ಮಾನಸಾಗೆ ನೀಚ ಪದ ಬಳಸಿದ ಜಗದೀಶ್‌, ತಿರುಗಿಬಿದ್ದ ಮನೆ, ಶೋ ನಡೆಸಲು ಬಿಡಲ್ಲವೆಂದು ಬಿಗ್‌ಬಾಸ್‌ಗೆ ವಕೀಲನ ಚಾಲೆಂಜ್!

By Gowthami K  |  First Published Oct 3, 2024, 2:40 AM IST

ಬಿಗ್‌ಬಾಸ್‌ ಕನ್ನಡ 11 ರಲ್ಲಿ ಲಾಯರ್ ಜಗದೀಶ್ ಅವರ ನಡವಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಸ್ಪರ್ಧಿ ಮಾನಸ ಅವರೊಂದಿಗಿನ ಜಗಳದಲ್ಲಿ 'ಯಾವ ಸೀಮೆ ಹೆಂಗಸು' ಎಂಬ ಅವರ ಪದ ಬಳಕೆಗೆ ಇತರ ಸ್ಪರ್ಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಿಗ್‌ಬಾಸ್‌ ಮನೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.


ಬಿಗ್‌ಬಾಸ್‌ ಕನ್ನಡ 11 ನ  ಅತೀ ಕಿರಿಕ್ ಪಾರ್ಟಿ ಎಂದರೆ ಅದು ಲಾಯರ್ ಜಗದೀಶ್, ಈ ಬಾರಿ ವೀಕೆಂಡ್‌ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಅವರಿಗೆ ಕ್ಲಾಸ್‌ ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಸರಿ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲ ಬಿಗ್‌ಬಾಸ್ ಶೋ ನಡೆಸಲು ನಾನು ಬಿಡುವುದಿಲ್ಲ ಎಂದು ಜಗದೀಶ್ ಚಾಲೆಂಜ್ ಹಾಕುತ್ತಿರುವುದು ಕಂಡುಬಂದಿದೆ.

ತಕ್ಕಡಿ ಭಾಗ್ಯ ಎಂಬ ಟಾಸ್ಕ್ ನಲ್ಲಿ ಉಗ್ರಂ ಮಂಜು ಟಾಸ್ಕ್‌ ಗೆದ್ದು ಸೇಫ್ ಆಗಿದ್ದಾರೆ. ಈ ಟಾಸ್ಕ್ ನೋಡಿಕೊಳ್ಳುವ ಉಸ್ತುವಾರಿಯನ್ನು ಧನ್‌ರಾಜ್ ಆಚಾರ್ಯ ಅವರಿಗೆ ನೀಡಲಾಗಿತ್ತು. ಈ ವೇಳೆ ಲಾಯರ್ ಜಗದೀಶ್ ಮತ್ತು ಧನ್‌ರಾಜ್ ಮಧ್ಯೆ ವಾಗ್ವಾದ ನಡೆಯಿತು. ಟಾಸ್ಕ್‌ ಮುಗಿದ ನಂತರ ಮನೆಯೊಳಗೆ ಬಂದ ಜಗದೀಶ್ ಮತ್ತೆ ಧನ್‌ರಾಜ್ ವಿಚಾರದಲ್ಲಿ  ಅವನು ಇಷ್ಟುದ್ದ ಇದ್ದಾನೆ ಹೊಡಿಲಿಕ್ಕೆ ಬರ್ತಾನೆ ಎಂದು ನರಕವಾಸಿಗಳ ಬಳಿ ಹೇಳಲು ಹೊರಟಾಗ ಬಾಡಿ ಶೇಮಿಂಗ್ ಮಾಡಬೇಡಿ ಎಂದು ಇತರ ಸ್ಪರ್ಧಿಗಳು ಹೇಳಿದರು

Tap to resize

Latest Videos

undefined

ಕೆಣಕಿದ ಜಗದೀಶ್ ವಿರುದ್ಧ ರೆಬೆಲ್‌ ಆದ ಧನ್‌ರಾಜ್, ಚುಚ್ಚಿದ ವಕೀಲರಿಗೆ ಮೈಮ್‌ ಮೂಲಕ ಉತ್ತರ ಕೊಟ್ಟ ಕಾಮಿಡಿಯನ್ ಧನು

ಅದಕ್ಕೆ ಜಗದೀಶ್ ಬಿಟ್ಟು ಬಿಡಿ ಅನ್ನೋದು ಬೇರೆ ತರ, ನಮ್ಮ ಇಮೇಜ್ ಬೇರೆ ತರ ಇದೆ. ಆಟ  ಆಡಬೇಕು ಇಲ್ಲ ಬೇಡ ಅನ್ನಬೇಕು. ಕಾಮಿಡಿ ಪೀಸ್ ಥರ ನನ್ನ ಹತ್ರ ಆಡಿದ್ರೆ ಅವನು. ಎಂದಾಗ ಮಾನಸ ಅವರು ಪದೇ ಪದೇ ಹಾಗೆ ಅನ್ನಿಬೇಡಿ ಸರ್, ಯಾಕೆ ಸುಮ್ಮನೆ ಎಂದರು. ಇದಕ್ಕೆ ಜಗದೀಶ್ ನಾನು ನಿನ್ನನ್ನು ಇಲ್ಲಿ ಮೆಚ್ಚಿಸಲು ಬಂದಿಲ್ಲ, ಬೇಜಾರು ಆದರೆ ಆಚೆ ಹೋಗ್ತೀವಿ ಎಂದರು. ಇದಕ್ಕೆ ಮಾನಸ ಕಾಮಿಡಿ ಪೀಸ್ ಅಂದ್ರೆ ಸುಮ್ಮನೆ ವೇಸ್ಟ್ ಅಲ್ಲ. ನೂರು ಜನವನ್ನು ನಗಿಸುತ್ತಾರೆ. ಸಾವಿರ ಟೆನ್ಸನ್ ಇದ್ದರೂ ನಗಿಸುತ್ತಾರೆ. ಎಷ್ಟು ಸಲ ಆ ಮಾತನ್ನು ಹೇಳುತ್ತೀರಿ. ನೀವು ಫೋಕಸ್‌ ಆಗಬೇಕೆಂದು ಸುಮ್ನೆ ಹೇಳೋದಲ್ಲ, ನೀನು ಮರ್ಯಾದೆಗೆ ಬೆಲೆ ಕೊಟ್ಟಷ್ಟು ಅತಿಯಾಗಿ ಮಾತನಾಡುತ್ತಿದ್ದೀಯಾ. 

ಇದಕ್ಕೆ ಉತ್ತರ ಕೊಟ್ಟ ಜಗದೀಶ್ ಏನ್ ಟೆಕ್ಷನ್ ನಿಂಗೆ, ಮರ್ಯಾದಿ ಇಲ್ಲದಕ್ಕೆ ನಾವು ಕೊಟ್ಟಿರೋ ಬಿಸಿ ನೀರು ಅದು ಇದು ತೆಗೆದುಕೊಂಡಿರುವುದು. ಅದು ಮೋಸ ನೀನು ಮಾಡೋದು ಎಂದು ಜಗಳ ಆರಂಭವಾಯ್ತು. ಇದಕ್ಕೆ ಟಕ್ಕರ್ ಕೊಟ್ಟ ಮಾನಸ, ನಾನ್ಯಾಕೆ ಮೋಸ ಮಾಡ್ಲಿ ಅದು ಗೇಮ್, ನನ್ನ ಕೆಲಸವೇ ಅದು.  ನಾನು ಮಾಡೇ ಮಾಡ್ತಿನಿ ಸುಮ್ನೆ ಕರೆಸಿಲ್ಲ ನಮ್ಮನ್ನಿಲ್ಲಿಗೆ, ತಿಂದುಕೊಂಡು ಉಂಡುಕೊಂಡು ಹೋಗಲು ಎಂದಾಗ 
ಜಗದೀಶ್: ಗೇಮ್‌ ತರಾ ಆಡು
ಮಾನಸ: ಗೇಮ್ ತರ ನೀನಾಡಯ್ಯ, ಮೊದ್ಲು, ನಂಗೇಳಿವಂತೆ.
ಜಗದೀಶ್: ನಿನ್ನಾಟ ನಾನು ನೊಡ್ಕೋಳಿಲ್ವಾ?
ಮಾನಸ: ಆಯ್ತು, ನೋಡ್ಕಾ, ನೋಡ್ಕಲೇ...
ಜಗದೀಶ್: ನಿನ್ನ ಆಟ ನಾನು ನೋಡಿದ್ದೀನಿ ನೀನು ಹೋಗಮ್ಮ ಹೇ... ನಾನು ನೋಡಿದ್ದೀನಿ ಹೇ ಹೋಗ.. ಹೇ.. ಹೋಗ ಏನೀವಾಗ?
ಮಾನಸ: ಕಾಮಿಡಿ ಪೀಸ್ ಅನ್ನೋಕೆ, ನಾವೇನು ಇವರ ಮನೆ ನಾಯಿನಾ?
ಜಗದೀಶ್: ಏಯ್, ನಿನ್ನ ಯೋಗ್ಯತೆಗೆ ಮಾತಾಡು ನನ್ನ ಯೋಗ್ಯತೆಗೆ ಬರಬೇಡ.. ಹೋಗಲೇ ಅಂತಿದಾಳೆ. ಆಕೆಯ ಕ್ಯಾಪಾಸಿಟಿ ಏನು? ಯಾರಾಕೆ ಹೋಗಲೇ ಅನ್ನೋಕೆ ಯಾರು? ಅಲಾ ಯಾವ ಸೀಮೆ ಹೆಂಗಸವಳು....

ಸ್ವರ್ಗದಲ್ಲಿ ನರಕದ ಕಿಡಿ ಹಚ್ಚಿದ ಜಗದೀಶ್‌, ಉಗ್ರಂ ಮಂಜು ಬೆಡ್‌ರೂಂ ಅವತಾರಕ್ಕೆ ಬೆಚ್ಚಿಬಿದ್ದ ಧನ್‌ರಾಜ್‌!

ಯಾವ ಸೀಮೆ ಹೆಂಗಸು ಅವಳು ಎಂದಿದ್ದೇ ತಡ ಮನೆಯಲ್ಲಿದ್ದ ಶಿಶಿರ್, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ರಂಜಿತ್, ಗೋಲ್ಡ್ ಸುರೇಶ್, ತ್ರಿವಿಕ್ರಮ್ ಸೇರಿ ಎಲ್ಲರೂ ಜಗದೀಶ್ ಅವರ ಬಳಿ ಸೀಮೆ ಹೆಂಗಸು ಅಂತ ಹೇಗೆ ಹೇಳ್ತೀಯಾ? ಎಂದು ವಿರೋಧಿಸಿ ದೊಡ್ಡ ಗಲಾಟೆಗೆ ನಡೆಸಿದರು. ಓರ್ವ ಹೆಂಗಸಿಗೆ ಕರೆಕ್ಟ್ ಮರ್ಯಾದೆ ಕೊಟ್ಟು ಮಾತನಾಡು ಎಂದು ಉಗ್ರಂ ಮಂಜು ಎದೆಯುಬ್ಬಿಸಿ ನಿಂತರು. ಇದ್ಕೆ ನೀನು ಮಾತನಾಡ್ಬೇಡ ಲೇ, ಹೋಗ ಲೇ  ಸೀಮೆಗಿಲ್ಲದಿರುವ ಪ್ರ್ಯಾಂಕ್ ನಿಂದು, ನಿನ್ನ ಯೋಗ್ಯತೆಗೆ ಹೇಳಿದ್ದು,  ನಿನ್ನನ್ನು ಪ್ರ್ಯಾಂಕ್ ಮಾಡೋಕೆ ಕಳಿಸಿದ್ದ ಇಲ್ಲಿ? ಆಟ ಆಡೋಕೆ ಕಳಿಸಿದ್ದು ಎಂದು ಜಗದೀಶ್ ಉತ್ತರಿಸಿದರು.

