ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಕಣೆ ಮತ್ತು ಪಡಸಲನತ್ತ ಗ್ರಾಮಸ್ಥರು ಉದ್ಯೋಗ ಇಲ್ಲದೇ, ವ್ಯಾಪಾರವಿಲ್ಲದೇ ಪಡಿಪಟಾಲು ಪಡುತ್ತಿದ್ದು ಸರ್ಕಾರ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕೆಂಬ ಆಸೆಗಣ್ಣಲ್ಲಿ ಕಾಯುತ್ತಿದ್ದಾರೆ.
ಜಿ. ದೇವರಾಜ ನಾಯ್ಡು
ಚಾಮರಾಜನಗರ (ಜು.3): ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮಲೆ (ತೇಕಣೆ ) ಮತ್ತು ಪಡಸಲನತ್ತ ಗ್ರಾಮಸ್ಥರು ಉದ್ಯೋಗ ಇಲ್ಲದೇ, ವ್ಯಾಪಾರವಿಲ್ಲದೇ ಪಡಿಪಟಾಲು ಪಡುತ್ತಿದ್ದು ಸರ್ಕಾರ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕೆಂಬ ಆಸೆಗಣ್ಣಲ್ಲಿ ಕಾಯುತ್ತಿದ್ದಾರೆ. ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ನಾಗಮಲೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ಹೋಗುವ ಸ್ಥಳದಲ್ಲಿ ದಿನನಿತ್ಯ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದಂತ ಭಕ್ತಾದಿಗಳು ನಾಗಮಲೆಗೂ ಸಹ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಅರಣ್ಯ ಇಲಾಖೆ ಚಾರಣಕ್ಕೆ ನಿಷೇಧ ಕಾಯ್ದೆ ಜಾರಿಗೆ ತಂದು ಇಲ್ಲಿನ ಬರುವ ಭಕ್ತರಿಗೆ ನಿಷೇಧ ಹೇರಿರುವುದರಿಂದ ಇಲ್ಲಿನ ಜನತೆಗೆ ವ್ಯಾಪಾರ ವಹಿವಾಟು ಇಲ್ಲದೆ ಇತ್ತ ಕೂಲಿಯೂ ಇಲ್ಲದೆ ಕಂಗಲಾಗಿದ್ದಾರೆ.
ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್ ಚೆಂಡು ಈಗ ಹೈಕೋರ್ಟ್ ಅಂಗಳಕ್ಕೆ, ಪ್ರತಿಭಟನೆ ನಿಲ್ಲಿಸಿದ ರೈತರು
ಉದ್ಯೋಗ ನೀಡಿ : ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸವಿಲ್ಲದ ನಿರುದ್ಯೋಗಿಗಳಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಲಾಗುತ್ತಿದೆ. ನಾಗಮಲೆ ಮತ್ತು ಪಡಸಲನತ್ತ ಎರಡು ಗ್ರಾಮಸ್ಥರಿಗೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಜನ ವಲಸೆ ಹೋಗುವ ಸ್ಥಿತಿಗೆ ಬಂದಿದ್ದಾರೆ. ಜೊತೆಗೆ ಬೇರೆ ಕಡೆ ಹೋಗಿ ಕೆಲಸ ಮಾಡಿ ಬರಲು ಸರಿಯಾದ ರಸ್ತೆ ಸಂಪರ್ಕನಿಲ್ಲ. ಇಂಡಿಗನತ್ತ ಗ್ರಾಮದಿಂದ ನಾಗಮಲೆ ತೇ ಕಣೆ ಪಡಸಲನತ್ತ ಗ್ರಾಮಗಳ ಕೊರಕಲ್ಲು ರಸ್ತೆಗಳು ಮಳೆ ಇದ್ದ ತೀವ್ರ ಹದಗೆಟ್ಟಿದೆ ಹೀಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ರಸ್ತೆ ಪಿಚಿಂಗ್ ನಿರ್ಮಾಣ ಮಾಡಲು ಉದ್ಯೋಗ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎರಡು ಗ್ರಾಮಗಳಲ್ಲಿ ಇರುವ ಕೆರೆಗಳಲ್ಲಿ ನೀರು ತುಂಬಿದೆ ಹೀಗಾಗಿ ರಸ್ತೆ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಉದ್ಯೋಗ ಖಾತ್ರಿ ನೀಡುವ ಮೂಲಕ ಕೆಲಸವಿಲ್ಲದೆ ಬರಿದಾಗಿರುವ ಬದುಕಿಗೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ಯುವಕ ಆತ್ಮಹತ್ಯೆ!
