'ನಾನು ಭಾರತೀಯ,  ನಾನು ಕನ್ನಡಿಗ.. ವೋಟ್‌ ಇಲ್ಲದಿದ್ದರೆ ಏನಾಯ್ತು.. ಹೋರಾಟ ನಿರಂತರ'

Mar 4, 2022, 7:40 PM IST

ಬೆಂಗಳೂರು(ಮೇ. 04)  ಚಿತ್ರನಟ(Actor) ಸಾಮಾಜಿಕ ಹೋರಾಟಗಾರ (Social activist) ಚೇತನ್ ಕುಮಾರ್ (Chetan Kumar) ಬೆಂಗಳೂರು ಕಮಿಷನರ್ ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿ ಅನೇಕ ವಿಚಾರಗಳನ್ನ ಹೇಳಿದ್ದಾರೆ.

ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ಬೆಂಗಳೂರು 'ತೀಟೆ ತಾತ'!

ಗೌರಿ ಲಂಕೇಶ್ (Gauri Lankesh) ಹತ್ಯೆಯ ಬಳಿಕ ನನಗೆ ಗನ್ ಮ್ಯಾನ್ ನೀಡಲಾಗಿತ್ತು. ಇತ್ತೀಚೆಗೆ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನವಾದ ಬಳಿಕ ವಾಪಸ್ ಪಡೆಯಲಾಗಿದೆ ಮೊದಲಿನಿಂದಲೂ ನನಗೆ ಜೀವ ಬೆದರಿಕೆಯಿದೆ. ಗನ್ ಮ್ಯಾನ್ ವ್ಯವಸ್ಥೆ ನೀಡುವಂತೆ ಮನವಿ ಮಾಡಿದ್ದೇನೆ. ಮನೆ ಬಳಿ ಬೀಟ್ ವ್ಯವಸ್ಥೆ ಹೆಚ್ಚಿಸುವುದಾಗಿ ಕಮಿಷನರ್ ಭರವಸೆ ನೀಡಿದ್ದಾರೆ. OCI ರದ್ದುಪಡಿಸುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನೂ ಭಾರತೀಯ, ಕನ್ನಡಿಗನೇ, ಯಾವುದೇ ರೀತಿಯಲ್ಲೂ OCI ನಿಯಮ ಉಲ್ಲಂಘಿಸಿಲ್ಲ.. ನನಗೆ ಚುನಾವಣೆ ಸ್ಪರ್ಧಿಸುವಂತಿಲ್ಲ ,ವೋಟ್ ಮಾಡಲು ಹಕ್ಕಿಲ್ಲ. ಆದರೆ OCI ಈ ದೇಶದಲ್ಲಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬಹುದು  ಎಂದರು.