Chiranjeevi: ರಾಜ್ ಕುಟುಂಬದ ಜೊತೆಗಿನ ಬಾಂಡಿಂಗ್ ನೆನಪಿಸಿದ ಮೆಗಾಸ್ಟಾರ್

Nov 21, 2021, 2:51 PM IST

ಮೆಗಾಸ್ಟಾರ್(Megastar) ಚಿರಂಜೀವಿ(Chiranjeevi) ಕುಟುಂಬಕ್ಕೂ ಡಾ.ರಾಜ್‌ಕುಮಾರ್ ಕುಟುಂಬ ಹಲವು ದಶಕಗಳಿಂದ ಅವಿನಾಭಾವ ಸಂಬಂಧ. ಇಬ್ಬರ ಮನೆಯಲ್ಲಿ ಏನೇ ಶುಭ ಸಮಾರಂಭಗಳು ನಡೆದಾಗಲೂ ಪರಸ್ಪರರ ಕುಟುಂಬಗಳು ಭಾಗಿಯಾಗುತ್ತವೆ. ಈ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಜ್‌ಕುಮಾರ್(Rajkumar) ಕುರಿತು ಹಾಗೂ ಅವರ ಕುಟುಂಬದ ಕುರಿತು ವಿಶೇಷ ಪ್ರೀತಿ ಇಟ್ಟುಕೊಂಡಿರುವ ಚಿರಂಜೀವಿ, ಅಪ್ಪುವಿನ ನಿಧನದಿಂದ ತೀವ್ರ ದುಃಖಕ್ಕೆ ಒಳಗಾಗಿದ್ದರು. ಅಪ್ಪು ನಿಧನ ಹೊಂದಿ 22 ದಿನಗಳ ನಂತರವೂ ಚಿರಂಜೀವಿಯನ್ನು ಇನ್ನೂ ಕಾಡುತ್ತಲೇ ಇದೆ.ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಚಿರಂಜೀವಿ ಆ ಕಾರ್ಯಕ್ರಮದಲ್ಲಿಯೂ ಪುನೀತ್ ಸಾವನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ, ಡಾ ರಾಜ್‌ಕುಮಾರ್ ಕುಟುಂಬವನ್ನು ಕಾಡುತ್ತಿರುವ ಸಮಸ್ಯೆಯೊಂದರ ಬಗ್ಗೆ ಮಾತನಾಡಿದ್ದಾರೆ. ಚಿರಂಜೀವಿ ಆಡಿರುವ ಮಾತುಗಳು ಅವರಿಗೆ ರಾಜ್‌ ಕುಟುಂಬದ ಮೇಲೆ ಇರುವ ಪ್ರೀತಿಯನ್ನು ಗೊತ್ತು ಮಾಡುತ್ತಿವೆ.ಯೋಧಾ ಡಯಾಗ್ನೆಸ್ಟಿಕ್ ಸರ್ವೀಸ್ ಲೋಕಾರ್ಪಣೆ ಸಮಾರಂಭದಲ್ಲಿ ನಟ ಚಿರಂಜೀವಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, 

Puneeth Rajkumar: PRK ಪ್ರೊಡಕ್ಷನ್‌ ಕೆಲಸಗಳು ಆರಂಭ

ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಹೃದಯ ಸಂಬಂಧಿ ಕಾಯಿಲೆಯ ಇತಿಹಾಸವಿದೆ. ರಾಜ್‌ಕುಮಾರ್ ಅವರೂ ಸಹ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ನಿಧನ ಹೊಂದಿದರು. ಅವರ ಮೊದಲ ಮಗ ಶಿವರಾಜ್ ಕುಮಾರ್‌ಗೆ ಸಹ ಹೃದಯ ಸಂಬಂಧಿ ಸಮಸ್ಯೆ ಇದೆ. ಅವರು ಆಂಜಿಯೋ ಚಿಕಿತ್ಸೆ ಪಡೆದುಕೊಂಡು ಈಗ ಚೆನ್ನಾಗಿದ್ದಾರೆ. ರಾಜ್‌ಕುಮಾರ್ ಅವರ ಎರಡನೇ ಮಗ ರಾಘವೇಂದ್ರ ಅವರಿಗೆ ಹೃದಯ ಹಾಗೂ ಮೆದುಳು ಸಂಬಂಧಿ ಸಮಸ್ಯೆ ಇದೆ. ಅವರು ಸಮಸ್ಯೆಗಳ ನಡುವೆಯೇ ಬದುಕುತ್ತಿದ್ದಾರೆ'' ಎಂದಿದ್ದಾರೆ ಚಿರಂಜೀವಿ.