ಮೂಲ ನಿವಾಸಿಗಳ ಒತ್ತಾಯ: ಅನಾದಿಕಾಲದಿಂದಲೂ ಸಹ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡದೆ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಹೀಗಾಗಿ ಇಲ್ಲಿನ ಜನತೆ ಯಾವುದೇ ಕೆಲಸ ಕಾರ್ಯಗಳಿಲ್ಲದೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕೊರಕಲು ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ನಮಗೆ ಕೆಲಸ ನೀಡಬೇಕು ಜೊತೆಗೆ ಇಲ್ಲಿನ ಜನತೆಗೆ ಇರುವ ಗ್ರಾಮಗಳ ಅಭಿವೃದ್ಧಿಗೆ ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಾಜ್ ಒತ್ತಾಯಿಸಿದ್ದಾರೆ.
ಬದುಕು ಕಟ್ಟಿಕೊಳ್ಳುವುದು ಹೇಗೆ?: ನಾಗಮಲೆ (ತೆಕಣೆ) ಹಾಗೂ ಪಡಸಲನತ್ತ ಗ್ರಾಮಸ್ಥರಿಗೆ ಇಲ್ಲಿನ ನಿವಾಸಿಗಳಿಗೆ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ ಜನತೆ ಬದುಕು ನಡೆಸುವುದೇ ಕಷ್ಟವಾಗಿದೆ. ಮುಂದಾದರು ಸಹ ಸಂಬಂಧ ಪಟ್ಟ ಜಿಲ್ಲಾಡಳಿತ ಇತ್ತ ಗಮನ ಹರಿಸಿ ನಿವಾಸಿಗಳಿಗೆ ಉದ್ಯೋಗ ನೀಡಿ ಗ್ರಾಮಗಳ ಅಭಿವೃದ್ಧಿ ಮಾಡಿ ನಮ್ಮ ಬದುಕಿಗೆ ಆಸರೆಯಾಗಿದ್ದ ವ್ಯಾಪಾರವನ್ನು ಸಹ ನಿಲ್ಲಿಸಲಾಗಿದೆ ಮುಂದಾದರು ಸಹ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮಸ್ಥರ ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ತೆಕಣೆ ಪಡಸಲ ಗ್ರಾಮದಲ್ಲಿ ನಿವಾಸಿಗಳು ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡುವಂತೆ ಯಾರು ಅರ್ಜಿ ಸಲ್ಲಿಸಿಲ್ಲ. ಸಲ್ಲಿಸಿದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಲ್ಲಿನ ಜನತೆಗೆ ಉದ್ಯೋಗ ಖಾತ್ರಿ ಯೋಜನಯಡಿ ಕ್ರಿಯಾ ಯೋಜನೆ ತಯಾರಿಸಿ ಅನುಕೂಲ ಕಲ್ಪಿಸಲಾಗುವುದು. ಕೆರೆ ಕಟ್ಟೆಗಳು, ಕಾಲುವೆಗಳು ಶಾಲಾ ಕಾಂಪೌಂಡ್ ವಿವಿಧ ಅಭಿವೃದ್ಧಿ ಕೆಲಸ ನಿರ್ವಹಿಸಲು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ಉದ್ಯೋಗ ಕಲ್ಪಿಸಲಾಗುವುದು.
ಕಿರಣ್ ಪಿಡಿಓ ಮಲೆಮಹದೇಶ್ವರ ಬೆಟ್ಟ ಗ್ರಾಪಂ