Sep 23, 2020, 1:48 PM IST
ಬೆಂಗಳೂರು (ಸೆ. 23): ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ನಟ ದಿಗಂತ್‌ಗೆ ಇಂದು ಮತ್ತೆ ನೊಟೀಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ. ಕೆಲದಿನಗಳ ಹಿಂದೆ ದಿಗಂತ್- ಐಂದ್ರಿತಾ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ಇದೀಗ ದಿಗಂತ್ ಗೆ ಮಾತ್ರ ನೊಟೀಸ್ ನೀಡಲಾಗಿದೆ.
ದಿಗಂತ್ ಮೊಬೈಲ್‌ನಿಂದ ಮೆಸೇಜ್, ಕಾಲ್ ಹಿಸ್ಟರಿಯನ್ನು ರಿಟ್ರೀವ್ ಮಾಡಲಾಗಿದೆ. ಇದರಿಂದ ಇನ್ನಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ. ಜೊತೆಗೆ ದಿಗಂತ್‌ಗೆ ಮುಳುವಾಗುವ ಸಾಧ್ಯತೆಯೂ ಇದೆ. ಕಳೆದ ವಿಚಾರಣೆ ವೇಳೆ ಡ್ರಗ್ ಸೇವನೆಯನ್ನು ದಿಗಂತ್ ಒಪ್ಪಿಕೊಂಡಿದ್ದರು. ಕೆಲವು ಪೆಡ್ಲರ್‌ಗಳು ಕೂಡಾ ದಿಗ್ಗಿ ಹೆಸರನ್ನು ಪದೇ ಪದೇ ಹೇಳುತ್ತಿದ್ದಾರೆ. ಹಾಗಾಗಿ ಎರಡನೇ ಬಾರಿ ನೊಟೀಸ್ ನೀಡಲಾಗಿದೆ. ಹೆಚ್ಚಿನ ಅಪ್‌ಡೇಟ್ಸ್ ನೋಡೋಣ ಬನ್ನಿ..!