ವಿದೇಶಿ ಯೂಟ್ಯೂಬ್ ಚಾನೆಲ್​ನಲ್ಲಿ ದಾಖಲೆ ಬರೆದ ರಾಮ್ ಚರಣ್, ಉಪಾಸನಾ ದಂಪತಿ..!

Apr 23, 2023, 5:43 PM IST

ಆಸ್ಕರ್ ರೆಡ್ ಕಾರ್ಪೆಟ್ ನ ಸಂಭ್ರಮದ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರಲ್ಲಿ ರಾಮ್ ಚರಣ್ ಹಾಗೂ ಉಪಾಸನಾವಿಡಿಯೋ ಹಾಗೂ ಚಿತ್ರಗಳು ತುಸು ಹೆಚ್ಚಾಗಿಯೇ ವೈರಲ್ ಆಗಿದ್ದವು.ಆಸ್ಕರ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ರಾಮ್ ಉಪಾಸನಾ ಜೋಡಿ ಕಾರ್ಯಕ್ರಮಕ್ಕೆ ತಯಾರಾದ ವಿಡಿಯೋ ವನ್ನು ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.ಈ ವಿಡಿಯೋ ವ್ಯಾನಿಟಿ ಫೇರ್ ಯೂಟ್ಯೂಬ್ ನಲ್ಲಿ 6.5 ಮಿಲಿಯನ್ಸ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿದೆ. ಈ ಯೂಟ್ಯೂಬ್ ಚಾನೆಲ್ ನಲ್ಲಿ ಅತಿ ಹೆಚ್ಚು ವೀವ್ಸ್ ಪಡೆದಿರುವುದು ಇದೇ ವಿಡಿಯೋ ಅನ್ನೋದೇ ವಿಶೇಷ.