Maha Shivratri : ಈ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಶಿವರಾತ್ರಿ

By Suvarna News  |  First Published Feb 3, 2023, 12:49 PM IST

ಶಿವರಾತ್ರಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಶಿವರಾತ್ರಿ ಪೂಜೆ ಜೊತೆ ಜಾತ್ರೆ ವೀಕ್ಷಣೆ ಮಾಡ್ಬೇಕೆಂದ್ರೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.
 


ಹಿಂದುಗಳು ಶಿವನ ಆರಾಧನೆಯನ್ನು ಮಹಾಶಿವರಾತ್ರಿ ದಿನ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮಾಘ ಮಾಸದ ಅಮಾವಾಸ್ಯೆಯಂದು ಶಿವರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಬಾರಿ ಫೆಬ್ರವರಿ 15ರಂದು ಮಹಾಶಿವರಾತ್ರಿ ನಡೆಯಲಿದೆ. 

ಶಿವರಾತ್ರಿ (Shivratri) ಯಂದು ಜಾಗರಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಹಾಗೆಯೇ ಭೋಲೆನಾಥ (Bholenath) ನ ಭಕ್ತರು ಭಾರತದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ  ಮಾಡ್ತಾರೆ. ಈ ಬಾರಿ ಮಹಾಶಿವರಾತ್ರಿಯಂದು ಶಿವನ ದರ್ಶನ ಪಡೆಯಲು ನೀವು ಬಯಸಿದ್ದರೆ, ಕರ್ನಾಟಕ (Karnataka) ಬಿಟ್ಟು ಬೇರೆ ರಾಜ್ಯದ ದೇವಸ್ಥಾನಕ್ಕೆ ಭೇಟಿ ನೀಡುವ ಆಲೋಚನೆಯಲ್ಲಿದ್ದರೆ  ನಾವಿಂದು ಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಕೆಲ ಭಾರತದ ದೇವಸ್ಥಾನಗಳ ವಿವರವನ್ನು ನಿಮಗೆ ನೀಡ್ತೇವೆ.    

Tap to resize

Latest Videos

ಸೋಮನಾಥ (Somnath) ದೇವಾಲಯ : ಈ ದೇವಾಲಯವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಮಹಾಶಿವರಾತ್ರಿಯ ವಿಶೇಷ ಹಬ್ಬದ ಸಂದರ್ಭದಲ್ಲಿ  ಈ ದೇವಾಲಯವನ್ನು ಎಲ್ಇಡಿ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಶಿವನ ನೇರ ದರ್ಶನ ಮತ್ತು ಆರಾಧನೆಗೆ ಭಕ್ತರಿಗೆ ಈ ದಿನ ಅವಕಾಶ ನೀಡಲಾಗುತ್ತದೆ.  

ನೀಲಕಂಠ ಮಹಾದೇವ ದೇವಸ್ಥಾನ :  ಹರಿದ್ವಾರವು ಘಟ್ಟಗಳಿಗೆ ಮಾತ್ರವಲ್ಲದೆ ನೀಲಕಂಠದಂತಹ ಪ್ರಸಿದ್ಧ ದೇವಾಲಯಗಳಿಗೂ ಪ್ರಸಿದ್ಧವಾಗಿದೆ. ಇಲ್ಲಿರುವ ನೀಲಕಂಠ ದೇವಾಲಯವು ಮಹಾದೇವನ ಭಕ್ತರಿಗೆ ಬಹಳ ಪ್ರಿಯವಾಗಿದೆ. ಮಹಾಶಿವರಾತ್ರಿಯ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಇಶಾ ಯೋಗ ಕೇಂದ್ರ :  ಸದ್ಗುರುಗಳು ಶಿವನ 112 ಅಡಿ ಉಕ್ಕಿನ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅದು ಉಕ್ಕಿನಿಂದ ಮಾಡಲ್ಪಟ್ಟಿದೆ. ಈ ಪ್ರತಿಮೆ ಕೊಯಮತ್ತೂರಿನಲ್ಲಿದೆ. ಮಹಾಶಿವರಾತ್ರಿಯಂದು ಇಲ್ಲಿ ವಿಶೇಷ ಹಬ್ಬವನ್ನು ಆಚರಿಸಲಾಗುತ್ತದೆ. ಶಿವರಾತ್ರಿಯಂದು ಜನರು ನೃತ್ಯ, ಸಂಗೀತ ಮತ್ತು ಧ್ಯಾನದ ಜೊತೆಗೆ ಸದ್ಗುರುಗಳೊಂದಿಗೆ ಭಜನೆ ಮಾಡ್ತಾ ಜಾಗರಣೆ ಮಾಡ್ತಾರೆ. 

