Yuva: ಯುವರಾಜ್ ಕುಮಾರ್ ಟೀಸರ್‌ನಲ್ಲಿ ಅಪ್ಪು ಕಂಡ ಫ್ಯಾನ್ಸ್

Mar 6, 2023, 4:08 PM IST

 ಚಿಕ್ಕಪ್ಪ ಅಪ್ಪುವಿನ ಹಾದಿಯಲ್ಲೇ ಇರುವ ಯುವ ರಾಜ್ ಕುಮಾರ್ ಕೂಡ ಅಪ್ಪುವಿನ ಹಾಗೆ ಖಡಕ್ ಖದರ್, ಸ್ಟೈಲಿಶ್ ಲುಕ್ ಆಕ್ಷನ್ ಮಾಡಿದ್ದಾರೆ. ಅಪ್ಪುವಿನ ಎಲ್ಲಾ ಗುಣಗಳು ಯುವನ ಬಳಿ ಇದ್ದು, ಪುನೀತ್ ರಾಜಕುಮಾರ್ ಹಾಗೆ ಫಿಟ್ನೆಸ್ ನಲ್ಲಿ ಕಂಗೊಳಿಸಿದ್ದಾರೆ ಯುವ. ಇದಕ್ಕೆ ಕಾರಣ  ಪುನೀತ್ ರಾಜಕುಮಾರ್ ಅಂತೆ  ಯುವ ರಾಜ್‌ಮಾರ್ ಕೂಡ ಫಿಟ್ನೆಸ್  ಫಾಲೋ ಮಾಡುತ್ತಿದ್ದಾರೆ.  ಯುವಗೆ  ಅಪ್ಪುನೇ ಸ್ಫೂರ್ತಿಯಾಗಿದ್ದು,   ಆಕ್ಷನ್, ಸ್ಟಂಟ್ಸ್, ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರ ಪುನೀತ್‌ . ಈಗ ಅದೇ ಹಾದಿಯನ್ನು ಯುವ ರಾಜ್‌ಕುಮಾರ್ ಕೂಡ ಫಾಲೋ ಮಾಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಕೂಡ ಸಾಕಷ್ಟು ತಯಾರಿ ಮಾಡಿಕೊಂಡೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕಪ್ಪನಂತೆ ಯುವ ಕೂಡ ದಿನನಿತ್ಯ ವರ್ಕ್‌ಔಟ್ ಮಾಡ್ತಾರೆ. ಫಿಟ್ನೆಸ್‌ ಕಡೆಗೆ ಗಮನ ಕೊಡ್ತಾರೆ.  ಆಕ್ಷನ್ ಸಿನಿಮಾ ಮಾಡಲು ಬೇಕಾಗಿರುವ ಫಿಟ್ನೆಸ್ ಹಾಗೂ ಕಲೆಗಳ ಕಲಿತಿದ್ದಾರೆ. ಯುವ ಟೀಸರ್ ನಲ್ಲಿ ಯುವ ರಾಜ್‌ ಕುಮಾರ್‌ ಪ್ರಿಪರೇಷನ್ ಎದ್ದು ಕಾಣುತ್ತಿದ್ದು, ಅಪ್ಪುವಿನ ಮತ್ತೊಂದು ರೂಪ ಯುವ ರಾಜ್‌ ಕುಮಾರ್ ಎಂದು ದೊಡ್ಮನೆ ಫ್ಯಾನ್ಸ್ ಯುವನನ್ನ ಕೊಂಡಾಡುತ್ತಿದ್ದಾರೆ.

ರಶ್ಮಿಕಾ ಬಿಟ್ಟು ಮತ್ತೊಬ್ಬ ಕನ್ನಡತಿ ಜೊತೆ ದೇವರಕೊಂಡ ರೊಮ್ಯಾನ್ಸ್