ಬೆಂಗಳೂರು: ಗಂಡನಿಗೆ ಬುದ್ಧಿ ಕಲಿಸಲು ಆತನ ತಾಯಿ ಸತ್ತ ದಿನವೇ ಇಬ್ಬರು ಮಕ್ಕಳನ್ನ ಕೊಂದ ಸ್ಯಾಡಿಸ್ಟ್ ಪತ್ನಿ!

By Sathish Kumar KH  |  First Published Dec 12, 2024, 1:14 PM IST

ಬೆಂಗಳೂರಿನಲ್ಲಿ ಗಂಡನ 'ಇಗೋ'ಗೆ ಬುದ್ಧಿ ಕಲಿಸಲು ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ತಾಯಿ ಸಾವಿನ ದಿನವೇ ಈ ಘಟನೆ ನಡೆದಿದ್ದು, ಡೆತ್ ನೋಟ್ ನಲ್ಲಿ 'Congrats your ego wins' ಎಂದು ಬರೆದಿಟ್ಟಿದ್ದಾರೆ.


ಬೆಂಗಳೂರು (ಡಿ.12): ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡು ಇಬ್ಬರು ಮಕ್ಕಳ ಪೋಷಕರೂ ಆಗಿದ್ದ ಜೋಡಿಯೊಂದರ ನಡುವೆ ಅತ್ತೆಯ ವಿಚಾರಕ್ಕೆ ಇಗೋ (ಗರ್ವ) ಅಡ್ಡಬಂದಿದೆ. ಇದರಿಂದ ಗಂಡನಿಗೆ ಬುದ್ಧಿ ಕಲಿಸಬೇಕೆಂದು, ಗಂಡನ ತಾಯಿ ಸತ್ತ ದಿನವೇ ಆತನ ಇಬ್ಬರೂ ಮಕ್ಕಳನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ, ಆ ಮಹಿಳೆ ಏನಾದಳೆಂಬ ಮಾಹಿತಿ ಇಲ್ಲಿದೆ ನೋಡಿ...

ಸಂಸಾರ ಎಂದರೆ ಎತ್ತಿನ ಬಂಡಿ ಇದ್ದಂತೆ ಎರಡೂ ಎತ್ತುಗಳು ಸಮನಾಗಿ ಬಂಡಿ ಎಳೆಯಬೇಕು ಎಂದು ಹೇಳುತ್ತಾರೆ. ಆದರೆ, ಎತ್ತು ಏರಿಗೆ, ಕೋಣ ನೀರಿಗೆ ಎನ್ನುವಂತೆ ಗಂಡ-ಹೆಂಡತಿ ಇಬ್ಬರೂ ಒಂದೊಂದು ದಿಕ್ಕಿಗೆ ಎಳೆದುಕೊಂಡು ಹೋದರೆ ಸಂಸಾರದ ಬಂಡಿ ಅರ್ಧದಲ್ಲಿಯೇ ಮುರುದು ಬೀಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ತುಮಕೂರು ಮೂಲದ ಸುರೇಶ್ ಹಾಗೂ ಬೆಂಗಳೂರು ಮತ್ತಿ ಕೆರೆ ಮೂಲದ ಕುಸುಮ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಸುರೇಶ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದನು. ಹೆಂಡತಿ ಕುಸುಮಾ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾದ ನಂತರ ಗಂಡ ತನ್ನ ತಾಯಿಯನ್ನು ಕರೆದುಕೊಂಡು ಬಂದು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದನು.

