KGF-2 ಸಾಹಸದ ಹಿಂದಿರುವ ಮೂರು ವಜ್ರಗಳು

Apr 20, 2022, 6:25 PM IST

ಕೆಜಿಎಫ್-2 ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಸಿನಿಮಾ. ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ಈ ಅದ್ಭುತ ಸಿನಿಮಾಗಾಗಿ ಕೆಲಸ ಮಾಡಿದವರು ಅನೇಕರು. ಕೋಟಿ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಕೆಜಿಎಫ್-2 1000 ಕೋಟಿಯತ್ತ ದಾಪುಗಾಲಿಡುತ್ತಿದೆ. ಇಂತ ಅದ್ಭುತ ಸಿನಿಮಾದ ಹಿಂದೆ 3 ವಜ್ರಗಳಿವೆ. ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ಭುವನ್ ಗೌಡ ಮತ್ತು ಎಡಿಟರ್ ಉಜ್ವಲ್. ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದ ರವಿ ಬಸ್ರೂರ್ ಇಂದು ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಇನ್ನು ವಾಚ್ ರಿಪೇರಿ ಮಾಡುತ್ತಿದ್ದ ಭುವನ್ ಗೌಡ ಮತ್ತು ಪಿಯುಸಿ ಓದುತ್ತಿದ್ದ ಯುವಕ ಉಜ್ವಲ್ ಗೌಡ ಅವರ ಶ್ರಮ ಕೂಡ ಇಂದು ಕೆಜಿಎಫ್-2 ಸಕ್ಸಸ್ ನ ಅತಿ ದೊಡ್ಡ ಭಾಗವಾಗಿದೆ.