ಸಂಪತ್ತು, ಸಂತೋಷಕ್ಕಾಗಿ ಶಿವರಾತ್ರಿ ದಿನ ತಪ್ಪದೇ ಈ ಕೆಲಸ ಮಾಡಿ

ಮಹಾಕಾಳೇಶ್ವರ ದೇವಸ್ಥಾನ : ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿಪ್ರಾ ನದಿಯ ದಡದಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿರುತ್ತದೆ. ಅವಂತಿಯಲ್ಲಿ ವಾಸಿಸುತ್ತಿದ್ದ ಜನರನ್ನು ದೂಷಾನಾ ಎಂಬ ರಾಕ್ಷಸ  ಹಿಂಸಿಸುತ್ತಿದ್ದನಂತೆ. ಈ ವೇಳೆ ಕಾಣಿಸಿಕೊಂಡ ಶಿವ ರಾಕ್ಷಸನನ್ನು ಹೊಡೆದ ಅಲ್ಲಿನ ಜನರನ್ನು ರಕ್ಷಿಸಿದನಂತೆ. ನಂತ್ರ ಶಿವ ಇಲ್ಲಿಯೇ ನೆಲೆ ನಿಂತ ಎನ್ನುವ ನಂಬಿಕೆಯಿದೆ. 

ಭೂತನಾಥ ದೇವಾಲಯ : ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಒಂದು ಸಣ್ಣ ಪಟ್ಟಣವಿದೆ. ಆದರೆ ಇಲ್ಲಿಯೂ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸುಮಾರು 5 ನೇ ಶತಮಾನದ ಮೊದಲು, ಮಂಡಿಯ ರಾಜಮನೆತನವು ಮಹಾಶಿವರಾತ್ರಿಯ ಜಾತ್ರೆಯನ್ನು ಆಯೋಜಿಸಲು ಪ್ರಾರಂಭಿಸಿತು ಎನ್ನಲಾಗುತ್ತದೆ.  ಅಂದಿನಿಂದ  ಮಹಾಶಿವರಾತ್ರಿಯ ಹಬ್ಬವನ್ನು ಒಂದು ವಾರ ಮುಂಚಿತವಾಗಿ ಇಲ್ಲಿ ಆಚರಿಸಲಾಗುತ್ತದೆ. 

ಉಮಾನಂದ ದೇವಸ್ಥಾನ : ಈ ದೇವಾಲಯವು ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿದೆ. ಇಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯವನ್ನು ಬ್ರಹ್ಮಪುತ್ರ ನದಿಯ ಮೋರ ದ್ವೀಪದಲ್ಲಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಉತ್ಸವಗಳನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಬರ್ತಾರೆ. 

ಭಾವನಾತ್ ತಲೇತಿ : ಈ ದೇವಾಲಯವು ಗುಜರಾತ್‌ನ ಜುನಾಗಢ ಪ್ರದೇಶದಲ್ಲಿದೆ. ಮಹಾಶಿವರಾತ್ರಿಯಂದು ಇಲ್ಲಿ ಬೃಹತ್ ಜಾತ್ರೆ ನಡೆಯುತ್ತದೆ. ದೂರದೂರುಗಳಿಂದ ಇಲ್ಲಿಗೆ ಬರುವ ಭಕ್ತರು, ದೇವರ ದರ್ಶನ ಪಡೆಯುತ್ತಾರೆ. ಈ ಜಾತ್ರೆಯು ಶಿವರಾತ್ರಿಯ 5 ದಿನಗಳ ಮೊದಲು ಪ್ರಾರಂಭವಾಗಿ ಶಿವರಾತ್ರಿಯ ದಿನದಂದು ಕೊನೆಗೊಳ್ಳುತ್ತದೆ.

Mahashivaratri Special: ಪರಶಿವನನ್ನು ಒಲಿಸುವ ರುದ್ರಾಕ್ಷಿಯ ರಹಸ್ಯ ಬಲ್ಲಿರಾ?

ಬರೀ ಈ ದೇವಾಲಯಗಳು ಮಾತ್ರವಲ್ಲ ಭಾರತದ ಪ್ರತಿಯೊಂದು ಶಿವನ ದೇವಸ್ಥಾನದಲ್ಲೂ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೆಲ ದೇವಸ್ಥಾನಗಳಲ್ಲಿ ಶಿವಲಿಂಗ ಸ್ಪರ್ಶ ಮಾಡುವ ಹಾಗೂ ಅಭಿಷೇಕ ಮಾಡುವ ಅವಕಾಶವನ್ನು ಭಕ್ತರಿಗೆ ಶಿವರಾತ್ರಿ ದಿನ ನೀಡಲಾಗುತ್ತದೆ. 

click me!