ಮಾಜಿ ಪತ್ನಿ ಜೊತೆ ಕುಳಿತು ‘ವೆಟ್ಟೈಯನ್​’ ಸಿನಿಮಾ ನೋಡಿದ ನಟ ಧನುಷ್!

Oct 12, 2024, 11:38 AM IST

ನಟ ಧನುಷ್​ ಹಾಗು ರಜನಿಕಾಂತ್ ಮಗಳು ಐಶ್ವರ್ಯ 2022ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇಧನ ಕೊಟ್ಟಿದ್ರು. ಇದೀಗ ನಿನ್ನೆಯಷ್ಟೆ ಬಿಡುಗಡೆ ಆಗಿದ್ದ ರಜನಿಕಾಂತ್​​ರ ವೆಟ್ಟೈಯನ್​ ಸಿನಿಮಾವನ್ನ ಚಿತ್ರಮಂದಿರದಲ್ಲಿ ಒಟ್ಟಿಗೆ ಕೂತು ನೋಡಿದ್ದಾರೆ ಧನುಷ್ ಹಾಗು ಐಶ್ವರ್ಯ. ಈ ವೀಡಿಯೋ ವೈರಲ್ ಆಗುತ್ತಿದ್ದು, ಧನುಷ್​ ಐಶ್ವರ್ಯ ಮತ್ತೆ ಒಂದಾಗಿ ದಾಂಪತ್ಯ ಶುರು ಮಾಡಿದ್ರಾ ಅನ್ನೋ ಚರ್ಚೆ ನಡೆಯುತ್ತಿದೆ. 

"ಜಸ್ಟ್ ಮ್ಯಾರೀಡ್" ಟೀಸರ್ ಮೆಚ್ಚಿದ ದಕ್ಷಿಣ ಭಾರತದ ದಿಗ್ಗಜರು..!: ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ "ಜಸ್ಟ್ ಮ್ಯಾರೀಡ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೌತ್ ಸಿನಿ ದುನಿಯಾದ ದಿಗ್ಗಜರಾದ ರಿಯಲ್ ಸ್ಟಾರ್ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಒಟ್ಟಾಗಿ "ಜಸ್ಟ್ ಮ್ಯಾರೀಡ್" ಟೀಸರ್ ಅನಾವರಣ ಮಾಡಿದ್ದಾರೆ. abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಈ ಸಿನಿಮಾ ನಿರ್ಮಿಸುತ್ತುತ್ತಿದ್ದಾರೆ. ಸಿ.ಆರ್. ಬಾಬಿ ನಿರ್ದೇಶನ ಚಿತ್ರಕ್ಕಿದೆ.

ದಸರಾ ಹಬ್ಬದಲ್ಲೇ ಸಿಹಿ ಸುದ್ದಿ ಕೊಟ್ಟ ದರ್ಶನ್ ತಮ್ಮ ದಿನಕರ್​..!: ದಸರಾ ಹಬ್ಬ ನಟ ದರ್ಶನ್​ಗೆ ತುಂಬಾನೆ ಸ್ಪೆಷಲ್​. ಆದ್ರೆ ಈ ಭಾರಿ ದರ್ಶನ್ ಜೈಲಿನಲ್ಲೇ ದಸರಾ ಹಬ್ಬ ಆಚರಿಸುತ್ತಿದ್ದಾರೆ. ಆದ್ರೆ ನಟ ದರ್ಶನ್ ಫ್ಯಾನ್ಸ್​ಗೆ ದರ್ಶನ್ ತಮ್ಮ ದಿನಕರ್​​ ಹಬ್ಬದ ದಿನವೇ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ದರ್ಶನ್ ಜೈಲು ಸೇರಿದ್ಮೇಲೆ ಹಳೇ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಇದೀಗ ದಿನಕರ್​ ನಿರ್ದೇಶನದ ನವಗ್ರಹ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ವಿಷಯವನ್ನ ದಿನಕರ್​​ ತನ್ನ ಸೋಷಿಯಲ್ ಮೀಡಿಯಾದಲ್ಲಿ ರಿವಿಲ್ ಮಾಡಿದ್ದಾರೆ.