15 ವರ್ಷ ತನ್ನೊಂದಿಗೆ ಸಂಸಾರ ಮಾಡಿದ್ದ ಹೆಂಡತಿಯನ್ನು ಕೊಂದು, ಅವಳ ಸಾಲ ತೀರಿಸಿದ!

Jun 24, 2022, 5:33 PM IST

ಬೆಂಗಳೂರು (ಜೂನ್ 24): ಸಾಲವೇ (Loan) ಕುಟುಂಬಕ್ಕೆ ಶೂಲವಾದ ಕಥೆ ಇದು. ಕೆಲ ಲಕ್ಷಗಳ ಸಾಲ ತೀರಿಸಬೇಕಾದ ಒತ್ತಡದಲ್ಲಿ 15 ವರ್ಷಗಳ ಕಾಲ ತನ್ನ ಜೊತೆಗೆ ಸಂಸಾರ ಮಾಡಿದ್ದ ಪತ್ನಿಯನ್ನು 49 ವರ್ಷ ವ್ಯಕ್ತಿ ಕೊಲೆ ಮಾಡಿದ್ದ. 14 ವರ್ಷದ ಮಗಳನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದ. ಆಕೆಯ ಕುತ್ತಿಗೆಗೆ ಮಚ್ಚಿಟ್ಟಿದ್ದರೂ ಸಾಯುವ ರೀತಿಯಲ್ಲಿ ನಾಟಕ ಮಾಡಿ ಮಗಳು ಬದುಕಿ ಬಿಟ್ಟಳು.

ದೂರದ ಊರಿನಿಂದ ಬಂದು ಹೊಟ್ಟೆಪಾಡಿಗೆ ಟೈಲರಿಂಗ್ (Tailoring)ಅಂಗಡಿ ಇಟ್ಟುಕೊಂಡು ಸಂಪಾದಿಸಿದರಲ್ಲೇ ಖುಷಿಯಾಗಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಇದ್ದಕ್ಕಿದಂತೆ ಬಿರುಗಾಳಿಯೇ ಬೀಸುಬಿಟ್ಟಿತ್ತು. ಅಷ್ಟಕ್ಕೂ ಗಂಡ, ಹೆಂಡತಿಯನ್ನೇ ಕೊಲ್ಲುವ ಹಂತಕ್ಕೆ ಹೋಗಿದ್ದೇಕೆ..?  ಯಾವಾಗ ಹೆಂಡತಿ ಚೀಟಿ ದುಡ್ಡು ಕೇಳಿದ್ಲೋ ಧನೇಂದ್ರನಿಗೆ (Dhanendra) ನಡುಕ ಶುರುವಾಗುತ್ತೆ. ಇನ್ನೂ ಆಕೆ ಕೊಟ್ಟ ಡೆಡ್ಲೈನ್ ದಿನ ಹತ್ತಿರ ಬರ್ತಿದಂತೆ ಗಂಡನಿಗೆ ದಿಕ್ಕೆ ತೋಚದಂತಾಗಿ ಒಂದು ಮನೆಹಾಳ್ ಪ್ಲಾನ್ ಮಾಡಿಬಿಡ್ತಾನೆ. ಅಷ್ಟಕ್ಕೂ ಧನೇಂದ್ರನ ಆ ಪ್ಲಾನ್ ಏನು..? 

Bengaluru Crime News: ಎರಡೂವರೆ ಲಕ್ಷ ಸಾಲಕ್ಕಾಗಿ ಪತ್ನಿ ಕೊಂದ ಪತಿ: ಮಗಳ ಮೇಲೂ ಹಲ್ಲೆ!

ಸಾಲದ ವಿಷಯವಾಗಿ ಹೆಂಡತಿ ಜೊತೆ ಜಗಳ ಮಾಡಿಕೊಮಡಿದ್ದ ಧನೇಂದ್ರ ಹುಚ್ಚನಂತಾಗಿಬಿಟ್ಟಿರುತ್ತಾನೆ. ಇ್ನೂ ಹೆಂಡತಿ ನೀಡಿದ್ದ ಡೆಡ್ಲೈನ್ ಕೂಡ ಮಾರನೇ ದಿನವೇ ಇರುತ್ತೆ. ಅತ್ತ ಹೆಂಡತಿಗೆ ದುಡ್ಡು ಕೊಡೋದಕ್ಕೆ ಆಗೋದಿಲ್ಲ. ಇತ್ತ ಸಾಲಗಾರರ ಕಾಟವು ಹೆಚ್ಚಾಗುತ್ತೆ. ಏನ್ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಧನೇಂದ್ರನಿಗೆ ಒಂದು ಮುಟ್ಟಾಳ್ ಐಡಿಯ ಬಂದುಬಿಡುತ್ತೆ. ಅದುವೇ ಹೆಂಡತಿ ಮಗಳನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳೋದು