ವಿಮಾನದಲ್ಲಿ ಲಗೇಜ್ ಇಡೋ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದ ಮಹಿಳೆ, ಪ್ರಯಾಣಿಕರಿಗೆ ಶಾಕ್!

By Vinutha Perla  |  First Published May 10, 2024, 3:08 PM IST

ವಿಮಾನದಲ್ಲಿ ಪ್ರಯಾಣಿಸುವುದು ಯಾವಾಗಲೂ ಖುಷಿಯ ವಿಚಾರವೇ. ಆದರೆ ಪ್ರಯಾಣ ಸುದೀರ್ಘವಾದಾಗ ಹೆಚ್ಚು ಸುಸ್ತಾಗುತ್ತದೆ. ಹೆಚ್ಚು ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಬೇಕು ಅಥವಾ ಮಲಗಬೇಕು ಅನಿಸುತ್ತದೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ವಿಮಾನದೊಳಗೆ ಅದೇನ್ ಮಾಡಿದ್ದಾಳೆ ನೋಡಿ..


ವಿಮಾನದಲ್ಲಿ ಪ್ರಯಾಣಿಸುವುದು ಯಾವಾಗಲೂ ಖುಷಿಯ ವಿಚಾರವೇ. ಆದರೆ ಪ್ರಯಾಣ ಸುದೀರ್ಘವಾದಾಗ ಹೆಚ್ಚು ಸುಸ್ತಾಗುತ್ತದೆ. ಹೆಚ್ಚು ರಿಲ್ಯಾಕ್ಸ್ ಆಗಿ ಕುಳಿತುಕೊಳ್ಳಬೇಕು ಅಥವಾ ಮಲಗಬೇಕು ಅನಿಸುತ್ತದೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ವಿಮಾನದೊಳಗೆ ಹೆಚ್ಚು ಆರಾಮವಾಗಿ ಮಲಗಲು ಲಗ್ಗೇಜ್ ಕಂಪಾರ್ಟ್‌ಮೆಂಟ್‌ನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಯೊಬ್ಬರು ಓವರ್‌ಹೆಡ್ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಆರಾಮವಾಗಿ ಮಲಗಿಕೊಂಡಿರುವ ವೀಡಿಯೊವೊಂದು ಇತ್ತೀಚಿಗೆ ವೈರಲ್ ಆಗಿದೆ.

ಮೇ 6ರಂದು ಮೆಕ್ಸಿಕೋದ ಅಲ್ಬುಕರ್ಕ್‌ನಿಂದ ಯುಎಸ್‌ನ ಫೀನಿಕ್ಸ್‌ಗೆ ನಿಗದಿಪಡಿಸಲಾದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಯೊಬ್ಬರು ಓವರ್‌ಹೆಡ್ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿರುವ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾದ ಈ ಕ್ಲಿಪ್, ಅಪರಿಚಿತ ಮಹಿಳೆ ಕಂಫರ್ಟೆಬಲ್ ಆಗಿ ಮಲಗಿರುವುದನ್ನು ತೋರಿಸುತ್ತದೆ. 

Tap to resize

Latest Videos

undefined

ಹೇಳದೇ ಕೇಳದೇ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗೆ ಪರ್ಮನೆಂಟ್ ರಜೆ ನೀಡಿದ ಏರ್ ಇಂಡಿಯಾ..!

ವೈರಲ್ ಆಗಿರುವ ವಿಡಿಯೋಗೆ ಮಹಿಳೆಯಾಗಲಿ ಅಥವಾ ವಿಮಾನಯಾನ ಸಂಸ್ಥೆಯಾಗಲಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ನ್ಯೂಯಾರ್ಕ್ ಪೋಸ್ಟ್ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ, ಅದು ಶೀಘ್ರವಾಗಿ ವೈರಲ್ ಆಯಿತು. ಬರೋಬ್ಬರಿ 34,000 ವೀಕ್ಷಣೆಗಳನ್ನು ಗಳಿಸಿತು. ಕುತೂಹಲಕಾರಿಯಾಗಿ, ವಿಮಾನದ ಲಗೇಜ್ ವಿಭಾಗದಲ್ಲಿ ಯಾರಾದರೂ ಮಲಗಿರುವುದು ಅಥವಾ ಅಡಗಿಕೊಂಡಿರುವುದು ಇದೇ ಮೊದಲ ನಿದರ್ಶನವಲ್ಲ, ಈ ಹಿಂದೆ ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಇದೇ ರೀತಿಯ ಘಟನೆಗಳು ಸಂಭವಿಸಿವೆ. 

ಈ ಹಿಂದೆ, ಸೌತ್‌ವೆಸ್ಟ್ ಏರ್‌ಲೈನ್ಸ್‌ನ ಫ್ಲೈಟ್ ಅಟೆಂಡೆಂಟ್ ಪ್ರಯಾಣಿಕರು ಹತ್ತುವ ಮೊದಲು ಓವರ್‌ಹೆಡ್ ಬಿನ್‌ನಲ್ಲಿ ಅಡಗಿಕೊಂಡು ತಮಾಷೆ ಮಾಡಲು ನಿರ್ಧರಿಸಿದ್ದರು. ಈ ಅನಿರೀಕ್ಷಿತ ಘಟನೆಯನ್ನು ವೆರೋನಿಕಾ ಲಾಯ್ಡ್ ಎಂಬ ಹೆಸರಿನ ಪ್ರಯಾಣಿಕನು ಸೆರೆಹಿಡಿದಿದ್ದು, ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ವರದಿಯ ಪ್ರಕಾರ, ಪೆನ್ಸಿಲ್ವೇನಿಯಾಕ್ಕೆ ಮನೆಗೆ ಹಿಂದಿರುಗುತ್ತಿದ್ದಾಗ ಲಾಯ್ಡ್ ಸೆರೆಹಿಡಿದ ಘಟನೆಯು ವಿಮಾನದ ಬಾಗಿಲು ಮುಚ್ಚುವ ಮೊದಲು ಸಂಭವಿಸಿದೆ. ಮಹಿಳಾ ಅಟೆಂಡೆಂಟ್ ಲಗ್ಗೇಜ್ ಅಪಾರ್ಟ್‌ಮೆಂಟ್‌ನಲ್ಲಿ ಮಲಗಿ ಜನರಿಗೆ ಶಾಕ್ ನೀಡುತ್ತಾರೆ.

ಬಾನೆತ್ತರದ ಪ್ರೀತಿ, ವಿಮಾನದಲ್ಲಿ ಗಗನಸಖಿಗೆ ಲವ್ ಪ್ರಪೋಸ್ ಮಾಡಿದ ಪೈಲೆಟ್, ಮುಂದೇನಾಯ್ತು?

ಈ ಅಸಾಮಾನ್ಯ ಕೃತ್ಯವನ್ನು ತಮಾಷೆ ಎಂದು ವಿವರಿಸಿದ ವಿಮಾನಯಾನ ಸಂಸ್ಥೆ, 10 ನಿಮಿಷಗಳ ನಂತರ ಫ್ಲೈಟ್ ಅಟೆಂಡೆಂಟ್ ಕಂಪಾರ್ಟ್‌ಮೆಂಟ್‌ನಿಂದ ಕೆಳಗೆ ಜಿಗಿದಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಯಾವುದೇ ಅಡೆತಡೆಗಳಿಲ್ಲದೆ ವಿಮಾನ ಹಾರಾಟ ಮುಂದುವರೆಯಿತು ಎಂದು ಸಹ ಸ್ಪಷ್ಟಪಡಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by New York Post (@nypost)

click me!