ಪುಟ್ಟಕ್ಕನ ಮಗಳು ಸ್ನೇಹಾ ಹಾಟ್​ ಫೋಟೋಶೂಟ್​: ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್​ ಅನ್ನೋದಾ ಫ್ಯಾನ್ಸ್​?

By Suchethana D  |  First Published Oct 21, 2024, 4:09 PM IST

ಪುಟ್ಟಕ್ಕನ ಮಗಳು ಸ್ನೇಹಾ ಅರ್ಥಾತ್​ ಸಂಜನಾ ಬುರ್ಲಿ ಹಾಟ್​ ಫೋಟೋಶೂಟ್ ಮಾಡಿದ್ರೆ,​ ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್​ ಅನ್ನೋದಾ ಫ್ಯಾನ್ಸ್​? 
 


ಸೀರಿಯಲ್​ ಅನ್ನೇ ರಿಯಲ್​ ಲೈಫ್​ ಅಂದುಕೊಳ್ಳುವ ಅದೆಷ್ಟೋ ಮಂದಿ ಇದ್ದಾರೆ. ಸೀರಿಯಲ್, ಸಿನಿಮಾಗಳಲ್ಲಿ ಬರುವ ನಟ-ನಟಿಯರನ್ನು ತಮ್ಮ ಮಾಡೆಲ್​ಗಳಾಗಿ ಆರಾಧಿಸುವ ದೊಡ್ಡ ವರ್ಗವೇ ಇದೆ. ಸೀರಿಯಲ್​ನ ನಟನೆನೇ ಬೇರೆ, ಅವರ ಖಾಸಗಿ ಬದುಕೇ ಬೇರೆ ಎಂದುಕೊಳ್ಳದವರು ಹಲವಾರು ಮಂದಿ ಇದ್ದಾರೆ. ಇದೇ ಕಾರಣಕ್ಕೆ ವಿಲನ್​ ಪಾತ್ರಧಾರಿಗಳಿಗೆ ಹೊರಗಡೆ ಹೋದಾಗಲೂ ಜನರು ನಿಂದಿಸುವುದು ಇದೆ, ಛೀಮಾರಿ ಹಾಕುವುದು ಇದೆ. ಇಂದು ಸೀರಿಯಲ್​ಗಳು ಎಷ್ಟರಮಟ್ಟಿಗೆ ವೀಕ್ಷಕರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಸೆಳೆದುಕೊಂಡಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಕೆಲವರು ತಮಾಷೆಗಾಗಿ ನಟಿಯರ ಕಾಲೆಳೆದರೆ, ಮತ್ತೆ ಹಲವರು ರಿಯಲ್​ ಲೈಫ್​ನಲ್ಲಿ ಕೂಡ ಸೀರಿಯಲ್​ ಥರನೇ ಮಾದರಿಯಾಗಿರಬೇಕು ಎಂದು ಬಯಸುತ್ತಾರೆ.  ಪುಟ್ಟಕ್ಕನ ಮಕ್ಕಳು ನಾಯಕಿ ಸ್ನೇಹಾ ಮೇಲೂ ಅಸಂಖ್ಯ ಜನರಿಗೆ ಅಭಿಮಾನ, ಪ್ರೀತಿ ಇದೆ. ಇದೇ  ಕಾರಣಕ್ಕೆ ರಿಯಲ್​ ಲೈಫ್​ನಲ್ಲಿಯೂ ಸ್ನೇಹಾ ಅಂದ್ರೆ ಸಂಜನಾ ಬುರ್ಲಿ ಅವರು ಹಾಗೆಯೇ ಇರಬೇಕು ಎಂದು ಬಯಸುವ ದೊಡ್ಡ ವರ್ಗವೇ ಇದೆ ಎನ್ನುವುದಕ್ಕೆ ಈಗ ಫೋಟೋಶೂಟ್​ ಒಂದಕ್ಕೆ ಬಂದಿರುವ ಕಮೆಂಟ್ಸ್​ ಸಾಕ್ಷಿಯಾಗಿದೆ. 

ಅಂದಹಾಗೆ, ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಸಂಜನಾ ಬುರ್ಲಿ. ಸಂಜನಾ ಬುರ್ಲಿ ಎಂದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಅದೇ ಸ್ನೇಹಾ ಎಂದರೆ ಸಾಕು, ತಮ್ಮ ಪರಿಚಯಸ್ಥರಲ್ಲಿ ಸ್ನೇಹಾ ಎನ್ನುವ ಹೆಸರು ಇದ್ದವರಿದ್ದರೂ ಮೊದಲಿಗೆ ನೆನಪಿಗೆ ಬರುವುದು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಖ್ಯಾತಿಯ ಸ್ನೇಹಾ ಅಲ್ಲವೆ? ಸದಾ ಟಿಆರ್​ಪಿಯಲ್ಲಿ ಮುಂದೆ ಇರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳೇ ಹೈಲೈಟ್​. ಎಷ್ಟೋ ಮಂದಿಗೆ ಮಾದರಿ ಹೆಣ್ಣೀಕೆ. ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ಇದರಲ್ಲಿ ಸ್ನೇಹಾಳ ಅಸಲಿ ಹೆಸರೇ ಸಂಜನಾ ಬುರ್ಲಿ. ಕಂಠಿ ಪಾತ್ರಧಾರಿ  ಧನುಷ್ ಎನ್ ಎಸ್. ಧಾರಾವಾಹಿಯ ಈ ಕ್ಯೂಟ್​ ಜೋಡಿ ಅದೆಷ್ಟು ಫೇಮಸ್​ ಎಂದರೆ, ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಅಂತಿದ್ದಾರೆ ಫ್ಯಾನ್ಸ್​! 

Tap to resize

Latest Videos

ಪುಟ್ಟಕ್ಕನ ಮಕ್ಕಳು ಸ್ನೇಹಾ ಭರ್ಜರಿ ರೀಲ್ಸ್​: ದೂರು ದಾಖಲಿಸಲು ಮುಂದಾದ ನೆಟ್ಟಿಗರು!

 ಸ್ನೇಹಾ ಅಲಿಯಾಸ್​ ಸಂಜನಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಹಾಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಸ್ಲಿಟೆಡ್​ ಡ್ರೆಸ್​ ಜೊತೆ ಮೈ ಕಾಣುವಂತ ಉಡುಗೆಯನ್ನು ತೊಟ್ಟುಕೊಂಡಿದ್ದಾರೆ. ಇವರು ತುಂಬಾ ಹಾಟ್​ ಆಗಿ ಕಾಣಿಸುತ್ತಿರುವುದಾಗಿ ಹಲವು ಅಭಿಮಾನಿಗಳು ಹೇಳುತ್ತಿದ್ದರೂ, ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸಂಜನಾ ಅಂದ್ರೆ ಸ್ನೇಹಾ ಜಿಲ್ಲಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ, ರಿಯಲ್​ ಲೈಫ್​ನಲ್ಲಿಯೂ ಇಂಥದ್ದೆಲ್ಲಾ ಡ್ರೆಸ್​​ ಹಾಕಬಾರದು. ಜಿಲ್ಲಾಧಿಕಾರಿ ಹುದ್ದೆಯ ಗೌರವ ಕಾಪಾಡಿ ಎಂದೆಲ್ಲಾ ಕಮೆಂಟ್​  ಮಾಡುತ್ತಿದ್ದಾರೆ. ಈ ಹಿಂದೆ ಹಾಟ್​ ಡಾನ್ಸ್​ ಮಾಡಿದಾಗ ಜಿಲ್ಲಾಧಿಕಾರಿ ಹೀಗೆಲ್ಲಾ ಡಾನ್ಸ್​  ಮಾಡಿದರೆ ಕೇಸ್​ ಹಾಕ್ತೀವಿ ಎಂದು ಕೆಲವರು ತಮಾಷೆ  ಮಾಡಿದ್ದು ಇದೆ. ಆದರೆ ಈಗ ಕೆಲವರು ಸೀರಿಯಲ್​​ ಆಗಿಯೇ ಈ ಉಪದೇಶ ಮಾಡಿದ್ದಾರೆ. 

undefined

 ಅಷ್ಟಕ್ಕೂ ಕೆಲ ದಿನಗಳ ಹಿಂದೆ ಸಂಜನಾ, ಟ್ಲುಟ್​ ಪುಟ್​ ಗಯಾಗೆ ಹಾಡಿಗೆ  ಸಕತ್​ ಡ್ಯಾನ್ಸ್​ ಮಾಡಿದ್ದರು. ಸಂಜನಾ ಅವರ ನೃತ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು.  ನೀವು ಸ್ನೇಹಾ ಆಗಿಯೂ ಸೂಪರ್​, ಸಂಜನಾ ಆಗಿಯೂ ಸೂಪರ್​ ಎಂದು ಹೊಗಳಿದ್ದರು.  ಬಂಗಾರಮ್ಮನ ಮನೆಯಲ್ಲಿಯೂ ನಿಮ್ದೇ ಹವಾ, ಸೋಷಿಯಲ್​ ಮೀಡಿಯಾದಲ್ಲಿಯೂ ನಿಮ್ದೇ ಹವಾ ಮೇಡಂ ಎಂದು ಹಲವರು ಕಮೆಂಟ್​ ಮೂಲಕ ಶ್ಲಾಘಿಸಿದ್ದರು.    ಸ್ನೇಹಾ ಪಾತ್ರದಲ್ಲಿ ನಿಮ್ಮನ್ನು ನೋಡಿದಾಗ ರಿಯಲ್​ ಲೈಫ್​ನಲ್ಲಿ ನೀವು ಇಷ್ಟೊಂದು ಚೆನ್ನಾಗಿ ನೃತ್ಯ ಮಾಡುತ್ತೀರಿ ಎಂದು ಹೇಳುವುದೇ ಕಷ್ಟ ಎಂದಿದ್ದರು. ಆದರೆ ಈಗ ಹಾಟ್​ ಅವತಾರದಲ್ಲಿ ನಟಿಯನ್ನು ನೋಡಲು ಕೆಲವು ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ ಎಂದು ಕಮೆಂಟ್​ ಮೂಲಕ ತಿಳಿದುಬರುತ್ತದೆ.  

ಮದುಮಗಳಂತೆ ಕಂಗೊಳಿಸಿದ ಪುಟ್ಟಕ್ಕನ ಮಗಳು ಸ್ನೇಹಾ: ಸಮ್​ಥಿಂಗ್​ ಸ್ಪೆಷಲ್ಲಾ ಕೇಳ್ತಿದ್ದಾರೆ ಫ್ಯಾನ್ಸ್​

click me!