Panchanga: ಇಂದು ಷಷ್ಠಿ ತಿಥಿ, ಸುಬ್ರಮಣ್ಯ ಸ್ವಾಮಿ ಆರಾಧನೆ ಮಾಡಿ...

May 11, 2023, 9:24 AM IST

ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಷಾಢ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಷಷ್ಠಿ ತಿಥಿ ಇರುವುದರಿಂದ ಸುಬ್ರಮಣ್ಯ ಸ್ವಾಮಿ ಆರಾಧನೆ ಮಾಡಬೇಕು.  ಷಷ್ಠಿ  ಸಂದರ್ಭದಲ್ಲಿ  ಸುಬ್ರಮಣ್ಯ ಸನ್ನಿದಿಗೆ ಹೋಗಿ ಪಂಚಾಮೃತ ಅಭಿಷೇಕ ಸೇವೆ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ. ಅದಲ್ಲದೆ  ವಟುಗಳನ್ನ, ಬ್ರಹ್ಮಚಾರಿಗಳನ್ನು ಗೌರವಿಸುವಂತದ್ದು, ಪಂಚೆ ಅಥವಾ ದಕ್ಷಿಣೆ, ಊಟ ಹೀಗೆ ಅವರ ಸೇವೆಯನ್ನು ಮಾಡಬೇಕು. ಇದರಿಂದ  ಸುಬ್ರಮಣ್ಯನ ಅನುಗ್ರಹವಾಗುತ್ತದೆ.ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ?  ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..