ಮಹಿಳೆಗೆ ವಾಂತಿ ಮಾಡಿಸಿದ ಅಮೇಜಾನ್ ಪಾರ್ಸಲ್!

Published : Nov 05, 2024, 07:18 PM ISTUpdated : Nov 05, 2024, 07:32 PM IST
ಮಹಿಳೆಗೆ ವಾಂತಿ ಮಾಡಿಸಿದ ಅಮೇಜಾನ್ ಪಾರ್ಸಲ್!

ಸಾರಾಂಶ

ಸೈಕಲ್ ಹೆಲ್ಮೆಟ್‌ಗಾಗಿ ಆರ್ಡರ್ ಮಾಡಿದ್ದ ಯುವತಿಗೆ ಪಾರ್ಸೆಲ್ ತೆರೆದಾಗ ಅಸಹ್ಯವಾದ ವಾಸನೆ ಬಂದಿದೆ. ಈ ದುರ್ವಾಸನೆ ತಾಳಲಾರದೆ ವಾಂತಿ ಮಾಡಿಕೊಂಡಿದ್ದಾಳೆ.

ವೈರಲ್ ನ್ಯೂಸ್: ಇಡೀ ವಿಶ್ವವವನ್ನೇ ಅಂಗೈನಲ್ಲಿ ಹಿಡಿದುಕೊಳ್ಳುವಂತೆ ಮಾಡಿರುವ ಮೊಬೈಲ್, ಹಣವೊಂದಿದ್ದರೆ ಮನುಷ್ಯನ ಬಹುತೇಕ ಬೆಡಿಕೆಗಳನ್ನು ಈಡೇರಿಸುವ ಸಾಧನವೂ ಆಗಿದೆ. ಇನ್ನು ಮೊಬೈಲ್ ಹಿಡಿದು ತನಗೆ ಬೇಕಾದ ವಸ್ತುವೊಂದನ್ನು ಆನ್‌ಲೈನ್ ಆರ್ಡರ್ ಮಾಡಿದ ಮಹಿಳೆ, ಅಮೇಜಾನ್‌ ಸಂಸ್ಥೆಯಿಂದ ಬಂದ ಪಾರ್ಸಲ್ ಬಾಕ್ಸ ತೆರೆದು ವಾಂತಿ ಮಾಡಿಕೊಂಡಿದ್ದಾಳೆ. ಇದರ ನಂತರ ತಾನು ಆನ್‌ಲೈನ್ ಶಾಪಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾಳೆ.

ನಾವು ಏನಾದರೂ ಒಂದು ವಸ್ತುವನ್ನು ತೆಗೆದುಕೊಂಡು ಬರಬೇಕೆಂದರೆ ಬಸ್ ಅಥವಾ ನಮ್ಮ ಖಾಸಗಿ ವಾಹನದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡಿ ಅಂಗಡಿ ತಲುಪುತ್ತೇವೆ. ಅಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹುಡುಕಿ ಕೌಂಟರ್ ತಲುಪಿದರೆ ಮಾಲೀಕರು ಹೇಳುವ ಬೆಲೆಗೆ ದಂಗಾಗಿ ಚೌಕಾಸಿಯನ್ನೂ ಮಾಡಿ ಹಣ ಕೊಟ್ಟು ಬರುತ್ತೇವೆ. ಕೆಲವೊಮ್ಮೆ ನಾವು ಹಣಕೊಟ್ಟು ವಸ್ತು ಖರೀದಿ ಮಾಡಿಕೊಂಡು ಬಂದರೂ ಮನಸ್ಸಿಗೆ ನೆಮ್ದಿ ಇರುವುದಿಲ್ಲ.  ಇದೆಲ್ಲದರಿಂದ ಮುಕ್ತಿ ನೀಡಲು ಆನ್‌ಲೈನ್ ಡೆಲಿವರಿ ಆ್ಯಪ್‌ಗಳು ಅತ್ಯಂತ ಸಹಾಯಕ ಆಗಿವೆ.

ಆನ್‌ಲೈನ್‌ನಲ್ಲಿ ಎಲ್ಲ ವಸ್ತುಗಳ ಬೆಲೆ, ಡಿಸ್ಕೌಂಟ್, ಗುಣಮಟ್ಟ ಹಾಗೂ ಬಣ್ಣಗಳ ಬಗ್ಗೆ ಆ್ಯಪ್‌ಗಳಲ್ಲಿ ನೋಡಬಹುದು. ಯಾವ ಕಂಪನಿಯ ಯಾವ ವಸ್ತುವನ್ನು ಬೇಕಾದರೂ ಆರ್ಡರ್ ಮಾಡಿದರೆ 2-3 ದಿನಗಳಲ್ಲಿ ಮನೆ ಬಾಗಿಲಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಆನ್‌ಲೈನ್ ಸೌಲಭ್ಯ ಬೇಗನೆ ಜನಪ್ರಿಯವಾಯಿತು. ಆದರೆ, ಜನಪ್ರಿಯತೆ ಹೆಚ್ಚಾದಂತೆ ಆನ್‌ಲೈನ್ ಸೇವೆಯ ಬಗ್ಗೆ ದೂರುಗಳೂ ಹೆಚ್ಚುತ್ತಿವೆ. ಅಮೇಜಾನ್‌ನಿಂದ ವಸ್ತುವೊಂದನ್ನು ಖರೀದಿ ಮಾಡಲು ಆನ್‌ಲೈನ್ ಆರ್ಡರ್ ಮಾಡಿದ್ದ ಮಹಿಳೆ ಬಾಕ್ಸ್ ತೆಗೆಯುತ್ತಿದ್ದಂತೆ ವಾಂತಿ ಮಾಡಿಕೊಂಡು ಸುಸ್ತಾಗಿ ಬಿದ್ದಿದ್ದಾಳೆ. 

ಇದನ್ನೂ ಓದಿ: ATMನಲ್ಲಿ ಹಣ ತೆಗೆಯುವಾಗ ನಗದು ಬರೆದಿದ್ದರೆ ಏನು ಮಾಡಬೇಕು?

ಈ ಘಟನೆ ನಡೆದಿರುವುದು ಯುನೈಟೆಡ್ ಕಿಂಗ್‌ಡಮ್‌ನ ಕಿರ್ಬಿಯಲ್ಲಿ. ಕಿರ್ಬಿ ನಗರದಲ್ಲಿ ವಾಸಿಸುವ ರೇಚೆಲ್ ಮೆಕಾಡಮ್ ಅವರ ಶಾಪಿಂಗ್ ಅನುಭವ ಮಾತ್ರ ಅವರನ್ನು ಆನ್‌ಲೈನ್ ಶಾಪಿಂಗ್‌ನಿಂದ ಶಾಶ್ವತವಾಗಿ ದೂರ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಅಮೆಜಾನ್‌ ಸೈಕಲ್ ಹೆಲ್ಮೆಟ್‌ಗಾಗಿ ರೇಚೆಲ್ ಆರ್ಡರ್ ಮಾಡಿದ್ದರು. ಪಾರ್ಸೆಲ್ ಬಂದಾಗ ಕುತೂಹಲದಿಂದ ತೆರೆದ ರೇಚೆಲ್‌ಗೆ ವಾಂತಿಯಾಯಿತು. ಪಾರ್ಸೆಲ್ ತೆರೆದ ತಕ್ಷಣ ಅಸಹ್ಯವಾದ ದುರ್ವಾಸನೆ ಬಡಿಯಿತು. ನಂತರ ವಾಕರಿಕೆ ಬಂದು ವಾಂತಿಯಾಯಿತು ಎಂದು ರೇಚೆಲ್ ಹೇಳುತ್ತಾರೆ.

ಇದಾದ ನಂತರ ವಾಂತಿ ಮಾಡಿಕೊಂಡು ಸ್ವಲ್ಪ ಸುಧಾರಿಸಿಕೊಂಡ ನಂತರ ಅಸ್ವಸ್ಥತೆ ಕಡಿಮೆಯಾದಾಗ ರೇಚೆಲ್ ಮತ್ತೆ ಪಾರ್ಸೆಲ್‌ನತ್ತ ನೋಡಿದರು. ಅದರೊಳಗೆ ಕೆಲವು ಬ್ರೆಡ್‌ ತುಂಡುಗಳು ಮತ್ತು ಇಲಿಗಳ ಮಲ ಇತ್ತು. ಇದು ಹೇಗೆ ಪಾರ್ಸಲ್ ಬಾಕ್ಸ್‌ನೊಳಗೆ ಬಂದಿದೆ ಎಂದು ಹೆಲ್ಮೆಟ್ ತೆಗೆದು ನೋಡಿದರೆ ಆ ಪೆಟ್ಟಿಗೆಯ ಒಂದು ಬದಿಯಲ್ಲಿ ರಂಧ್ರ ಕಂಡುಬಂದಿದೆ. ಹೊರಗಿನ ಕಾರ್ಡ್‌ಬೋರ್ಡ್ ಮತ್ತು ಒಳಗಿನ ಪ್ಯಾಕಿಂಗ್ ನಡುವೆ ಅರ್ಧಂಬರ್ಧ ಕೊಳೆತ ಇಲಿ ಕಂಡುಬಂದಿದೆ. ಅರ್ಧ ಕೊಳೆತ ಇಲಿಯ ದುರ್ವಾಸನೆಯೇ ರೇಚೆಲ್‌ ವಾಂತಿಗೆ ಕಾರಣವಾಗಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣವಿಲ್ಲದ 5 ಜನಪ್ರಿಯ ದೇಶಗಳು, ಜನ ವ್ಯವಹರಿಸೋದು ಹೇಗೆ?

ಈ ಬಗ್ಗೆ ಹೇಳಿಕೊಂಡಿರುವ ರೇಚಲ್, ಪಾರ್ಸಲ್ ಬಾಕ್ಸ್‌ನಿಂದ ನಾನು ವಾಂತಿ ಮಾಡಿಕೊಳ್ಳುತ್ತೇನೆ ಎಂಬುದನ್ನು ನನಗೆ ನಂಬಲಾಗಲಿಲ್ಲ. ನಾನು ಪ್ರಜ್ಞೆ ತಪ್ಪಿ ಬೀಳುತ್ತೇನೆ ಎಂದು ಭಾವಿಸಿದೆ. ಅದನ್ನು ನೋಡಿದ ನಂತರ ಮತ್ತೆ ಮುಟ್ಟಲು ಸಾಧ್ಯವಾಗಲಿಲ್ಲ. ನಾನು ತಕ್ಷಣ ಹಿಂದೆ ಸರಿದೆ. ಸೈಕಲ್ ಹೆಲ್ಮೆಟ್ ಬದಲು ಸತ್ತ ಇಲಿಯ ಪಾರ್ಸೆಲ್ ಕಂಡ ಆ ರಾತ್ರಿ ನಿದ್ದೆ ಬರಲಿಲ್ಲ, ಊಟ ಮಾಡಲು ಸಾಧ್ಯವಾಗಲಿಲ್ಲ. ತಕ್ಷಣವೇ ಅಮೆಜಾನ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ದೂರು ನೀಡಿದರು. ನಂತರ ಅಮೆಜಾನ್ ರೇಚೆಲ್‌ಗೆ ಕ್ಷಮೆಯಾಚಿಸಿತು, ಡೆಲಿವರಿಯಿಂದ ಉಂಟಾದ ತೊಂದರೆಗೆ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿತು ಎಂದು ಹೇಳಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್