ಬೇಸರಿಸಿಕೊಂಡ ಹೋದ ತುಕಾಲಿ ಮಾನಸ ನಿಮ್ಮ ಅಮ್ಮಂಗೆ ಹೋಗಿ ಇದೇ ಮಾತನ್ನು ಹೇಳು ಆಕೆ ತುಂಬಾ ಖುಷಿ ಪಟ್ಟು ಮುದ್ದಾಡ್ತಾಳೆ. ಅಟೆನ್ಷನ್ ಬೇಕೆಂದು ಬಾಯಿಗೆ ಬಂದಾಗೆ ಮಾತಾಡೋಕೆ ಇವನ ಮನೆ ನಾಯಿನಾ ನಾನು? ಎಷ್ಟು ಹೊತ್ತಿಂದ ಕೇಳಿಸಿಕೊಳ್ಳಬಹುದು. ಕಾಮಿಡಿ ಪೀಸ್ ಅಂತ ಹೇಳಿದರು.  ನರಕವಾಸಿಗಳು ಮಾನಸಾರನ್ನು ಸಮಾಧಾನ ಪಡಿಸಿದರು. 

ಹೊರಗಡೆ ಬಂದು ತ್ರಿವಿಕ್ರಮ್ ಮತ್ತು ಶಿಶರ್ ಬಳಿ ಮಾತನಾಡಿದ ಜಗದೀಶ್ ಹೆಣ್ಣು ಮಕ್ಕಳು ಟಾಪ್ , ಗಂಡು ಮಕ್ಕಳಿಗೆ ಏನು ಬೇಕಾದರು ಅನ್ನಬಹುದು ಎಂದು
 ಎಲ್ಲೂ ಬರೆದಿಲ್ಲ. ಇದಕ್ಕೆ ಉತ್ತರ ಕೊಟ್ಟ ತ್ರಿವಿಕ್ರಮ್ ಒಂದು ಇರುವೇನು ಕಚ್ಚಲ್ಲ ತೊಂದರೆ ಕೊಡದೆ ಅದು ಅದರ ಪಾಡಿಗೆ ಅದು ಹೋಗುತ್ತೆ ಎಂದರು. ಜಗದೀಶ್: ನೀವೆಲ್ಲ ಮೇಲಿಂದ ಉದುರಿದ್ದೀರಿ, ನಾವೆಲ್ಲ ಕೆಳಗಡೆಯಿಂದ ಬಂದವರು.
ತ್ರಿವಿಕ್ರಮ್ : ನೀವೆಲ್ಲಿಂದ ಬಂದ್ರೋ ನಾವು ಅಲ್ಲಿಂದ ಬಂದವರು
ಜಗದೀಶ್: ಆಯ್ತು ನಿನ್ನತ್ರ ಮಾತಾಡೋ ಅವಶ್ಯಕತೆ ಇಲ್ಲ. 
ತ್ರಿವಿಕ್ರಮ್: ಬೇಡ
ಜಗದೀಶ್: ನೀನು ಅವರನ್ನು ವಹಿಸಿಕೊಂಡು ಮಾತನಾಡಬೇಡ
ತ್ರಿವಿಕ್ರಮ್: ನಾನು  ಯಾರನ್ನೂ ವಹಿಸಿಕೊಂಡು ಮಾತನಾಡಿಲ್ಲ
ಜಗದೀಶ್: ಏನ್‌ ಏನ್‌ , ನೀನು ಹೊಡೆಯೋಕೆ ಬಂದಿ ನನಗೆ (ಶಿಶಿರ್)
ಶಿಶಿರ್ : ನಾನೆಲ್ಲಿ ಹೊಡೆಯೋಕೆ ಬಂದೆ ಸರ್, ಬೇಡ ಬಿಡಿ ಸರ್‌ ಅಂತ ಗೌರವ ಕೊಟ್ಟು ಮಾತನಾಡಿದ್ದೇನೆ
ಜಗದೀಶ್: ಸಾರ್ ಅಂದಿಲ್ಲ ಬ್ರದರ್‌
ಶಿಶರ್: ಸಾರ್ ಅಂದಿಲ್ವಾ ಇವರಿಗೆ(ಮನೆಯವರ ಬಳಿ), ಬೇಡ ಸರ್ ಅಂತಾನೇ ಹೇಳಿದ್ದೇನೆ

