Jawan: ಬಾಲಿವುಡ್‌ ಕಿಂಗ್‌ಖಾನ್‌ ಶಾರುಖ್ ಸಿನಿಮಾದ ವಿರುದ್ಧ ಕನ್ನಡಿಗರ ಆಕ್ರೋಶ

May 10, 2023, 1:37 PM IST

'ಪಠಾಣ್' ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಬಾಲಿವುಡ್‌ ಕಿಂಗ್‌ಖಾನ್‌ ಶಾರುಖ್ ಖಾನ್ 'ಜವಾನ್' ಆಗಿ ಬರುತ್ತಿದ್ದಾರೆ. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಜವಾನ್ ಚಿತ್ರ ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ. ಇದೀಗ ಈ  ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಜವಾನ್‌ ಚಿತ್ರತಂಡದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಶಾರುಖ್, ನಯನತಾರಾ ನಟನೆಯ ‘ಜವಾನ್’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಯಾಗಿದ್ದು, ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಇನ್ನು ಈ ಸಿನಿಮಾವು ಸೆಪ್ಟೆಂಬರ್ ಏಳನೇ 7ರಂದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಮಲಯಾಳಂ- ಕನ್ನಡ ಭಾಷೆಗಳಲ್ಲಿ ಡಬ್ ಮಾಡದ ಕಾರಣ ಜವಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಸದ್ಯ ಅಟ್ಲಿ ನಿರ್ದೇಶನದ ಜವಾನ್‌ನಲ್ಲಿ ಶಾರುಖ್ ಖಾನ್, ನಯನತಾರಾ, ಹಾಸ್ಯ ನಟ ಯೋಗಿ ಬಾಬು ನಟಿಸಿದ್ದಾರೆ. ತಮಿಳಿನ ಸ್ಟಾರ್ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.