ಟಾಕ್ಸಿಕ್​​ನಿಂದ ಕರೀನಾ ಕಪೂರ್‌ ಔಟ್: ನಾನು ಯಶ್ ತಂಗಿ ಆಗಲ್ಲ ಎಂದ ಬೇಬೋ!

May 9, 2024, 10:05 AM IST

ರಾಕಿಂಗ್ ಸ್ಟಾರ್ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಇವತ್ತಿಗೆ ಒಬ್ಬಿಬ್ಬರ ಕನಸಾಗಿಲ್ಲ. ಬಿಟೌನ್ ಬ್ಯೂಟಿ ಕರೀನಾ ಕಪೂರ್‌ ಅವರಿಂದ ಹಿಡಿದು ದೊಡ್ಡ ದೊಡ್ಡ ತಾರೆಯರು ಬಯಸ್ತಿದ್ದಾರೆ. ಹೀಗಿರುವಾಗಲೇ ರಾಕಿಭಾಯ್ ನಟನೆಯ ಮೋಸ್ಟ್ ಅನ್ ವಾಂಟೆಡ್ ಚಿತ್ರ  ಟಾಕ್ಸಿಕ್ ಅಂಗಳದಲ್ಲಿ ಬೇಬೋ ಬಣ್ಣ ಹಚ್ಚಿ ಗಹಗಹಿಸ್ತಾರೆ ಎಂಬ ಖಬರ್ ಹರಿದಾಡಿತ್ತು. ಈ ವಿಷ್ಯ ಕೇಳಿ ರಾಕಿ ಭಕ್ತಗಣ ಅಬ್ ಖುಷ್ ಹುವಾ ಅಂದಿದ್ರು. ಟಾಕ್ಸಿಕ್ ಮೂಲಕ ಕನ್ನಡಕ್ಕೆ ಕರೀನಾ ಬರ್ತಾರೆ ಅಂತ ಎಲ್ಲರ ನಿರೀಕ್ಷೆಯೂ ಆಗಿತ್ತು. ಇದೀಗ ಹೊಸ ವಿಷ್ಯ ಏನಪ್ಪ ಅಂದ್ರೆ ಬೆಬೋ ಅಣ್ತಮ್ಮಾನ ತಂಗಿಯಾಗಿ ನಟಿಸೋದಿಕ್ಕೆ ಒಲ್ಲೆ ಎಂದಿದ್ದಾಳಂತೆ. 

ಕರೀನಾ ಕಪೂರ್​​ ನಾನು ರಾಕಿಗೆ 'ಭಾಯ್' ಎನ್ನಲು ರೆಡಿ ಇಲ್ಲ  ಎಂದರೇನಂತೆ. ಕರೀನಾ ಜಾಗಕ್ಕೀಗ ನಾನ್ ಬರುತ್ತೇನೆ ಅಂತ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ಎಂಟ್ರಿಯಾಗಿದ್ದಾರಂತೆ. ಬೇಬೋ ಬದಲಿಗೆ ಸೂಪರ್ ಬ್ಯೂಟಿ ಮಾನ್ ಸ್ಟಾರ್ ಗೆ ತಂಗಿಯಾಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಟಾಕ್ಸಿಕ್ ಸಾರಥಿ ಗೀತು ಕೂಡ ಒಕೆ ಎಂದಿದ್ದು, ನಯನ್ ತಾರಾ ಇದಕ್ಕೆ ಸಮ್ಮತಿ ಸೂಚಿಸ್ತಾರಾ ಅನ್ನೋದು ಗೊತ್ತಿಲ್ಲ.  ಕೆಜಿಎಫ್ ಕಿಂಗ್ ಜೊತೆ ನಟಿಸುವ ಚಾನ್ಸ್ ಸಿಕ್ರೆ ಯಾಕೆ ಬಿಡ್ಲಿ. ನನಗೆ ರಾಕಿ ಜೊತೆ ಅಭಿನಯಿಸೋದಿಕ್ಕೆ ಇಷ್ಟ ಅಂತಾ ಸ್ವತಃ ಕರೀನಾ ಕಪೂರ್ ಹೇಳಿಕೊಂಡಿದ್ದರು. 

ಆದ್ರೀಗ ಡೇಟ್ ಹೊಂದಾಣಿಕೆ ಆಗ್ತಿಲ್ಲ. ಹೀಗಾಗಿ ಬೆಬೋ ಸುಲ್ತಾನ ಜೊತೆ ಸಿಸ್ಟರ್ ಆಗಿ ಮೆರವಣಿಗೆ ಹೊರಡಲ್ಲವಂತೆ. ಬೇರೆ ಸಿನಿಮಾಗಳಲ್ಲಿ ಸೈಫ್ ಪತ್ನಿ ಬ್ಯುಸಿಯಾಗವ್ರಂತೆ. ಹೀಗಾಗಿ ರಾಕಿ ಟಾಕ್ಸಿಕ್ ಚಿತ್ರವನ್ನು ರಿಜೆಕ್ಟ್ಮಾಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಆದ್ರೆ ಬೇಬೋ ಹೋದ್ರೇನಂತೆ. ಹೊಸ ಬೇಬಿಯನ್ನ ಕರೆ ತರುತ್ತೇವೆ ಅಂತ ಈಗ ಕರೀನಾ ಜಾಗಕ್ಕೆ ಸೌತ್​ನ ಮಾಸ್ಟರ್ ಪೀಸ್​ ನಯನತಾರಾ ಬಂದಿದ್ದಾರಂತೆ. ಈ ಬಗ್ಗೆ ಚಿತ್ರತಂಡವೇ ಅಫೀಶಿಯಲ್ ಆಗಿ ಅನೌನ್ಸ್ ಮಾಡಲಿದೆಯಂತೆ. ಒಂದಂತೂ ಸತ್ಯ ದಿನ ಕಳೆದು ಬೆಳಗಾದ್ರೆ ಸಾಕು ಟಾಕ್ಸಿಕ್ ಈಗ ಹೊಸ ಹೊಸ ಸುದ್ದಿಗಳ ಹೊರ ಬರ್ತಾನೆ ಇದೆ. ಇದು ಯಶ್ ಫ್ಯಾನ್ಸ್​​ ಅನ್ನ ಎಂಗೇಜ್ ಮಾಡುತ್ತಿದೆ.