Train Travel: ಚಳಿಗಾಲದಲ್ಲೂ ಎಸಿ ಕೋಚ್ ಗೆ ಯಾಕೆ ನೀಡ್ಬೇಕು ಹೆಚ್ಚಿನ ಹಣ..!

By Suvarna NewsFirst Published Feb 3, 2023, 4:45 PM IST
Highlights

ಚಳಿಗಾಲದಲ್ಲಿ ಬೆಚ್ಚಗೆ ಪ್ರಯಾಣ ಬೆಳೆಸಲು ಇಷ್ಟಪಡುವ ಜನ ಎಸಿ ಕೋಚ್ ಬಿಟ್ಟು ಬೇರೆ ಕೋಚ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಚಳಿಗಾಲದಲ್ಲೂ ಆರಾಮವಾಗಿ ಎಸಿ ಕೋಚ್ ನಲ್ಲಿ ಪ್ರಯಾಣ ಬೆಳೆಸಬಹುದು. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
 

ಚಳಿಗಾಲದಲ್ಲಿ ಒಂದು ಕಂಬಳಿ ಸಾಲೋದಿಲ್ಲ ಎನ್ನುವವರಿದ್ದಾರೆ. ಬೆಚ್ಚಗಿನ ಮನೆಯಲ್ಲಿಯೇ ಜನರು ಎರಡು ರಗ್ ಹೊದ್ದು ಮಲಗ್ತಾರೆ. ಇನ್ನು ಮನೆಯಿಂದ ಹೊರಗೆ ಹೋಗುವ ವೇಳೆ ಸ್ವೆಟರ್, ಕಾರ್ಫ್ ಇರ್ಲೇಬೇಕು. ಮನೆಯಲ್ಲಿ ಹೀಟರ್ ಇಡೀ ದಿನ ಉರಿಯೋದಿದೆ. ಅಪ್ಪಿತಪ್ಪಿಯೂ ಜನರು ಫ್ಯಾನ್, ಎಸಿ ಬಳಸೋದಿಲ್ಲ. ಆದ್ರೆ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ, ಚಳಿಗಾಲವಿರಲಿ ಇಲ್ಲ ಬೇಸಿಗೆ ಕಾಲವಿರಲಿ, ಎಸಿ ಕೋಚ್ ನಲ್ಲಿ ಎಸಿ ಆನ್ ಆಗಿರುತ್ತೆ. ಹಾಗೆ ರೈಲ್ವೆ ಇಲಾಖೆ ಎಸಿ ಕೋಚ್ ಗೆ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತದೆ.

ಚಳಿಗಾಲ (Winter) ದಲ್ಲಿ ನಮಗೆ ಎಸಿ ಬೇಡ. ಎಸಿ (Ac) ಕೋಚ್ ನಲ್ಲಿ ಎಸಿ ಹಾಕದೆ ಕಡಿಮೆ ಶುಲ್ಕ ಪಡೆದು ಪ್ರಯಾಣಕ್ಕೆ ಅನುಮತಿ ನೀಡಿ ಅಂತಾ ನೀವು ಕೇಳ್ಬಹುದು. ಆದ್ರೆ ಇದು ಅಸಾಧ್ಯ. ಎಸಿ ಕೋಚ್ (Coach) ಟಿಕೆಟ್ ಗೆ ಕಾಲ ಯಾವುದೇ ಇದ್ರೂ ರೇಟ್ ಯಾಕೆ ಜಾಸ್ತಿ, ಹಾಗೆ ಎಸಿಗಾಗಿಯೇ ಏಕೆ ಶುಲ್ಕ ಪಾವತಿ ಮಾಡ್ಬೇಕು ಎಂಬುದನ್ನು ನಾವು ಹೇಳ್ತೆವೆ.

ಈ ದೇಶದಲ್ಲಿ ಮೃತದೇಹದೊಂದಿಗೆ ನೃತ್ಯ ಮಾಡಿ ಸಂಭ್ರಮಾಚರಿಸ್ತಾರೆ ಜನ

ಎಸಿ ಬಂದ್ ಮಾಡಿ ಪ್ರಯಾಣ ಅಸಾಧ್ಯ : ಮೈಕೊರೆಯುವ ಚಳಿಯಲ್ಲಿ ಎಸಿ ಹಾಕಿದ್ರೆ ಕೋಪ ನೆತ್ತಿಗೇರುತ್ತೆ. ಚಳಿಗಾಲದಲ್ಲೂ ಎಸಿ ಯಾಕೆ, ಹಾಗೆ ಪ್ರಯಾಣ ಬೆಳೆಸೋಣ ಅಂತ ಅಂದುಕೊಳ್ಳುವವರಿದ್ದಾರೆ. ಎಸಿ ಕೋಚ್ ನಾರ್ಮಲ್ ಕೋಚ್ ಗಿಂತ ಭಿನ್ನವಾಗಿರುತ್ತದೆ. ಇದ್ರಲ್ಲಿ ಯಾವುದೇ ಕಿಟಕಿ ಬಾಗಿಲನ್ನು ತೆಗೆಯಲು ಸಾಧ್ಯವಿಲ್ಲ. ಹಾಗೆಯೇ ಎಸಿ ಎಲ್ಲರಿಗೂ ಸರಿಯಾಗಿ ಸಿಗಲಿ ಎನ್ನುವ ಕಾರಣಕ್ಕೆ ಬಾಗಿಲನ್ನು ಕ್ಲೋಸ್ ಮಾಡಿರಲಾಗಿರುತ್ತದೆ. ಈ ಸಂದರ್ಭದಲ್ಲಿ ಎಸಿ ಕೂಡ ಬಂದ್ ಮಾಡಿದ್ರೆ ಸಮಸ್ಯೆ ಎದುರಾಗುತ್ತದೆ.

