ತಿರುಪತಿ ಲಡ್ಡು ಅಪವಿತ್ರ: ಪುತ್ತೂರಿನಲ್ಲಿ ಖಾಸಗಿ ದೂರು ದಾಖಲು!

By Kannadaprabha News  |  First Published Sep 29, 2024, 10:29 AM IST

ತಿರುಪತಿ ತಿಮ್ಮಪ್ಪ ದೇವರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ಎಂಬವರು ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.


ಪುತ್ತೂರು (ಸೆ.29) ತಿರುಪತಿ ತಿಮ್ಮಪ್ಪ ದೇವರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ಎಂಬವರು ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ಅವರು ಶನಿವಾರ ಪುತ್ತೂರು ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ತಿರುಪತಿ ಲಡ್ಡು ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಕೊಡುವ ಪವಿತ್ರ ಪ್ರಸಾದವಾಗಿದ್ದು, ಅದನ್ನು ರಾಜಕೀಯ ಕಾರಣಗಳಿಗಾಗಿ ಅಪವಿತ್ರಗೊಳಿಸಲಾಗಿದೆ. ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಪ್ರಾಣಿಗಳ ಕೊಬ್ಬನ್ನು ಲಡ್ಡು ಪ್ರಸಾದದಲ್ಲಿ ಬೆರಕೆ ಮಾಡಿರುವುದು ಆಘಾತಕಾರಿ. ಇದೊಂದು ಉದ್ದೇಶಪೂರ್ವಕ ದುಷ್ಕೃತ್ಯವಾಗಿದ್ದು ಆಸ್ತಿಕರ ಭಾವನೆಗಳನ್ನು, ನಂಬಿಕೆಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ. 

Tap to resize

Latest Videos

ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ೨೭೨ ಹಾಗೂ ೨೭೩ನೇ ವಿಭಾಗದಲ್ಲಿ ಉಲ್ಲೇಖಿತವಾಗಿರುವ ಆಹಾರ ಕಲಬೆರಕೆ, ೨೯೧ರಲ್ಲಿ ಉಲ್ಲೇಖಿತವಾಗಿರುವ ಅಧಿಕಾರ ದುರ್ಬಳಕೆ ವಿಷಯದ ನೆಲೆಯಲ್ಲಿ ದೂರು ದಾಖಲಿಸುವಂತೆ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಗಣೇಶ್ ಪ್ರಸಾದ್ ಎ. ಉಪಸ್ಥಿತರಿದ್ದರು.

click me!