Sep 12, 2020, 2:36 PM IST
ರಣ್ವೀರ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಮುಂಬೈನಲ್ಲಿ ನೆಲೆಸಿದ್ದಾರೆ. ಕೊರೋನಾ ಕಾಟದಿಂದ ತಮ್ಮ ತವರೂರಾದ ಬೆಂಗಳೂರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಇತ್ತೀಚಿಗೆ ಬೆಂಗಳೂರಿಗೆ ಬಂದರೆ ಇವರು ಮಲೇಶ್ವರಂನ ವೀಣಾ ಸ್ಟೋರ್‌ನಲ್ಲಿ ಮಿಸ್ ಮಾಡದೆ ಇಡ್ಲಿ-ವಡೆ ಸೇವಿಸುತ್ತಾರೆ.
ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ರಾಮ್ ಚರಣ್ ಕೂಡ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಚರಣ್‌ಗೆ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಜಿರಂಜೀವಿ ಅಳಿಯ ಜೊತೆ ರಚಿತಾ ರಾಮ್ ಕಾಣಿಸಿಕೊಂಡರೆ, ಇತ್ತ ಪುತ್ರನ ಜೊತೆ ರಶ್ಮಿಕಾ ಮಿಂಚುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲೆಲ್ಲೂ ಕನ್ನಡ ನಟಿಯರದ್ದೇ ಹವಾ!
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment