ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ

Published : May 19, 2024, 04:03 PM IST
ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ

ಸಾರಾಂಶ

ಸೀತಾರಾಮ ಸೀರಿಯಲ್​ ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ  

ಸೀತಾರಾಮ ಸೀರಿಯಲ್​ನಲ್ಲಿ ಸೀತೆ ಮತ್ತು ರಾಮಾ ನಡುವೆ ಈಗಷ್ಟೇ ಮದುವೆ ಮಾತುಕತೆ ನಡೆಯುತ್ತಿದೆ. ಆದರೆ ಅವರ ಸ್ನೇಹಿತರಾದ  ಅಶೋಕ್​ ಮತ್ತು ಪ್ರಿಯಾ ಮದ್ವೆ ಮುಗಿದೇ ಹೋಗಿದೆ. ಈ ಮದುವೆ ಬಹು ಭರ್ಜರಿಯಾಗಿ ನಡೆದಿತ್ತು. ಸೀರಿಯಲ್​ನಲ್ಲಿ ಪ್ರೀತಿಸಿ ವಿವಾಹ ಆಗಿರೋ ಈ ಜೋಡಿಯ ಮದುವೆ ರಿಯಲ್​ ಮದುವೆಗಿಂತಲೂ ಸಂಭ್ರಮದಿಂದಲೇ ನಡೆದಿತ್ತು.  ಇದರ ಮೇಕಿಂಗ್​ ವಿಡಿಯೋ ಅನ್ನು ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿತ್ತು. ಶೂಟಿಂಗ್​ ಸಮಯದಲ್ಲಿ ಏನೆಲ್ಲಾ ಆಯಿತು, ಏನೆಲ್ಲಾ ತಮಾಷೆ ನಡೆಯಿತು ಎನ್ನುವುದನ್ನು ಇದರಲ್ಲಿ ತೋರಿಸಲಾಗಿತ್ತು. 

ಅಷ್ಟಕ್ಕೂ, ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ   ಪ್ರಿಯಾ ಮತ್ತು ಅಶೋಕ್ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.

ಸೀತಾರಾಮ ಸೀರಿಯಲ್​ ಅಶೋಕ್​- ಪ್ರಿಯಾ ರೀಲ್​ ಮದ್ವೆಗೂ ಇಷ್ಟೊಂದು ಖರ್ಚಾ? ವಿವಾಹದ ಮೇಕಿಂಗ್​ ವಿಡಿಯೋ ವೈರಲ್​

ಇದೀಗ ಫಸ್ಟ್​ನೈಟ್​ ಶೂಟಿಂಗ್​ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಪ್ರಿಯಾ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪ್ರಿಯಾ ಅವರ ರಿಯಲ್​ ಹೆಸರು ಮೇಘನಾ ಶಂಕರಪ್ಪ. ಕೆಲ ದಿನಗಳ ಹಿಂದೆ ಇವರು,  ಸೀತಾರಾಮ ಸೀರಿಯಲ್​ನಲ್ಲಿ ಮದುಮಗಳಾಗಿ ಹೇಗೆ ಫೋಟೋಶೂಟ್​ ಮಾಡಿಸಿಕೊಂಡಿದ್ದೆ ಎಂಬ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದರು. ರಿಯಲ್​ ಮದ್ವೆಯ ರೀತಿಯಲ್ಲಿಯೇ ಪ್ರಿಯಾ ಫೋಟೋಶೂಟ್​ ಮಾಡಿಸಿಕೊಂಡಿರುವ ವಿಡಿಯೋ ಶೇರ್​ ಮಾಡಿದ್ದರು.   ನಿಜವಾದ ಮದುವೆಯ ರೀತಿಯಲ್ಲಿಯೇ ಇದನ್ನು ಬಿಂಬಿಸಲಾಗಿದೆ. ಇದೀಗ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು ಎನ್ನ್ಉವುದನ್ನು ತೋರಿಸಿದ್ದಾರೆ.

ನಿಜವಾದ ಮದುವೆಯಂತೆ ಫಸ್ಟ್​ನೈಟ್​ ಸೆಲೆಬ್ರೇಷನ್​ ಕೂಡ ಸೀರಿಯಲ್​ನಲ್ಲಿ ಜೋರಾಗಿ ನಡೆದಿತ್ತು. ಅಲ್ಲಿ ಅಲಂಕಾರ ಕೂಡ ರಿಯಲ್​ನಂತರಯೇ ಮಾಡಲಾಗಿತ್ತು. ಭರ್ಜರಿಯಾಗಿ ಹಾಸಿಗೆಯನ್ನು ಡೆಕೋರೇಷನ್​  ಮಾಡಲಾಗಿತ್ತು. ಶೂಟಿಂಗ್​ ಮಧ್ಯೆ ಬಂದ ಅಶೋಕ್​, ಫಸ್ಟ್​ನೈಟ್​ ಮುಗೀತು ಎಂದು ಎಲ್ಲರಿಗೂ ತಮಾಷೆ ಮಾಡಿದರು. ಅಂದಹಾಗೆ ಅಶೋಕ್ ಪಾತ್ರದಲ್ಲಿ ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma). ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡಿರುವ ಅಶೋಕ್, ಸದ್ಯ ಸೀತಾರಾಮದ ಅಶೋಕ್ ಪಾತ್ರದ ಮೂಲಕ ಕನ್ನಡದ ಮನೆಮನಗಳಿಗೆ ತಲುಪಿದ್ದಾರೆ.

ಹೆಣ್ಮಕ್ಳಿಗೆ ಅರ್ಧ ಹೋದ್ರೆ ನೋವಾಗತ್ತೆ, ಪೂರ್ತಿ ಹೋದ್ರೆ ಖುಷಿಯಾಗತ್ತೆ: ಸೀತಾರಾಮ ಟೀಂನಿಂದ ಹೀಗೊಂದು ಪ್ರಶ್ನೆ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!