ನಾವು ಸತ್ತಿದ್ದಕ್ಕೆ ಯಾರು ಅಳ್ತಾರೆ ? ಅಂತ್ಯ ಸಂಸ್ಕಾರಕ್ಕೆ ಬರೋದ್ಯಾರು? ಇಲ್ಲಿ ಅದನ್ನು ಫೀಲ್ ಮಾಡ್ಕೋಬಹುದು!

By Roopa HegdeFirst Published May 9, 2024, 4:49 PM IST
Highlights

ಜಗತ್ತಿನಲ್ಲಿ ವಿಚಿತ್ರ ಹಬ್ಬಗಳಿವೆ. ಜೀವಂತ ವ್ಯಕ್ತಿ ಶವಪೆಟ್ಟಿಗೆಯಲ್ಲಿ ಮಲಗಿ ತನ್ನ ಶವ ಸಂಸ್ಕಾರ ನೋಡುವ ಹಬ್ಬವನ್ನೂ ಮಾಡಲಾಗುತ್ತೆ. ಈ ಹಬ್ಬ ತನ್ನದೇ ಆದ ವಿಶೇಷತೆ ಹೊಂದಿದೆ. 

ವಿಶ್ವಾದ್ಯಂತ ಜನರು ನಾನಾ ರೀತಿಯ ಹಬ್ಬಗಳನ್ನು ಆಚರಿಸುತ್ತಾರೆ. ಹೋಳಿ, ಟೊಮಾಟಿನಾ, ಹ್ಯಾಲೋವೀನ್, ದೀಪಾವಳಿಯಂತಹ ಹಬ್ಬಗಳನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ಎಲ್ಲರೂ ಸೇರಿ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ್ರೆ ಇನ್ನೊಂದು ಕಡೆ ಪರಸ್ಪರ ಟೊಮೊಟೊ ಹೊಡೆದುಕೊಂಡು ಟೊಮಾಟಿನಾ ಆಚರಿಸುತ್ತಾರೆ. ಹ್ಯಾಲೋವೀನ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಭೂತದ ವೇಷ ಹಾಕಿಕೊಂಡು ಆಚರಿಸುವ ಈ ಹಬ್ಬ ಭಾರತದಲ್ಲೂ ಈಗ ಪ್ರಸಿದ್ಧಿ. ಫುಡ್ ಫೆಸ್ಟ್ (Food Fest), ಮ್ಯೂಜಿಕ್ ಫೆಸ್ಟ್ (Music Fest) ಸೇರಿ ನಾನಾ ರೀತಿಯ ಉತ್ಸವಗಳು ಆಗಾಗ ನಡೆಯುತ್ತಿರುತ್ತವೆ. ಇಂಥಹದ್ದೇ ವಿಚಿತ್ರ ಹಬ್ಬವೊಂದನ್ನು ಜಪಾನಿನಲ್ಲಿ ಜನರು ಆಚರಿಸುತ್ತಾರೆ. ಇದನ್ನು ಡೆತ್ ಫೆಸ್ಟಿವಲ್ (Death Festival) ಎಂದು ಕರೆಯಲಾಗುತ್ತದೆ. 

ಶವಪೆಟ್ಟಿಗೆ (Coffin) ಯಲ್ಲಿ ಶವದಂತೆ ಮಲಗ್ತಾರೆ ಜನ..! : ಸಾವು (Death) ಎಂದಾಗ ಮನಸ್ಸಿನಲ್ಲೊಂದು ಭಯ ಹಾದು ಹೋಗುತ್ತದೆ. ಸಾವು ಭಯಾನಕವಾಗಿರುತ್ತದೆ ಎಂದು ಜನರು ಭಾವಿಸ್ತಾರೆ. ಆದ್ರೆ ಜಪಾನಿನಲ್ಲಿ ನಡೆಯುವ ಈ ಡೆತ್ ಫೆಸ್ಟಿವಲ್ (Death Festival), ಸಾವಿನ ಭಯವನ್ನು ಕಡಿಮೆ ಮಾಡುತ್ತದೆ. ಸಾವು ಕ್ರೋರವಾಗಿರೋದಿಲ್ಲ ಎಂಬುದನ್ನು ಈ ಹಬ್ಬ ಬಿಂಬಿಸುತ್ತದೆ. ಈ ಹಬ್ಬದಲ್ಲಿ ಜನರು ಶವದ ಪೆಟ್ಟಿಗೆಯಲ್ಲಿ ಶವದಂತೆ ಮಲಗುತ್ತಾರೆ. ವರ್ಚುವಲ್ ರಿಯಾಲಿಟಿ ಗ್ಲಾಸ್‌ಗಳ ಸಹಾಯದಿಂದ ಜನರು ಸಾವಿನ ನಂತರ ತಮ್ಮ ಅಂತಿಮ ವಿಧಿಗಳನ್ನು ಅನುಭವಿಸುತ್ತಾರೆ. ಇದಲ್ಲದೆ ಸಾವಿನ ನಂತರದ ಪ್ರಪಂಚವನ್ನು ಅನ್ವೇಷಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ.

