ಬಡ ಸೆಕ್ಯೂರಿಟಿ ಗಾರ್ಡ್‌ಗೆ ‘ಹುಲಿ’ಯಂತೆ ಥಳಿಸಿ ‘ಇಲಿ’ಯಂತೆ ಬಿಲ ಸೇರಿದ ಮಾಲೀಕ!

Oct 15, 2019, 5:47 PM IST

ಬೆಂಗಳೂರು (ಅ.15): ಬಡ ಸೆಕ್ಯೂರಿಟಿ ಗಾರ್ಡ್‌ಗಳಿಗೆ ರಾಕ್ಷಸೀಯ ರೀತಿಯಲ್ಲಿ ಥಳಿಸಿದ ವಿಡಿಯೋ ಒಂದು ವೈರಲ್ ಆಗಿದ್ದನ್ನು ನಾವು ವರದಿ ಮಾಡಿದ್ದೆವು.

ಪ್ರಕರಣಕ್ಕೆ ಸಂಬಂಧಿಸಿ Bangalore Security Force (BSF) ಎಂಬ ಸೆಕ್ಯೂರಿಟಿ ಸಂಸ್ಥೆ ಮಾಲೀಕ ಸಲೀಂ ಖಾನ್ ವಿರುದ್ಧ ಬೆಂಗಳೂರು ಪೊಲೀಸರು ದೂರು ದಾಖಲಿಸಿದ್ದಾರೆ.

ಆ ಬಡಪಾಯಿ ಗಾರ್ಡ್‌ಗಳಿಗೆ ಮೃಗೀಯ ರೀತಿಯಲ್ಲಿ ಥಳಿಸುವಾಗ, ತಾನು ದೊಡ್ಡ ಹುಲಿ ಎಂಬಂತೆ ಪೋಸು ಕೊಟ್ಟಿದ ಆ ಖಾನ್, ಈಗ ಇಲಿಯಂತೆ ಎಲ್ಲೋ ಬಿಲ ಸೇರಿಕೊಂಡಿದ್ದಾನೆ.  ಪೋಲಿಸರು ಆತನಿಗೆ ಬಲೆ ಬೀಸಿದ್ದಾರೆ.