ಮನೆ ಮಗನಂತೆ ನೋಡಿಕೊಂಡಿದ್ದ ಆಳು ಮಾಡಿದ ಮನೆಹಾಳ್ ಕೆಲಸದ ಕಥೆ

Jul 14, 2022, 4:24 PM IST

ಗದಗ, (ಜುಲೈ.14): ಆತ ಕೆಲಸ ಹುಡುಕಿಕೊಂಡು ಆ ಮನೆಯ ಬಳಿ ಬಂದಿದ್ದ. ಅಯ್ಯೋ ಪಾಪ ಅಂತ ಆ ಮನೆಯ ಒಡೆಯ ಕೆಲಸ ಮಾಡಿಕೊಂಡಿರು ಅಂತ ಮನೆಯೊಳಗೆ ಜಾಗ ಕೊಟ್ಟ.  ಮನೆ ಆಳನ್ನ ಹೆತ್ತ ಮಗನಂತೆ ನೋಡ್ಕೊಂಡಿದ್ಲು ಒಡತಿ.. ಮನೆಯ ಮಕ್ಕಳು ಆಳಿನ ಜೊತೆ ಅಣ್ಣನಂತೆ ಓಡಾಡಿಕೊಂಡಿದ್ರು.. ಕೆಲಸದವ ಅಂತಾ ಬೇಧ ಮಾಡದೇ ಅಡುಗೆ ಮನೆಯಲ್ಲಿ ಕೂರಿಸಿ ಊಟ ಹಾಕಿತ್ತು..

ಚಿಕನ್, ರೊಟ್ಟಿ ತಿಂದ ಮನೆಯಲ್ಲೇ 2 ಹೆಣ ಉರುಳಿಸಿದ ಆಳು, ಬೆಚ್ಚಿಬಿದ್ದ ಗ್ರಾಮ

ಆದ್ರೆ, ಆಳು ಮನೆಹಾಳು ಕೆಲಸ ಮಾಡಿ, ಮನೆಯ ದೀಪವನ್ನೇ ಆರಿಸಿಬಿಟ್ಟ.... ಹುಷಾರಿಲ್ಲ ಅಂದವನಿಗೆ ಆಸ್ಪತ್ರೆಗೆ ಸೇರಿಸಿ ಚಿಕನ್ ಊಟ ಬಡಿಸಿ ಒಟ್ಟಿಗೆ ಮಲಗಿಸಿಕೊಂಡ್ರೆ ಮಧ್ಯ ರಾತ್ರಿ ಎದ್ದು ಅನ್ನ ಹಾಕಿದವರ ಬರುಡೆ ಹೊಡೆದುಬಿಟ್ಟಿದ್ದಾನೆ. ಹೀಗೆ ಮನೆ ಮಗನಂತೆ ನೋಡಿಕೊಂಡಿದ್ದ ಆಳು ಮಾಡಿದ ಮನೆಹಾಳ್ ಕೆಲಸದ ಕಥೆಯೇ ಇವತ್ತಿನ ಎಫ್.ಐ.ಆರ್..