ಎಸಿ ಇಲ್ಲದ ಕಾರಣ, ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಜನರ ಉಸಿರುಕಟ್ಟಿದಂತಾಗುತ್ತದೆ. ಉಸಿರಾಟಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗೋದಿಲ್ಲ. ಹಾಗೆಯೇ ವ್ಯಕ್ತಿ ಆಮ್ಲಜನಕ ತೆಗೆದುಕೊಂಡು ಇಂಗಾಲ ಡೈ ಆಕ್ಸೈಡ್ ಬಿಡೋದ್ರಿಂದ ಎಸಿ ಕೋಚ್ ಗ್ಯಾಸ್ ಚೇಂಬರ್ ನಂತಾಗುತ್ತದೆ. ಹಾಗಾಗಿ ಚಳಿಗಾಲದಲ್ಲೂ ಎಸಿ ಆನ್ ಮಾಡಿಯೇ ಪ್ರಯಾಣ ಮಾಡುವುದು ಅತ್ಯಗತ್ಯ.

ಬೇಸಿಗೆಯಲ್ಲಿ ಎಸಿ ಕೆಲಸ ನಮಗೆ ತಿಳಿದಿದೆ. ತಣ್ಣನೆ ಕೋಚ್ ನಲ್ಲಿ ಪ್ರಯಾಣ ಬೆಳೆಸಿದ್ರೆ ಪ್ರಯಾಣ ಹಿತಕರವಾಗಿರುತ್ತದೆ ಎನ್ನುವ ಕಾರಣಕ್ಕೆ ಅನೇಕರು ಬೇಸಿಗೆಯಲ್ಲಿ ಎಸಿ ಕೋಚ್ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಚಳಿಗಾಲದಲ್ಲಿ ಕೂಡ ಎಸಿ ಕೋಚ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಎಸಿ ಕೋಚ್ ಬೇಸಿಗೆಯಲ್ಲಿ ಶಾಖದಿಂದ ಮಾತ್ರ ನಮ್ಮನ್ನು ರಕ್ಷಿಸೋದಿಲ್ಲ, ಚಳಿಗಾಲದಲ್ಲಿ ಚಳಿಯಿಂದಲೂ ನಮ್ಮನ್ನು ರಕ್ಷಿಸುತ್ತದೆ. ಎಸಿ ಕೋಚ್‌ನ ತಾಪಮಾನವು 22-26 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಚಳಿಗಾಲದಲ್ಲಿಯೂ ಹಾಗೆ ಇರುತ್ತದೆ. ಬೇಸಿಗೆಯಲ್ಲಿ ಎಸಿಗೆ ಬಳಸುವ ಮಾರ್ಗವನ್ನೇ ಚಳಿಗಾಲದಲ್ಲಿಯೂ ಬಳಸಲಾಗುತ್ತದೆ. ಚಳಿಗಾಲದಲ್ಲಿ ಹೊರಗಿನ ತಾಪಮಾನ 4-5 ಡಿಗ್ರಿ ಇದ್ದರೂ ಕೋಚ್ ಒಳಗಿನ ತಾಪಮಾನ 20-22 ಡಿಗ್ರಿ ಮಾತ್ರ ಇರುತ್ತದೆ. ಹಾಗಾಗಿ ನಮಗೆ ಬೆಚ್ಚಗಿನ ಅನಭವವಾಗುತ್ತದೆ. 

ಅಮೇರಿಕನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನಿಂಗ್ ಇಂಜಿನಿಯರ್ಸ್ ನಡೆಸಿದ ಸಂಶೋಧನೆಯ ಪ್ರಕಾರ, ನಾವು ಯಾವಾಗ್ಲೂ 23 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನದಲ್ಲಿ ಮಲಗಬಾರದು. ಇದ್ರಿಂದ ಉಸಿರಾಟದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಇದಲ್ಲದೇ ಶ್ವಾಸಕೋಶದ ಸೋಂಕು, ದೇಹದಲ್ಲಿ ಶುಷ್ಕತೆ, ತಲೆನೋವು, ಕೀಲು ನೋವು ಮುಂತಾದ ಸಮಸ್ಯೆಗಳೂ ಬರಬಹುದು. ಹಾಗಾಗಿ ನೀವು ಎಸಿಯನ್ನು 23.5 ಡಿಗ್ರಿ ತಾಪಮಾನದಿಂದ 25.5 ಡಿಗ್ರಿ ತಾಪಮಾನಕ್ಕೆ ಸೆಟ್ ಮಾಡಿ ಎನ್ನುತ್ತಾರೆ ತಜ್ಞರು. 

ವಾವ್ಹ್‌..ಸ್ವರ್ಗವೇ ಧರೆಗಿಳಿದಂತೆ..ಮಂಜು ಹೊದ್ದು ಮಲಗಿದ ಸುಂದರ ಕಾಶ್ಮೀರ

ನೀವು ಎಸಿ ಕೋರ್ಚ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಎಸಿ ಆದಷ್ಟು 24 ಡಿಗ್ರಿ ಇರುವಂತೆ ನೋಡಿಕೊಳ್ಳಿ. ಹಾಗೆಯೇ ರೈಲಿನ ಎಸಿ ಕೋಚ್ ದರ ಚಳಿಗಾಲದಲ್ಲಿ ಕಡಿಮೆ ಹಾಗೂ ಬೇಸಿಗೆಯಲ್ಲಿ ಹೆಚ್ಚಾಗುವುದಿಲ್ಲ ಎಂಬುದನ್ನು ನೆನೆಪಿಟ್ಟುಕೊಳ್ಳಿ.
 

click me!