ಕೂಡಲೇ ಬಳಿ ಬಂದ ನರಕವಾಸಿಗಳು ಅವರಿಬ್ಬರ ಮಾತು ಗಲಾಟೆಗೆ ತಿರುಗಬಾರದೆಂದು ಶಿಶರ್‌ ನನ್ನು ಕರೆದುಕೊಂಡು ಹೊರ ಹೋದರು. ಇನ್ನು ಬಿಗ್‌ಬಾಸ್ ಕ್ಯಾಮಾರ ಮುಂಧೆ ಬಂದು ಮಾತನಾಡಿದ ಹಂಸಾ ಅವರು, ಟೀಂ ಅಲ್ಲಿ ಇದ್ದುಕೊಂಡು ನಮಗೆಲ್ಲ ಡಿಚ್‌ ಮಾಡೋದೆ ಕಂಡೆಂಟಾ? ಹೇಳಿ? ಗೇಮ್ ಆಡೋಕೆ ಶಕ್ತಿ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟರು.

ಇನ್ನು ನಾಳಿನ ಪ್ರೋಮದಲ್ಲಿ ಇದೇ ಗಲಾಟೆ ಮುಂದುವರೆದಂತೆ ಕಾಣುತ್ತಿದೆ. ಮೀಸೆ ಎತ್ತಿಹಿಡಿದವನು ಯಾವನೇ ಆಗಿರಬಹುದು. ಇದುವರೆಗೂ ಬಿಟ್ಟಿಲ್ಲ. ಎಂದು ಬಿಗ್‌ಬಾಸ್‌ ಗೆ ಜಗದೀಶ್ ಚಾಲೆಂಜ್ ಮಾಡಿದಂತಿದೆ. ಜಗದೀಶ್ ಮೇಲೆ ಕೋಪಗೊಂಡಿರುವ ರಂಜಿತ್ ಕೊಡೋ ಮರ್ಯಾದೆ ಈಗ ತೆಗೆದುಕೊಳ್ಳಿಲ್ಲ ಅಂದರೆ ಇದಕ್ಕೆ ಸಮ ಎಂದು ಕಾಲಿನ ಚಪ್ಪಲಿಗೆ ಹೊಡೆಯುವುದು ಕಾಣುತ್ತಿದೆ. ಇದಕ್ಕೆ ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗಿದೆ. ನನಗೆ ನಾನೇ ಬಿಗ್‌ಬಾಸ್‌ , ನನ್ನು ಹೊರಗೆ ಕಳಿಸಿದರೆ ಉತ್ತಮ ಎಂದು ಗಾಭೀರ್ಯದಿಂದ ಕುಳಿತು ಜಗದೀಶ್ ಹೇಳುತ್ತಿದ್ದಾರೆ. ಮಾತ್ರವಲ್ಲ ಹೊರಗೆ ಹೋದ ಮೇಲೆ ಬಿಗ್‌ಬಾಸ್ ಶೋ ಚೆನ್ನಾಗಿ ನಡೆಸಲು ನಾನು ಬಿಡುವುದಿಲ್ಲ ಎಂದು ಚಾಲೆಂಜ್‌ ಮಾಡಿದ್ದಾರೆ ಜಗದೀಶ್! 

click me!