ರಿಲಯನ್ಸ್ ಇಂಡಸ್ಟ್ರೀಸ್-ರೋಸ್ನೆಫ್ಟ್ ಡೀಲ್‌: ರಷ್ಯಾದ ಜೊತೆ ಭಾರತದ ಅತಿದೊಡ್ಡ ತೈಲ ಪೂರೈಕೆ ಒಪ್ಪಂದ!

By Santosh Naik  |  First Published Dec 12, 2024, 1:51 PM IST

ಲಭ್ಯವಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಎರಡು ಬ್ಲಾಕ್ ಡೀಲ್‌ಗಳಲ್ಲಿ 30 ಲಕ್ಷ ಷೇರುಗಳು ಕೈ ಬದಲಾಯಿಸಿದವು. ಪ್ರಸ್ತುತ ಖರೀದಿದಾರರು ಮತ್ತು ಮಾರಾಟಗಾರರು ಯಾರು ಅನ್ನೋದು ಲಭ್ಯವಾಗಿಲ್ಲ.


ಬೆಂಗಳೂರು (ಡಿ.12): ನಿಫ್ಟಿ 50 ಹೆವಿವೇಟ್‌ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಬುಧವಾರದ ಕನಿಷ್ಠ ಮಟ್ಟದಿಂದ ಚೇತರಿಸಿಕೊಳ್ಳಲು ನೋಡುತ್ತಿದೆ. ಸುದ್ದಿ ಸಂಸ್ಥೆ ರಾಯಿಟರ್ಸ‌ ವರದಿಯ ಬೆನ್ನಲ್ಲಿಯೇ ಕಂಪನಿ ಷೇರುಗಳು ಚೇತರಿಕೆಯ ಹಾದಿ ಕಾಣಬಹುದು ಎನ್ನಲಾಗಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ರೋಸ್ನೆಫ್ಟ್ ಸಂಸ್ಥೆಯಂದಿಗೆ ಭಾರತ-ರಷ್ಯಾ ತೈಲ ಪೂರೈಕೆ ಒಪ್ಪಂದಕ್ಕೆ ರಿಲಯನ್ಸ್‌ ಸಹಿ ಹಾಕಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಿನಕ್ಕೆ ಸುಮಾರು 5 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಪೂರೈಸಲು ರೋಸ್ನೆಫ್ಟ್ ಒಪ್ಪಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. 10-ವರ್ಷದ ಒಪ್ಪಂದವು ಜಾಗತಿಕ ಪೂರೈಕೆಯ 0.5% ಆಗಿದೆ ಮತ್ತು ಇಂದಿನ ಬೆಲೆಗಳ ಪ್ರಕಾರ ವಾರ್ಷಿಕವಾಗಿ ಸುಮಾರು $13 ಶತಕೋಟಿ ಮೌಲ್ಯದ್ದಾಗಿದೆ.

ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದ ಕುರಿತು ರಷ್ಯಾ ಪ್ರಸ್ತುತ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೊಂದಿದೆ. ರೋಸ್ನೆಫ್ಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಪ್ಪಂದದ ಕುರಿತು ಹೆಚ್ಚಿನ ವಿವರಗಳನ್ನು ನೀಡದೆ ರಷ್ಯಾ ಸೇರಿದಂತೆ ಅಂತರರಾಷ್ಟ್ರೀಯ ಪೂರೈಕೆದಾರರೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ರಿಲಯನ್ಸ್ ಹೇಳಿದೆ.

Tap to resize

Latest Videos

Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್‌ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್‌!

ರಷ್ಯಾದ ತೈಲವು ಭಾರತದ ಇಂಧನ ಆಮದಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚು. ರಷ್ಯಾದ ತೈಲದ ಮೇಲೆ ಭಾರತಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಎರಡು ಬ್ಲಾಕ್ ಡೀಲ್‌ಗಳಲ್ಲಿ 30 ಲಕ್ಷ ಷೇರುಗಳು ಕೈ ಬದಲಾಯಿಸಿದವು. ಪ್ರಸ್ತುತ ಖರೀದಿದಾರರು ಮತ್ತು ಮಾರಾಟಗಾರರು ಯಾರು ಅನ್ನೋದು ಲಭ್ಯವಾಗಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಪ್ರಸ್ತುತ 1.1% ನಷ್ಟು ಕಡಿಮೆಯಾಗಿ ₹1,264.24 ರಲ್ಲಿ ವಹಿವಾಟು ನಡೆಸುತ್ತಿವೆ.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

click me!