Jan 13, 2020, 4:34 PM IST
ಚಿತ್ರದುರ್ಗ (ಜ. 13): ಪ್ಲಾಸ್ಟಿಕ್ ಅಕ್ಕಿ ಆಯ್ತು, ಪ್ಲಾಸ್ಟಿಕ್ ಮೊಟ್ಟೆ ಆಯ್ತು, ಈಗ ಪ್ಲಾಸ್ಟಿಕ್ ಮಾತ್ರೆ ಸರದಿ! ಚಿತ್ರದುರ್ಗದಲ್ಲಿ ಪ್ಲಾಸ್ಟಿಕ್ ಮಾತ್ರೆ ಬಂದಿದೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಮಧುಮೇಹ ಮಾತ್ರೆಯಲ್ಲಿ ಪ್ಲಾಸ್ಟಿಕ್ ಆರೋಪ : ನೀರಲ್ಲೂ ಕರಗುತ್ತಿಲ್ಲ..?
ಸಾಮಾನ್ಯವಾಗಿ ಮಾತ್ರೆಯನ್ನು ನೀರಿಗೆ ಹಾಕಿದ್ರೆ ಮೂರ್ನಾಲ್ಕು ಗಂಟೆಯೊಳಗೆ ಕರಗುತ್ತದೆ. ಆದರೆ ಈ ಮಾತ್ರೆಯನ್ನು ಟೆಸ್ಟ್‌ಗಾಗಿ ಒಂದು ದಿನ ನೀರಿಗೆ ಹಾಕಿಟ್ಟರೂ ಕರಗದೇ ಹಾಗೆಯೇ ಇದೆ. ಹಾಗಾಗಿ ಇದನ್ನು ಸಾರ್ವಜನಿಕರಾರೂ ನಂಬಿ ಬಳಸಬಾರದು ಎಂದು ವಕೀಲರೊಬ್ಬರು ವಿನಂತಿಸಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ.