ರಣವೀರ್ ಬೆತ್ತಲೆ ಅವತಾರಕ್ಕೆ ಫ್ಯಾನ್ಸ್ ಸುಸ್ತು; ಇನ್ನು ಏನ್ ನೋಡ್ಬೇಕಪ್ಪ ಎಂದ ನೆಟ್ಟಿಗರು

Jul 24, 2022, 3:02 PM IST

ರಣವೀರ್ ಸಿಂಗ್, ಹಿಂದಿ ನಟ ಆದ್ರೂ ಕನ್ನಡಿಗರಿಗೆ ರಣ್ವೀರ್ ಮೇಲೆ ಸ್ವಲ್ಪ ಲವ್ ಜಾಸ್ತಿ. ಯಾಕಂದ್ರೆ ಈ ಹೀರೋ ಕರ್ನಾಟಕದ ಅಳಿಯ. ಪ್ರಕಾಶ್ ಪಡುಕೋಣೆ ಮಗಳು, ಕನ್ನಡತಿ ದೀಪಿಕಾ ಪಡುಕೋಣೆ ಅವರ ಲವ್ಲೀ ಹಸ್ಬೆಂಡ್. ಆದರೆ, ಈತ ಈಗ ಸುದ್ದಿ ಮಾಡಿರೋದು ಮಾತ್ರ ಬೇರೆ ವಿಷಯಕ್ಕೆ. ರಣ್ವೀರ್ ಸಿಂಗ್ ಅದ್ಭುತ ನಟ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈತನ ನಟನೆ ನೋಡಿ ಥ್ರಿಲ್ಲಾಗೋ ಪ್ರೇಕ್ಷಕರೇನು ಕಡಿಮೆ ಇಲ್ಲ. ಆದರೀಗ ಡಿಪ್ಪಿ ಪತಿಯನ್ನು ನೋಡಿದವರು ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಈ ಫೋಟೋಗಳು. ರಣವೀರ್ ಸಿಂಗ್ ಅಂದ್ರೆ ಕ್ರೇಜಿ, ಕಲರ್ ಕಲರ್ ಡ್ರೆಸ್ಸು, ಅರಳು ಹುರಿದಂತೆ ಮಾತು, ನೋಡೋವ್ರಿಗೆ ಓವರ್ ಆಕ್ಟಿಂಗ್ ಎನ್ನಿಸಿದ್ರೂ ಕ್ಯಾಮೆರಾ ಎದುರು ಇದ್ದಷ್ಟು ಹೊತ್ತು ಫುಲ್ ಆಕ್ಟಿವ್ ಇರ್ತಾರೆ ರಣ್ವೀರ್. ಇಂತಹ ರಣ್ವೀರ್ ಈಗ ಬೆತ್ತಲಾಗಿ ಶಾಕ್ ಕೊಟ್ಟಿದ್ದಾರೆ.