Oct 14, 2022, 11:33 PM IST
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆದರೆ ಜನ ಯಾವತ್ತೂ ಸುಮ್ಮನಿರೋಲ್ಲ ಅನ್ನೋದಕ್ಕೆ ಸಾಕ್ಷಿ ಆದಿಪುರುಷ್ ಸಿನಿಮಾ ವಿವಾದ. ಇದು ಒಂದು ರಾಮಾಯಣದ ಕತೆಯೇ ಇದೂ ಒಂದು ಪೌರಾಣಿಕ ಸಿನಿಮಾನಾ..? ರಾಮಾ ಅಂದ್ರೆ ಹೀಗಿರ್ತಾನಾ..? ರಾಮನಿಯಾವತ್ತಾದರೂ ಮೀಸೆ ಇತ್ತಾ..? ಸೀತೆ ಎಂದರೆ ಕೈಎತ್ತಿ ಮುಗಿಯುವಂತಿರಬೇಕು ಆದರೆ ಆದಿಪುರಷ್ ಸಿನಿಮಾ ಸೀತೆಯನ್ನು ನೋಡಿದರೆ ಮೂಡುವ ಭಾವನೆಗಳೆ ಬೇರೆ. ಆಂಜನೇಯನಿಗೆ ಚರ್ಮದ ಬಟ್ಟೆ ಹಾಕಬಹುದೆ..? ರಾವಣ ಗಡ್ಡದಾರಿಯಾಗಿದ್ದನೇ..? ಸೈಫ್ ಅಲಿಖಾನ್ ನೋಡಿದ್ರೆ ಮುಸ್ಲಿಂ ಪಾತ್ರಧಾರಿಯಂತೆಯೇ ಕಾಣಿಸಿಕೊಂಡಿದ್ದಾನೆ. ಇವೆಲ್ಲವೂ ಇದೀಗ ಹಿಂದೂಗಳ ಭಾವನೆಯನ್ನು ಕೆರಳಿಸಿವೆ. ವಿವಾದ ಭುಗಿಲೆದ್ದು ಸಿನಿಮಾ ಬಹಿಷ್ಟಕಾರಕ್ಕೆ ಜನ ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಭಾಸ್ ಸೈಫ್ ಸೇರಿ ಚಿತ್ರ5 ಜನರ ಮೇಲೆ ಕೇಸ್ ಕೂಡ ಜಡಿಯಲಾಗಿದೆ.
‘ರಾಮಾಯಣ’ ರೀತಿಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಇದು ಜನರ ಭಾವನೆಗೆ ಸಂಬಂಧಿಸಿದ ವಿಚಾರ. ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್ ಬಿಡುಗಡೆ ಆದ ಬಳಿಕ ಎಲ್ಲವೂ ತಲೆಕೆಳಗಾಗಿದೆ. ಅ.2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಲಾಯಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆಗಿದ್ದೇ ಬೇರೆ. ಆದಿ ಪುರುಷ್ ಟೀಸರ್ ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿನ ಗ್ರಾಫಿಕ್ಸ್ ಗುಣಮಟ್ಟ ಕಳಪೆ ಆಗಿದೆ ಎಂಬುದು ಅಸಮಾಧಾನಕ್ಕೆ ಕಾರಣ ಆಗಿದೆ. ಅಷ್ಟೇ ಅಲ್ಲದೇ ಈಗ ಕಾನೂನಿನ ಸಂಕಷ್ಟ ಕೂಡ ಎದುರಾಗಿದೆ.
Adipurush Trolled: ಆದಿಪುರುಷ್ ವಿರುದ್ಧ ಭುಗಿಲೆದ್ದ ಭಾರತ: ಚಿತ್ರತಂಡ ಎಡವಿದ್ದೆಲ್ಲಿ?
ಈ ಸಿನಿಮಾದಲ್ಲಿ ನಟಿಸಿರುವ ಪ್ರಭಾಸ್, ಸೈಫ್ ಅಲಿ ಖಾನ್, ನಿರ್ದೇಶನ ಮಾಡಿರುವ ಓಂ ರಾವತ್ ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಾಗಿದೆ. ‘ಆದಿಪುರುಷ್’ ಚಿತ್ರದಲ್ಲಿ ರಾಮ, ರಾವಣ, ಸೀತೆ ಪಾತ್ರಗಳನ್ನು ಸರಿಯಾಗಿ ತೋರಿಸಿಲ್ಲ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ಕೋರ್ಟ್ ದಿನಾಂಕ ನಿಗದಿ ಮಾಡಿದೆ. ಇತ್ತೀಚೆಗೆ ದೆಹಲಿಯಲ್ಲೂ ಚಿತ್ರತಂಡದ ವಿರುದ್ಧ ಇದೇ ರೀತಿಯ ಕೇಸ್ ದಾಖಲಾಗಿತ್ತು. ನಟ ಪ್ರಭಾಸ್ ಅವರಿಗೆ ಯಾಕೋ ಟೈಮ್ ಚೆನ್ನಾಗಿಲ್ಲ. ಮಾಡಿದ ಎಲ್ಲ ಪ್ರಯತ್ನಗಳೂ ಕೈ ಕೊಡುತ್ತಿವೆ. ‘ಬಾಹುಬಲಿ’ ಬಳಿಕ ಅವರು ನಟಿಸಿದ ‘ಸಾಹೋ’ ಹಾಗೂ ‘ರಾಧೆ ಶ್ಯಾಮ್’ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಿಲ್ಲ. ‘ಆದಿಪುರುಷ್’ ಚಿತ್ರವಾದರೂ ಗೆಲುವು ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ರಿಲೀಸ್ಗೂ ಮುನ್ನವೇ ಈ ಸಿನಿಮಾ ಕಿರಿಕ್ ಮಾಡಿಕೊಳ್ಳುತ್ತಿದೆ. 2023ರ ಜನವರಿ 12ರಂದು ಈ ಚಿತ್ರ ಬಿಡುಗಡೆ ಆಗಲಿದೆ. 3ಡಿ ಅವತರಣಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.ಕಳಪೆ ಗ್ರಾಫಿಕ್ಸ್ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ನಿರ್ದೇಶಕ ಓಂ ರಾವತ್ ಅವರು ಪ್ರತಿಕ್ರಿಯೆ ನೀಡಿದರು. ‘ಇದು ದೊಡ್ಡ ಪರದೆಗಾಗಿ ಮಾಡಿದ ಸಿನಿಮಾ. ಯೂಟ್ಯೂಬ್‌ನಲ್ಲಿ ಟೀಸರ್ ನೋಡಿದ್ದಕ್ಕೆ ಗುಣಮಟ್ಟ ಸರಿಯಿಲ್ಲ ಅಂತ ಜನರಿಗೆ ಅನಿಸಿದೆ’ ಎಂದು ಅವರು ನೀಡಿದ ಸಮರ್ಥನೆ ಯಾರಿಗೂ ಸಮಾಧಾನ ತರಿಸಿಲ್ಲ. ಈ ಸಿನಿಮಾದಲ್ಲಿ ಕೃತಿ ಸನೋನ್ ಅವರು ಸೀತೆಯ ಪಾತ್ರ ಮಾಡಿದ್ದಾರೆ. ‘ಆದಿಪುರುಷ್’ ಸಿನಿಮಾದ ಬಜೆಟ್ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇಷ್ಟು ಖರ್ಚು ಮಾಡಿದ ಸಿನಿಮಾಗೆ ಗಲ್ಲಾಪೆಟ್ಟಿಗೆಯಲ್ಲಿ ಲಾಭ ಆಗಬೇಕು ಎಂದರೆ ಸುಲಭದ ಮಾತಲ್ಲ. ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕೌತುಕ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸಿನಿಮಾ ವಿವಾದಗಳ ಮೇಲೆ ವಿವಾದ ಮಾಡಿಕೊಂಡು ಬಿಡುಗಡೆಯಾಗುವುದೆ ಅನುಮಾನ ಎನ್ನಲಾಗಿದೆ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment