Bengaluru: ಡಿ.ಕೆ. ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ!

Dec 19, 2022, 5:25 PM IST

ಬೆಂಗಳೂರು (ಡಿ.19):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಲೀಕತ್ವದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್‌ ಎಜುಕೇಶನ್‌ ಫೌಂಡೇಶನ್‌ ಮೇಲೆ ಸಿಬಿಐ ದಾಳಿ ಮಾಡಿದೆ. ಸಿಬಿಐ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.

ಗ್ಲೋಬಲ್ ಕಾಲೇಜ್ ಜಾಗದ ಬಗ್ಗೆ ಕಾಲೇಜ್ ಸಿಬ್ಬಂದಿ ಮಾಹಿತಿ ಕೇಳಿದ ಸಿಬಿಐ ತಂಡ. ಕೆಲವು ಬ್ಯಾಂಕ್ ದಾಖಲೆ ಪಡೆದು ತೆರಳಿರುವ ಅಧಿಕಾರಿಗಳು. 2020ರಲ್ಲಿ ಸಿಬಿಐ ನಲ್ಲಿ ದಾಖಲಾದ FIR ಸಂಬಂಧ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಆಸ್ತಿ ಮೌಲ್ಯಮಾಪನ(Assets valuation) ಮಾಡಲು ಬಂದಿರುವ ಎರಡು ಸಿಬಿಐ ತಂಡಗಳ ವಿರುದ್ಧ ವಿದ್ಯಾರ್ಥಿಗಳು ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು. 

ಐದು ವರ್ಷದಲ್ಲಿ ಶೇ.44.93ರಷ್ಟು ಆದಾಯ ಏರಿಕೆ: ಬೆಂಗಳೂರು ಸಿಬಿಐ ಕಚೇರಿಯಲ್ಲಿ FIR ದಾಖಲಾಗಿತ್ತು. 2013 ರಲ್ಲಿ 33 .93 ಕೋಟಿ ಅದಾಯ ಹೊಂದಿದ್ದರು. ಇನ್ನು 2018 ರ ವೇಳೆಗೆ 162 ಕೋಟಿಗೆ ಏರಿಕೆ ಆಗಿತ್ತು. ಅದರಲ್ಲಿ ಕೆಲವು  ಖರ್ಚು ವೆಚ್ಚ ವನ್ನು ತೋರಿಸಿರುವ ಡಿಕೆ ಶಿವಕುಮಾರ್ ಐದು ವರ್ಷದಲ್ಲಿ ಶೇ.44.93ರಷ್ಟು ಆದಾಯ ಏರಿಕೆ ಆಗಿತ್ತು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಗೆ ಆಂಜನೇಯ ಮತ್ತು ಶಶಿಕುಮಾರ್ ನೆರವು ನೀಡಿದ್ದರು. 2020ರ ಮಾರ್ಚ್ 12ರಂದು ಸಿಬಿಐ ಪ್ರಾಥಮಿಕ ತನಿಖೆ ಪ್ರಾರಂಭಿಸಿತ್ತು. ಈ ಅವಧಿಯಲ್ಲಿ ಡಿ,ಕೆ. ಶಿವಕುಮಾರ್  ಕ್ಯಾಬಿನೇಟ್ ದರ್ಜೆ ಸಚಿವರಾಗಿದ್ದರು. ಸರ್ಕಾರಿ ಕಚೇರಿಯಲ್ಲಿ ಇದ್ದ ವೇಳೆ ಅಧಿಕಾರ ದುರ್ಬಳಕೆ ಆರೋಪ. ಪವರ್ ಮಿನಿಸ್ಟರ್ ಇದ್ದ ವೇಳೆ ಅಕ್ರಮ ಆಸ್ತಿಗಳಿಸಿದ್ದ ಆರೋಪ ಕೇಳಿಬಂದಿತ್ತು.