
ಬೀದರ್(ಅ.02): ಹಾಡಹಗಲೇ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ಸರ ಕಿತ್ತುಕೊಂಡ ಹೋದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ಇಂದು(ಬುಧವಾರ) ನಡೆದಿದೆ. ನಗರದ ಪಾರ್ವತಿ ಕ್ಲೀನಿಕ್ ಬಳಿ ಮಹಿಳೆ ಒಬ್ಬರೆ ಹೋಗುತ್ತಿರೋದನ್ನ ಗಮನಿಸಿದ ಖದೀಮರು ಬೈಕ್ ಮೇಲೆ ಬಂದು 16 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬಸವಕಲ್ಯಾಣ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಎರಡು ದಿನಗಳಿಂದ ಗ್ರಂಥಪಾಲಕರಿಗೆ ತರಬೇತಿ ನಡೆಯುತ್ತಿದ್ದು, ತರಬೇತಿಗಾಗಿ ಆಗಮಿಸಿದ್ದ ಉಜಳಂಬ ಗ್ರಾಮದಲ್ಲಿ ಗ್ರಂಥಪಾಲಕಿ ಕಿಟ್ಟಾ ಗ್ರಾಮದ ಮಾಲಾಶ್ರೀ ಎಂಬ ಮಹಿಳೆ ಸರವನ್ನ ಖದೀಮರು ಕದ್ಯೊಯ್ದಿದ್ದಾರೆ.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಸೆ ತೋರಿಸಿ ₹28.40 ಲಕ್ಷ ಪಂಗನಾಮ
ಮಹಿಳೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಬೆಳಿಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ನಗರವಾಸಿಗಳು ಆತಂಕಕೊಳಗಾಗಿದ್ದು, ಕೂಡಲೇ ಖದೀಮರನ್ನ ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