ರೈಲು ಟಿಕೆಟ್ ಇರೋದು ಪ್ರಯಾಣಕ್ಕೆ ಮಾತ್ರವಲ್ಲ ನೀವು ಈ ಉಚಿತ ಸೇವೆಯನ್ನು ಸಹ ಪಡೀಬೋದು

ಎನ್ ಒಜಿ (NGO), ಹೊಸ ಮಾಧ್ಯಮ ಕಂಪನಿಗಳು ಮತ್ತು ಅಂತ್ಯಕ್ರಿಯೆಯ ವೃತ್ತಿಪರರು ಸೇರಿ ಟೋಕಿಯೊ ಮೂಲದ ಸಂಸ್ಥೆಗಳ ಒಕ್ಕೂಟ ಈ ಉತ್ಸವವನ್ನು ಆಯೋಜಿಸುತ್ತದೆ. ಶಿಬುಯಾದಲ್ಲಿ ಈ ಡೆತ್ ಫೆಸ್ಟ್ ಆಚರಿಸಲಾಗುತ್ತದೆ. ಆರು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ.  ವರ್ಚುವಲ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಿಕೊಂಡು ಜನರು ಸಾವಿನ ನಂತರ ಪ್ರಪಂಚವನ್ನು ಅನುಭವಿಸುವ ಅವಕಾಶವನ್ನು ಪಡೆಯುತ್ತಾರೆ. ಇಲ್ಲಿ ಜನರಿಗೆ ಸಾವಿನ ನಂತ್ರದ ಜೀವನವನ್ನು ಗಮನದಲ್ಲಿಟ್ಟುಕೊಂಡೇ ಆಹಾರ ನೀಡಲಾಗುತ್ತದೆ. 

ಸಾವಿನ ಬಗ್ಗೆ ಜನರ ಆಲೋಚನೆಯನ್ನು ಬದಲಿಸುವುದು, ಸಾವನ್ನು ಎದುರಿಸಲು ಮತ್ತು ಜೀವನದೊಂದಿಗೆ ಸಂಪರ್ಕಿಸಲು ಜನರನ್ನು ಪ್ರೋತ್ಸಾಹಿಸುವುದು ಈ ಉತ್ಸವದ ಉದ್ದೇಶವಾಗಿದೆ. ಈ ಉತ್ಸವಕ್ಕೆ ಸಂಬಂಧಿಸಿದಂತೆ ಬರೆದ ಒಂದು ಪುಸ್ತಕದಲ್ಲಿ ಇದು ಸಾವಿನ ಥೀಮ್ ಒಳಗೊಂಡಿದೆ. ಪ್ರೀತಿ, ಕೃತಜ್ಞತೆ ಮತ್ತು ಸಂಬಂಧಗಳಂತಹ ಜೀವನದ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಬರೆಯಲಾಗಿದೆ. 

ಜಪಾನ್ ಹೆಚ್ಚಿನ ಮರಣ ಪ್ರಮಾಣ, ಕಡಿಮೆ ಜನನ ಪ್ರಮಾಣ ಮತ್ತು ವಯಸ್ಸಾದ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಜನರಿಗೆ ಸಾವಿನ ಬಗ್ಗೆ ಅರಿವು ಮೂಡಿಸಿ, ಇರುವ ಸಮಯವನ್ನು ಹೇಗೆ ಕಳೆಯಬೇಕು ಎಂಬುದನ್ನು ತಿಳಿಸಲು ಈ ಫೆಸ್ಟಿವಲ್ ಆಚರಣೆ ಮಾಡ್ತಿರೋದಾಗಿ ಅದ್ರ ಪ್ರಾಯೋಜಕರು ಹೇಳಿದ್ದಾರೆ. ಮಧ್ಯ ಚೀನಾದ ಶಾಂಘೈ ಮತ್ತು ಈಶಾನ್ಯದ ಶೆನ್ಯಾಂಗ್ ನಗರದ ಅನೇಕ ಪ್ರದೇಶಗಳಲ್ಲೂ ಡೆತ್ ಫೆಸ್ಟಿವಲ್ ಆಚರಣೆ ಮಾಡಲಾಗುತ್ತದೆ. 

ಶವಪೆಟ್ಟಿಗೆಯಲ್ಲಿ ಮಲಗೆದ್ದ ಕೆಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪದವಿ ಪ್ರವೇಶ ಪರೀಕ್ಷೆಯಲ್ಲಿ ನಾನು ಫೇಲ್ ಆಗಿದ್ದೆ. ಇದ್ರಿಂದ ಜೀವನವೇ ಬೇಡ ಎನ್ನಿಸಿತ್ತು. ಆದ್ರೆ ಶವಪೆಟ್ಟಿಗೆಯಲ್ಲಿ ಮಲಗಿ ಎದ್ದಾಗ ಜೀವನದ ಸತ್ಯ ಗೊತ್ತಾಯ್ತು. ಇದು ಜೀವನದ ಅತ್ಯಂತ ಸಣ್ಣ ವಿಷ್ಯ ಎಂಬುದು ಅರಿವಾಯ್ತು ಎಂದು ವ್ಯಕ್ತಿಯೊಬ್ಬ ಹೇಳಿದ್ದಾನೆ. 

ಜೂನ್ 14 ರಿಂದ ಇವರ ಒಳ್ಳೆಯ ದಿನಗಳು ಸ್ಟಾರ್ಟ್, ಬುಧ ನಿಂದ ಜಾಕ್‌ಪಾಟ್ ಖಜಾನೆ ಫುಲ್

ಜಪಾನ್ ನಲ್ಲಿ ಮಾತ್ರವಲ್ಲ ದಕ್ಷಿಣ ಕೊರಿಯಾದಲ್ಲಿ ಕೂಡ ಇಂಥ ಹಬ್ಬ ನಡೆದಿದೆ. 2012 ರಿಂದ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಸಾವಿರಾರು ಜನರು ಜೀವಂತ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಅವರನ್ನು ಮುಚ್ಚಿದ ಶವಪೆಟ್ಟಿಗೆಯಲ್ಲಿ ಸಮಾಧಿ ಮಾಡಲಾಗಿತ್ತು. 

click me!