ಮೈಸೂರಿನಲ್ಲಿ ಗುರಾಯಿಸಿ ನೋಡಿದಕ್ಕೆ ಯುವಕನ ಕೊಲೆ: ನಾಲ್ವರ ಬಂಧನ

By Govindaraj S  |  First Published Jun 1, 2024, 9:40 PM IST

ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಯುವಕನನ್ನು ನಾಲ್ವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ನಡೆದಿದೆ. ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 


ಮೈಸೂರು (ಜೂ.01): ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಯುವಕನನ್ನು ನಾಲ್ವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ನಡೆದಿದೆ. ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉದಯಗಿರಿ ಬಳಿಯ ಶಾಂತಿನಗರ ನಿವಾಸಿ ಜಾವೀದ್ ಖಾನ್ ಎಂಬವರ ಪುತ್ರ ಅರ್ಬಾಜ್ ಖಾನ್ (18) ಕೊಲೆಯಾದವರು. ಅದೇ ಬಡಾವಣೆಯ ನಿವಾಸಿಗಳಾದ ಶಾದಿಲ್, ಶಹಬಾಜ್, ಶೋಯಬ್ ಮತ್ತು ಸಾಹಿಲ್ ಎಂಬವರೇ ಬಂಧಿತ ಆರೋಪಿಗಳು.

ಕೊಲೆಯಾದ ಅರ್ಬಾಜ್ ಖಾನ್ ಮತ್ತು ನಾಲ್ವರು ಆರೋಪಿಗಳು ಶಾಂತಿನಗರದ ನಿವಾಸಿಗಳಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದ. ಈ ವಿಚಾರದಲ್ಲಿ ಗಲಾಟೆ ಶುರುವಾಗಿದ್ದು, ನಾಲ್ವರು ಆರೋಪಿಗಳು ಸೇರಿಕೊಂಡು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ಆರೋಪಿ ಶಹಬಾಜ್ ಎಂಬಾತನಿಗೂ ಗಾಯವಾಗಿದೆ. ಈ ಸಂಬಂಧ ಉದಯಗಿರಿ ಠಾಣೆಯ ಇನ್ಸ್ ಪೆಕ್ಟರ್ ಕೆ.ಎನ್. ಸುಧಾಕರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Latest Videos

undefined

ಡಕಾಯಿತಿ ಆರೋಪಿ 1 ವರ್ಷದ ಬಳಿಕ ಸೆರೆ: ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ನಗರ ನಿವಾಸಿ ಜಗದೀಶ್‌(35) ಬಂಧಿತ. ಆರೋಪಿಯು ಕೆಂಪೇಗೌಡ ನಗರ ಠಾಣೆ ರೌಡಿ ಶೀಟರ್‌ ಆಗಿದ್ದಾನೆ. ಈತ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಶಸ್ತ್ರಾಸ್ತ್ರ ಕಾಯ್ದೆ ಮತ್ತು ವಿಶ್ವೇಶಪುರ ಠಾಣೆಯಲ್ಲಿ ದಾಖಲಾಗಿದ್ದ ಡಕಾಯಿತಿ ಪ್ರಕರಣದಲ್ಲಿ ಜೈಲು ಸೇರಿದ್ದ. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. 

ಚಂದ್ರಶೇಖರನ್‌ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ, ಪ್ರಕರಣ ಸಿಬಿಐಗೆ ಒಪ್ಪಿಸಿ: ಕೆ.ಎಸ್.ಈಶ್ವರಪ್ಪ

ಕಳೆದ ಒಂದು ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ಬಂಧನಕ್ಕೆ ವಾರೆಂಟ್‌ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡವು ಇತ್ತೀಚೆಗೆ ಆರೋಪಿಯು ಕೆಂಪಾಂಬುದಿ ಕೆರೆ ಬಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!