Coronavirus Karnataka

ಆಶಾ ಕಾರ್ಯಕರ್ತರ ಕೆಲಸದ ಬಗ್ಗೆ ತಿಳಿ ಹೇಳಿ: ಮುಸ್ಲಿಂ ಮುಖಂಡರಿಗೆ ಸಿಎಂ ಮನವಿ

Apr 3, 2020, 6:48 PM IST

ಬೆಂಗಳೂರು(ಏ.03): ಕೊರೋನಾ ತಡೆಗೆ ಪರೀಕ್ಷೆಗೆ ಒಳಗಾಗಲೇ ಬೇಕು. ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆ ಸಮುದಾಯದ ಜನರಿಗೆ ತಿಳಿ ಹೇಳಿ ಎಂದು ಮುಸ್ಲಿಂ ಮುಖಂಡರಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಲಾಕ್ ಡೌನ್ ವೇಳೆ ಬೇಕರಿ ಓಪನ್: ಸರ್ಕಾರದಿಂದ ಹೊರಬಂದ ಅಧಿಕೃತ ಸ್ಪಷ್ಟನೆ

ಇಂದು ಮುಸ್ಲಿಂ ಮುಖಂಡರು ಹಾಗೂ ಶಾಸಕರಾದ ಸಿ.ಎಂ ಇಬ್ರಾಹಿಂ, ಜಮೀರ್ ಅಹಮ್ಮದ್, ಎನ್.ಎ. ಹ್ಯಾರಿಸ್, ರಿಜ್ವಾನ್ ಆರ್ಷದ್ ಅವರೊಂದಿಗೆ ಸಭೆ ನಡೆಸಿ ಕೊರೋನಾ ವೈರಸ್ ತಡೆಗೆ ಸಹಕರಿಸುವಂತೆ ಮನವಿ ಮಾಡಿದ್ದೇನೆ ಎಂದರು.

ಭಾರತದಲ್ಲಿ ಹೆಚ್ಚಿತು ಕೊರೋನಾ ಆಪತ್ತು, ಕಳ್ಳತನದಲ್ಲೂ ಕುಡುಕರ ನಿಯತ್ತು; ಏ.3ರ ಟಾಪ್ 10 ಸುದ್ದಿ

ಸಿಎಂ ಮನವಿಗೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜೊತೆಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.