ಅಭಿಷೇಕ್ ಅಂಬರೀಶ್ ಜೊತೆ ಅವಿವಾ ಬಿದ್ದಪ್ಪ ವಿವಾಹ...ಮದುವೆ ಯಾವಾಗ..? ಎಲ್ಲಿ.?

Apr 10, 2023, 3:59 PM IST

ಅಭಿಷೇಕ್ ಹಾಗೂ ಅವಿವಾ ವಿವಾಹ ತಯಾರಿ ಭರ್ಜರಿಯಾಗಿ ಸಾಗುತ್ತಿದ್ದು,ಈಗಾಗಲೇ ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್  ಮದುವೆ ಆಮಂತ್ರಣ ಪತ್ರಿಕೆ ವಿತರಣೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಗಣ್ಯ ವ್ಯಕ್ತಿಗಳಿಗೆ  ಆಹ್ವಾನ ಪತ್ರಿಕೆ ವಿತರಿಸಿ ಮದುವೆಗೆ ಆಹ್ವಾನಿಸಿದ್ದಾರೆ. ಅಭಿಷೇಕ್ ವಿವಾಹ ಜೂನ್ 9 ಹಾಗೂ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಮಂಡ್ಯದಲ್ಲಿ ಜೂನ್ 12 ರಂದು ರಿಸೆಪ್ಷನ್ ಹಾಗೂ ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಇನ್ನುಅಭಿಷೇಕ್ ಹಾಗೂ ಅವಿವಾ ವಿವಾಹಕ್ಕೆ ಸುಮಾರು 10,000 ಅತಿಥಿಗಳು ಆಗಮಿಸುವ ನಿರೀಕ್ಷೆ ಇದ್ದು,  ರಾಜಕೀಯ ಗಣ್ಯರು. ಸ್ಯಾಂಡಲ್​ವುಡ್ ಮಾತ್ರವೇ ಅಲ್ಲದೆ ಬಾಲಿವುಡ್, ತೆಲುಗು ಚಿತ್ರರಂಗ, ತಮಿಳು, ಮಲಯಾಳಂ ಚಿತ್ರರಂಗದಿಂದ ಸ್ಟಾರ್​ಗಳು ಆಗಮಿಸಲಿದ್ದಾರೆ.