ಮುಡಾ ನಿವೇಶನ ಹಿಂತಿರುಗಿಸಿದ್ದು ಖಂಡಿತ ಸರಿಯಲ್ಲ: ಸಿದ್ದು ತಪ್ಪಿನ ಮೇಲೆ ತಪ್ಪನ್ನು ಮಾಡ್ತಿದ್ದಾರೆ, ಅಶೋಕ್

By Girish GoudarFirst Published Oct 2, 2024, 9:50 PM IST
Highlights

ನಾನು ಕುಮಾರಸ್ವಾಮಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ಅವರು ಹೇಳಿರುವುದು ಸರಿಯಿದೆ. ನಿವೇಶನವನ್ನು ವಾಪಸ್ ಪಡೆಯುವಾಗ ಅದರದ್ದೇ ಆದಂತಹ ಪ್ರಕ್ರಿಯೆಗಳಿದೆ. ಅದೇ ರೀತಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾಡುವುದಲ್ಲ: ವಿಪಕ್ಷ ನಾಯಕ ಆರ್.ಅಶೋಕ್
 

ಬೆಂಗಳೂರು(ಅ.02): ಮುಡಾ ನಿವೇಶನ ಸಿಎಂ ಪತ್ನಿ ಪಾರ್ವತಿ ಹಿಂತಿರುಗಿಸಿದ್ದು ಖಂಡಿತ ಸರಿಯಲ್ಲ. ಸಿಎಂ ಸಿದ್ದರಾಮಯ್ಯ ತಪ್ಪಿನ ಮೇಲೆ ತಪ್ಪನ್ನು ಮಾಡುತ್ತಿದ್ದಾರೆ. ನಿಜಕ್ಕೂ ಕೂಡ ಆ ಖಾಲಿ ನಿವೇಶನಗಳ ಬೆಲೆ ಎಷ್ಟು ಎಂಬುದೇ ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಮಾತನಾಡುವಾಗ ಹಿಂದೆಯಿಂದ ಯಾರೋ ಹೇಳಿ ಕೊಟ್ರು. ಅದನ್ನು ಸಿದ್ದರಾಮಯ್ಯ ಹೇಳಿ ಬಿಟ್ರು. 62 ಕೋಟಿ ಅಂದು ಬಿಟ್ರು. ಜನರಿಗೆ ಇದು ಗಾಬರಿಯಾಗಿದೆ. ನಾವೆಲ್ಲೋ 10 ಲಕ್ಷವೋ, 50 ಲಕ್ಷವೋ ಅಂದುಕೊಂಡರೆ. ಅದು 62 ಕೋಟಿ ಅಂತಾರೆ ಎಂದು ಜನ ಗಾಬರಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಆರ್.ಅಶೋಕ್ ಅವರು, ಆಮೇಲೆ ನೇರವಾಗಿ ನಿಬೇಶನ ಹಂಚಿಕೆ ಸಂದರ್ಭದಲ್ಲಿ ಮುಡಾ ಬೋರ್ಡ್ ಮೀಟಿಂಗ್ ನಡೆಸಿತ್ತು. ಅದಾದ ಮೇಲೆ ಮೀಟಿಂಗ್ ಮಾಡಿಯೇ ವಾಪಸ್ ಪಡೆಯಬೇಕು. ಈಗ ಕೋರ್ಟ್‌ನಲ್ಲಿರುವ ಪ್ರಕರಣ ಹೇಗೆ ಸೈಟ್ ವಾಪಸ್ ಪಡೆಯಲು ಸಾಧ್ಯ?. ಪತ್ನಿಯ ಹೆಸರಿನ ಸೈಟನ್ನು ಮಗ ಪತ್ರ ತೆಗೆದುಕೊಂಡು ಹೋಗಿ ಕೊಟ್ಟರೇ ಸರಿಯಾಗುತ್ತಾ?. 4 ಗಂಟೆಗೆ ಪತ್ರ ಸಿಗುತ್ತದೆ. 6 ಗಂಟೆಗೆ ಸೈಟ್ ವಾಪಸ್ ಪಡೆಸಿದ್ದೇವೆ ಅಂತಾರೆ. ಇದು ಸಾಮಾನ್ಯ ಜನತೆಗೆ ನಡೆಯುತ್ತಾ? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ. 

Latest Videos

ರಾಜೀನಾಮೆ ಕೊಟ್ಟು ಸಿದ್ದರಾಮನ ಹುಂಡಿಗೆ ಪಲಾಯನ ಮಾಡಿದರೆ ಒಳಿತು: ಸಿದ್ದು ವಿರುದ್ಧ ಹರಿಹಾಯ್ದ ಬಿಜೆಪಿ

ಮುಡಾ ಅಧ್ಯಕ್ಷರನ್ನು ಬಂಧಿಸಬೇಕೆಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್‌, ನಾನು ಕುಮಾರಸ್ವಾಮಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತೇನೆ. ಅವರು ಹೇಳಿರುವುದು ಸರಿಯಿದೆ. ನಿವೇಶನವನ್ನು ವಾಪಸ್ ಪಡೆಯುವಾಗ ಅದರದ್ದೇ ಆದಂತಹ ಪ್ರಕ್ರಿಯೆಗಳಿದೆ. ಅದೇ ರೀತಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾಡುವುದಲ್ಲ ಎಂದು ತಿಳಿಸಿದ್ದಾರೆ. 
ನಾಲ್ವರು ಸಚಿವರ ಜಂಟಿ ಸುದ್ದಿಗೋಷ್ಠಿ ವಿಚಾರದ ಬಗ್ಗೆ ಅಶೋಕ್‌ ಅವರು, ಈ ಬಗ್ಗೆ ನಾಳೆ ಬೆಳಿಗ್ಗೆ 9:45 ಕ್ಕೆ ತಮ್ಮ ಖಾಸಗಿ ನಿವಾಸದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿ, ತಮ್ಮ ವಿರುದ್ಧದ ಆರೋಪಕ್ಕೆ ಉತ್ತರಿಸಲಿದ್ದಾರೆ. 

click me!