವರು ಪವನ್ ಕಲ್ಯಾಣ್ ವಿರುದ್ಧ ಕಾಣಿಸಿಕೊಂಡಿದ್ದಾರೆ.  ಇನ್ನೂ ಹಲವು ಸಿನಿಮಾಗಳಲ್ಲಿ ಅವರಿಗೆ ವಿಲನ್ ಪಾತ್ರಗಳು ಬರುತ್ತಿವೆ. ಅವರು ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.
ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!

 

 
 
 
 
 
 
 
 
 
 
 
 
 
 
 

A post shared by Podcast Pub (@podcast.pub)

click me!