Tap to resize

Latest Videos

ಆಗ ಗಂಡ ಹೆಂಡತಿಯರ ಸಂಸಾರ ಸುಖವಾಗಿ ನಡೆದುಕೊಂಡು ಹೋಗಿದ್ದು, ಇಬ್ಬರು ಮಕ್ಕಳು ಕೂಡ ಜನಿಸಿದ್ದಾರೆ. ಸಂಸಾರ ಸುಖವಾಗಿ ನಡೆಯುತ್ತಿದೆ ಎನ್ನುವಾಗ ಗಂಡನ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಗಂಡ ತಾಯಿಗೆ ಆರೋಗ್ಯದ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸುತ್ತಾ ಹೆಂಡತಿಗೆ ಕೊಡುತ್ತಿದ್ದ ಸಮಯ ಕಡಿಮೆ ಮಾಡಿದ್ದಾನೆ. ನಂತರ, ಹೆಂಡತಿ ತನ್ನ ಪ್ರೀತಿಗೆ ಮತ್ತು ತನ್ನ ಗರ್ವಕ್ಕೆ (ಇಗೋ) ಗಂಡ ಧಕ್ಕೆ ತಂದಿದ್ದಾನೆ ಎಂದು ಕೋಪಗೊಂಡು ಜಗಳ ಮಾಡುತ್ತಲೇ ಹೋಗಿದ್ದಾಳೆ. ಆದರೆ, ಗಂಡ ಇದನ್ನೆಲ್ಲಾ ಸಹಿಸಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!

undefined

ಇದೀಗ ನಿನ್ನೆ ಗಂಡನ ತಾಯಿ ತೀರಿಕೊಂಡಿದ್ದಾಳೆ. ಇದೇ ವೇಳೆ ಗಂಡನಿಗೆ ನಾನೂ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದುಕೊಂಡ ಹೆಂಡತಿ ತನ್ನ ಶ್ರೀಯಾನ್ (6) ಹಾಗೂ ಮಗಳು ಚಾರ್ವಿ (1 ವರ್ಷ) ಇಬ್ಬರನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ, ತಾನೂ ಕುಸುಮಾ (35) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗಂಡ ಬಂದು ಮನೆಗೆ ನೋಡಿದಾಗ ಹೆಂಡತಿ ಮಕ್ಕಳೆಲ್ಲರೂ ಹೆಣವಾಗಿ ಬಿದ್ದಿದ್ದರು. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೋಡಿಗೇಹಳ್ಳಿ ಠಾಣೆಯ ಪೊಲೀಸರು ಘಟನೆ ನಡೆದ ಕೊಡಿಗೇಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್‌ಗೆ ತೆರಳಿ ಪರಿಶೀಲನೆ ಮಾಡಿದಾಗ ಡೆತ್ ನೋಟ್ ಲಭ್ಯವಾಗಿದೆ.

ಡೆತ್ ನೋಟ್‌ನಲ್ಲಿ ಏನಿದೆ?
ಹೆಂಡತಿ ಕುಸಮಾ ಬರೆದಿಟ್ಟ ಡೆತ್ ನೋಟ್‌ನಲ್ಲಿ 'Congrats your ego wins' ಎಂದು ಉಲ್ಲೇಖ ಮಾಡಿದ್ದಾಳೆ. ಅಂದರೆ, ಗಂಡನಿಗೆ ನಿನ್ನ ಇಗೋ ಗೆದ್ದಿದೆ ಎಂದು ಹೇಳಿದ್ದಾಳೆ. ಜೊತೆಗೆ, ಗಂಡನಿಗೆ ಬುದ್ಧಿ ಕಲಿಸಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅತ್ತೆ (ಗಂಡನ ತಾಯಿ) ಸತ್ತ ದಿನವೇ ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ. ಈ ಮೂಲಕ ಗಂಡ ಹೆಂಡತಿ ನಡುವೆ ಇಗೋ ಪ್ರಾಬ್ಲಮ್ ಇದ್ದ ಕಾರಣಕ್ಕೆ ಸಾವಿಗೆ ಶರಣಾಗಿರುವುದಾಗಿ ತಿಳಿಸಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: JUSTICE IS DUE ಹೆಣ್ಣು ಮಕ್ಕಳಿಗೆ ಇರೋ ನ್ಯಾಯ ಗಂಡಸರಿಗೆ ಯಾಕಿಲ್ಲ!

click me!