Allu Arha achievement: ಅಲ್ಲು ಪುತ್ರಿಯ ಸಾಧನೆ ಇದು

Nov 24, 2021, 5:12 PM IST

ಟಾಲಿವುಡ್(Tollywood) ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್(Allu Arjun) ದಂಪತಿ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ 5 ವರ್ಷದ ಪುಟ್ಟ ಮಗಳು. ಹೌದು. ಅಲ್ಲು ಅವರ ಪುತ್ರಿ ಅಲ್ಲು ಅರ್ಹಾ ನೋಬೆಲ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಪುಟ್ಟ ಹುಡುಗಿಯ ಈ ರೆಕಾರ್ಡ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Allu Arha: ನೋಬೆಲ್‌ ಬುಕ್ ಆಫ್‌ ರೆಕಾರ್ಡ್‌ ಸೇರಿದ ಅಲ್ಲು ಅರ್ಜುನ್ ಪುತ್ರಿ!

ಇದೀಗ ಅರ್ಜುನ್ ಮತ್ತು ಸ್ನೇಹಾ ಅವರ ಮುದ್ದಾದ ಮಗಳು ಅಲ್ಲು ಅರ್ಹಾ (Allu Arha) ಹೊಸ ಸಾಧನೆ ಮಾಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಷಕರಿಬ್ಬರೂ ವಿಡಿಯೋ ಹಂಚಿಕೊಳ್ಳುವ ಮೂಲಕ ಹೆಮ್ಮೆಯಿಂದ ಮಗಳ ಸಾಧನೆಯನ್ನು ಹೇಳಿಕೊಂಡು ಮೆರೆದಿದ್ದಾರೆ. ಹೌದು! ಕೆಲವು ದಿನಗಳ ಹಿಂದೆ ಅರ್ಹಾ 5ನೇ ವರ್ಷದ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾಳೆ. ಬರ್ತಡೇ ಸರಳವಾಗಿದ್ದರೂ, ಆಕೆಯ ಬಗ್ಗೆ ಅಭಿಮಾನಿಗಳಿಗೆ ಬಿಗ್ ಬಿಗ್ಗೆಸ್ಟ್ ನ್ಯೂಸ್ ಕೊಟ್ಟಿದ್ದಾರೆ. ಅದುವೇ ಆಕೆ ಯಂಗೆಸ್ಟ್‌ ಚೆಸ್ ಟ್ರೈನರ್ (Youngest Chess Trainer) ಎಂದು, ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಸೇರಿದೆ.