ಝೀ ಎಂಟರ್’ಟೇನರ್ ರಿಯಾಲಿಟಿ ಶೋನಲ್ಲಿ ಚಿನ್ನುಮರಿ ಜಾಹ್ನವಿ ಸೈಕೋ ಜಯಂತ್ ಆಗಿ ಬದಲಾಗಿದ್ದು, ತನ್ನ ಮುದ್ದುಮರಿಗೆ ಯಾವ ರೀತಿ ಎಲ್ಲಾ ಟಾರ್ಚರ್ ಕೊಟ್ಟಿದ್ದಾಳೆ ನೋಡಿ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸ (Lakshmi Nivasa). ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಅಷ್ಟೇ ಜನಮನ ಗೆಲ್ಲೋದರಲ್ಲಿ ಯಶಸ್ವಿಯಾಗಿದೆ. ಹಾಗಾಗಿಯೇ ಈ ಸೀರಿಯಲ್ ಟಿಆರ್ಪಿ ಯಲ್ಲೂ ಸಹ ಮುಂದಿದೆ ಅಂದ್ರೆ ತಪ್ಪಲ್ಲ. ಅದರಲ್ಲೂ ಜಯಂತ್ ಮತ್ತು ಜಾಹ್ನವಿಯ ಜೋಡಿ ಹೆಚ್ಚು ಮೋಡಿ ಮಾಡಿದೆ. ಜಯಂತ್ ಗೆ ಜಾಹ್ನವಿ ಮೇಲಿರುವ ಪಾಸೆಸಿವ್ ನೆಸ್, ಆಕೆಯ ಪ್ರೀತಿ, ಮಾತು ಎಲ್ಲವೂ ತನಗಾಗಿ ಮಾತ್ರ ಸೀಮಿತವಾಗಿರಬೇಕು, ಬೇರೆ ಯಾರಿಗೂ ಅದು ಸಿಗಬಾರದು ಎನ್ನುವ ಮೆಂಟಾಲಿಟಿ ಆತನನ್ನು ವೀಕ್ಷಕರ ಬಾಯಲ್ಲಿ ಸೈಕೋ ಜಯಂತ್ ಅಂತಾನೆ ಕರೆಯುವಂತೆ ಮಾಡಿದೆ. ಆದರೆ ಇದರಲ್ಲೊಂದು ಟ್ವಿಸ್ಟ್ ಸಿಕ್ಕರೆ ಹೇಗಾದಿತು?
ಲಕ್ಷ್ಮೀ ನಿವಾಸ ಜಯಂತ್ ಮೂಗಿನ ಮೇಲೆ ಗಾಯ… ಸೈಕೋ ನಟನೆ ನೋಡಿ ವೀಕ್ಷಕರಿಂದಲೇ ಪೆಟ್ಟು ಬಿತ್ತಾ?
ಏನಪ್ಪಾ ಟ್ವಿಸ್ಟ್ ಅಂದ್ರೆ ಪಾಪದ ಚಿನ್ನುಮರಿ ಜಾಹ್ನವಿ, ಇನ್ನು ಮುಂದೆ ಜಯಂತ್ ಥರ ಸೈಕೋ ರೀತಿ ಆಡೋಕೆ ಶುರು ಮಾಡಿದ್ರೆ ಹೇಗಿರುತ್ತೆ? ಚೆನ್ನಾಗಿರುತ್ತೆ ಅಲ್ವಾ ನೋಡೋದಕ್ಕೆ. ಖಂಡಿತವಾಗಿಯೂ ಮನರಂಜನೆ ಸಿಗುತ್ತೆ. ಇದರ ಒಂದು ಜಲಕ್ ಝೀ ಎಂಟರ್’ಟೇನರ್ಸ್ (Zee Entertainer) ಕಾರ್ಯಕ್ರಮದಲ್ಲಿ ನಡೆದಿದೆ. ನಿರೂಪಕ ಅಕುಲ್ ಬಾಲಾಜಿ (Akul Balaji), ಪಾತ್ರಗಳನ್ನು ಅದಲು ಬದಲು ಮಾಡಲು ಹೇಳಿದ್ದಾರೆ. ಅದರಂತೆ ಜಾಹ್ನವಿ ಸೈಕೋ ಜಯಂತ್ ಆದರೆ, ಜಯಂತ್ ಮುದ್ದು ಮರಿಯಾಗಿ ಬದಲಾಗಿದ್ದಾರೆ.
ಜಯಂತ್ ಕಾರ್ಯಕ್ರಮದ ಗೆಸ್ಟ್ ಜೊತೆಗೆ ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ ಹಾಡಿಗೆ ರೊಮ್ಯಾಂಟಿಕ್ ಆಗಿ ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದರೆ, ಇಬ್ಬರನ್ನು ದುರುಗುಟ್ಟಿಕೊಂಡು ನೋಡುತ್ತಾ ಬರುವ ಚಿನ್ನುಮರಿ, ಆಕೆಯನ್ನು ಜಯಂತ್ ಕೈಯಿಂದ ಬಿಡಿಸಿ ದೂರ ಮಾಡಿ, ಜಯಂತ್ ಕೈ ಹಿಡಿದು, ಇದೇ ಕೈಯಲ್ಲಿ ಅಲ್ವಾ, ಅವಳನ್ನು ಮುಟ್ಟಿದ್ದು ನೀವು. ಮುದ್ದು ಮರಿ ಯಾಕೆ ಹೀಗೆ ಮಾಡ್ತಿದ್ದೀರಿ ನೀವು? ನನ್ನ ಪ್ರೀತಿ ನಿಮಗೆ ಅರ್ಥಾನೆ ಆಗ್ತಿಲ್ವಾ? ನನ್ನ ಪ್ರೀತಿ ನಿಮಗೆ ಬೇಡವಾಗೋಯ್ತಾ? ಇದೇ ಕೈಯಲ್ಲಿ ಅಲ್ವಾ? ನೀವು ಅವಳನ್ನು ಮುಟ್ಟಿರೋದು? ಹಾಗಿದ್ರೆ ಅದಕ್ಕೆ ಪನಿಶ್ಮೆಂಟ್ ಸಿಗಲೇಬೇಕಲ್ವಾ? ಎನ್ನುತ್ತಾ ಜಯಂತ್ ಕೈ ಮೇಲೆ ಹೊಡಿತಾಳೆ ಜಾಹ್ನವಿ. ನಂತರ ಅಯ್ಯೋ ನಿಮ್ಮ ಕೈಗೆ ಹೊಡೆದು ನೋವು ಮಾಡಿದ್ನಲ್ಲ ಎನ್ನುತ್ತಾ, ನನ್ನ ಮುದ್ದುಮರಿಗೆ ನಾನೇ ನೋವು ಮಾಡಿದೆ ಎನ್ನುತ್ತಾ, ತನ್ನ ಕೈಗಳಿಗೂ ಹೊಡೆದುಕೊಳ್ಳುತ್ತಾಳೆ.
undefined
ಚಿನ್ನುಮರಿ ಚಿನ್ನುಮರಿ ಅಂತ ತಲೆ ತಿನ್ನೋ ಜಯಂತ ಸೆಟ್‌ನಲ್ಲಿ ಚಿನ್ನುಮರಿ ಜೊತೆ ಹೇಗಿರ್ತಾರೆ ನೋಡಿ!
ಜಾಹ್ನವಿ ಮತ್ತು ಜಯಂತ್ ಮನೋಜ್ಞ ಅಭಿನಯ ಕಂಡು, ಪಾತ್ರಗಳು ಅದಲು ಬದಲಾದಾಗ ಏನಾಗುತ್ತೆ ಅನ್ನೋದನ್ನ ನೋಡಿ, ಅಕುಲ್ ಬಾಲಾಜಿ ಸೇರಿ ವೇದಿಕೆ ಮೇಲಿದ್ದ ಎಲ್ಲರೂ ಮೆಚ್ಚಿ ಚಪ್ಪಾಳೆ ತಟ್ಟಿದ್ದಾರೆ. ವಿಶಿಲ್ ಹಾಕಿ ಸಂಭ್ರಮಿಸಿದ್ದಾರೆ. ಇನ್ನು ವೀಕ್ಷಕರು ಸಹ ಜಾಹ್ನವಿ ನಟನೆಯನ್ನು ಹಾಡಿ ಹೊಗಳಿದ್ದಾರೆ.