ಚೀನಾದ ಮುಖ್ಯ ಭೂಭಾಗದ ಶೂನ್ಯ-ಕೋವಿಡ್ ತಂತ್ರದೊಂದಿಗೆ ಹೆಚ್ಚಾಗಿ ಹೊಂದಿಕೊಂಡಿರುವ ಹಾಂಗ್‌ಕಾಂಗ್‌ಗೆ ನೀವು ಉಚಿತವಾಗಿ ವಿಮಾನದಲ್ಲಿ ಹೋಗಬಹುದಾಗಿದೆ. ಕೋವಿಡ್ - 19 ನಿಂದ ನಲುಗಿ ಹೋಗಿರುವ ಹಾಂಗ್‌ಕಾಂಗ್‌ನಲ್ಲಿ ಪ್ರವಾಸೋದ್ಯಮ ಬಿದ್ದುಹೋಗಿ, ಆರ್ಥಿಕತೆ ನಲುಗಿ ಹೋಗಿದೆ.
ಹಾಂಗ್‌ಕಾಂಗ್ (ಫೆಬ್ರವರಿ 2, 2023): ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲೇ ಇದ್ದು ಹಲವರಿಗೆ ಸಾಕಾಗಿಬಿಟ್ಟಿತ್ತು. ಈ ಹಿನ್ನೆಲೆ ಕೊರೊನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ಜನ ನಾನಾ ಕಡೆ ಟ್ರಿಪ್ ಹೋಗೋಕೆ ಆರಂಭಿಸಿ ಹಲವು ತಿಂಗಳುಗಳೇ ಕಳೆದಿದೆ. ಇನ್ನು, ಬೇರೆ ದೇಶಕ್ಕೆ ಹೋಗ್ಬೇಕು ಅನ್ನೋದಕ್ಕೆ ನಿಮಗೂ ಆಸೆ ಇದ್ಯಾ..? ಆದ್ರೆ, ದುಡ್ಡಿನದ್ದೇ ತೊಂದರೆ ಅಂತೀರಾ..? ಹಾಗಾದ್ರೆ, ನೀವು ಆ ಚಿಂತೆ ಬಿಡಿ.. ಯಾಕಂದ್ರೆ, ನೀವು ಈ ದೇಶಕ್ಕೆ ಹೋಗೋಕೆ ವಿಮಾನ ಟಿಕೆಟ್ ಉಚಿತವಾಗೇ ಸಿಗುತ್ತೆ ನೋಡಿ. ನಿಮ್ಮ ಜತೆ ನಿಮ್ಮ ಗೆಳೆಯರನ್ನೋ, ಅಥವಾ ನಿಮ್ಮ ಫ್ಯಾಮಿಲಿಯನ್ನೂ ಕರ್ಕೊಂಡು ಆರಾಮಾಗಿ ಈ ದೇಶಕ್ಕೆ ಹೋಗಿ ಬನ್ನಿ. ಹಾಗಾದ್ರೆ, ಯಾವ ದೇಶನಪ್ಪಾ ಇದು ಅಂತೀರಾ..?
ಚೀನಾದ ಮುಖ್ಯ ಭೂಭಾಗದ ಶೂನ್ಯ-ಕೋವಿಡ್ ತಂತ್ರದೊಂದಿಗೆ ಹೆಚ್ಚಾಗಿ ಹೊಂದಿಕೊಂಡಿರುವ ಹಾಂಗ್‌ಕಾಂಗ್‌ಗೆ ನೀವು ಉಚಿತವಾಗಿ ವಿಮಾನದಲ್ಲಿ ಹೋಗಬಹುದಾಗಿದೆ. ಕೋವಿಡ್ - 19 ನಿಂದ ನಲುಗಿ ಹೋಗಿರುವ ಹಾಂಗ್‌ಕಾಂಗ್‌ನಲ್ಲಿ ಪ್ರವಾಸೋದ್ಯಮ ಬಿದ್ದುಹೋಗಿ, ಆರ್ಥಿಕತೆ ನಲುಗಿ ಹೋಗಿದೆ. ಈ ಹಿನ್ನೆಲೆ, ಪ್ರವಾಸೋದ್ಯಮ ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ಹಾಂಗ್‌ಕಾಂಗ್ ಈ ಕ್ರಮ ಕೈಗೊಂಡಿದೆ.
ಇದನ್ನು ಓದಿ; ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಹೋದ ಪೋಷಕರು!
ಸಿಂಗಾಪುರ, ಜಪಾನ್ ಮತ್ತು ತೈವಾನ್‌ನಂತಹ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಕೋವಿಡ್ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಿದೆ. ಈಗ ಹಲೋ ಹಾಂಗ್ ಕಾಂಗ್ ಎಂಬ ಪ್ರವಾಸೋದ್ಯಮ ಅಭಿಯಾನವನ್ನು ಬುಧವಾರ ಪ್ರಾರಂಭಿಸಿದ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಅವರು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸ್ವಾಗತಿಸಲು ನಗರವು 5 ಲಕ್ಷ ಉಚಿತ ವಿಮಾನ ಟಿಕೆಟ್‌ಗಳನ್ನು ನೀಡುತ್ತದೆ ಎಂದು ಘೋಷಿಸಿದ್ದಾರೆ.
ಹಾಂಗ್ ಕಾಂಗ್ ಈಗ ಚೀನಾದ ಮುಖ್ಯ ಭೂಭಾಗ ಮತ್ತು ಇಡೀ ಅಂತರರಾಷ್ಟ್ರೀಯ ಜಗತ್ತಿಗೆ ಮನಬಂದಂತೆ ಸಂಪರ್ಕ ಹೊಂದಿದೆ ಮತ್ತು ಯಾವುದೇ ಪ್ರತ್ಯೇಕತೆ, ಸಂಪರ್ಕತಡೆಯನ್ನು ಇರುವುದಿಲ್ಲ ಎಂದು ಅವರು ಈ ವೇಳೆ ಹೇಳಿದ್ದಾರೆ. ಪ್ರವಾಸಿಗರು, ಬ್ಯುಸಿನೆಸ್ ಪ್ರಯಾಣಿಕರು ಮತ್ತು ಹತ್ತಿರದ ಹಾಗೂ ದೂರದ ಹೂಡಿಕೆದಾರರು ಇಲ್ಲಿಗೆ ಬಂದು 'ಹಲೋ, ಹಾಂಗ್ ಕಾಂಗ್' ಎಂದು ಹೇಳಲು ಇದು ಪರಿಪೂರ್ಣ ಸಮಯವಾಗಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Viral News: ಮೊದಲ ಬಾರಿಗೆ ವಿಮಾನ ಪ್ರಯಾಣ, ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ಯುವಕ
ಈ ಅಭಿಯಾನದ ಅಡಿಯಲ್ಲಿ, 2 ಶತಕೋಟಿ ಹಾಂಗ್ ಕಾಂಗ್ ಡಾಲರ್ (£210 ಮಿಲಿಯನ್) ಮೌಲ್ಯದ ಹೆಚ್ಚಿನ ವಿಮಾನ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. 3 ಹಾಂಗ್ ಕಾಂಗ್ ಮೂಲದ ವಿಮಾನಯಾನ ಸಂಸ್ಥೆಗಳಿಂದ ಲಕ್ಕಿ ಡ್ರಾ, Buy One Get One Free ಮತ್ತು ಗೇಮ್ಸ್ ಸೇರಿದಂತೆ ವಿವಿಧ ಪ್ರಚಾರ ಚಟುವಟಿಕೆಗಳ ಮೂಲಕ ಫ್ರೀ ಏರ್ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಹಲೋ ಹಾಂಗ್‌ಕಾಂಗ್ ಯೋಜನೆ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಸುಮಾರು 6 ತಿಂಗಳವರೆಗೆ ಇರುತ್ತದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫ್ರೆಡ್ ಲ್ಯಾಮ್ ಹೇಳಿದ್ದಾರೆ. ಈ ರೀತಿ ಫ್ರೀ ಏರ್ ಟಿಕೆಟ್ ಪಡೆದವರು ಇನ್ನೂ ಇಬ್ಬರು ಅಥವಾ ಮೂವರು ಸಂಬಂಧಿಕರು ಹಾಘೂ ಸ್ನೇಹಿತರನ್ನು ಸಹ ತಮ್ಮೊಂದಿಗೆ ಕರೆತರಬಹುದು ಎಂದು ನಾವು ಭಾವಿಸುತ್ತೇವೆ. ನಾವು ಕೇವಲ 500,000 ವಿಮಾನ ಟಿಕೆಟ್‌ಗಳನ್ನು ನೀಡುತ್ತಿದ್ದರೂ, ಇದು ಹಾಂಗ್ ಕಾಂಗ್‌ಗೆ 1.5 ಮಿಲಿಯನ್‌ಗೂ ಹೆಚ್ಚು ಸಂದರ್ಶಕರನ್ನು ತರಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ ಎಂದೂ ಫ್ರೆಡ್ ಲ್ಯಾಮ್ ಆಶಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋನಲ್ಲಿ ಟ್ರಾವೆಲ್ ಮಾಡೋ ಪ್ರಯಾಣಿಕರ ಗಮನಕ್ಕೆ, ಈ ವಸ್ತುಗಳಿಲ್ಲಿ ನಿಷಿದ್ಧ!
ವಿಮಾನಯಾನ ಸಂಸ್ಥೆಗಳು ಹಂತ ಹಂತವಾಗಿ ಈ ಉಚಿತ ಟಿಕೆಟ್‌ಗಳನ್ನು ವಿತರಿಸಲಿದ್ದು, ಆಗ್ನೇಯ ಏಷ್ಯಾದ ಮಾರುಕಟ್ಟೆಗಳು ಮೊದಲು ಲಾಭ ಪಡೆಯಲಿವೆ. ಬೇಸಿಗೆಯಲ್ಲಿ ಹಾಂಗ್ ಕಾಂಗ್ ನಿವಾಸಿಗಳಿಗೆ ಹೆಚ್ಚುವರಿ 80,000 ವಿಮಾನ ಟಿಕೆಟ್‌ಗಳನ್ನು ನೀಡಲಾಗುವುದು ಎಂದೂ ಅವರು ಹೇಳಿದರು. ಗ್ರೇಟರ್ ಬೇ ಏರಿಯಾದಲ್ಲಿ ವಾಸಿಸುವವರೂ ಸಹ ಈ ನೀತಿಯಿಂದ ಪ್ರಯೋಜನ ಪಡೆಯುತ್ತಾರೆ, ಇದು ಒಟ್ಟಾರೆಯಾಗಿ 7,00,000 ಟಿಕೆಟ್‌ಗಳನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
ಅಲ್ಲದೆ, ಹಾಂಗ್‌ಕಾಂಗ್‌ಗೆ ಹೋಗೋ ಪ್ರವಾಸಿಗರು ನಗರದಲ್ಲಿ ಇತರ ಪ್ರೋತ್ಸಾಹಕಗಳ ಜೊತೆಗೆ ವಿಶೇಷ ಕೊಡುಗೆಗಳು ಮತ್ತು ವೋಚರ್‌ಗಳನ್ನು ಆನಂದಿಸಬಹುದು ಎಂದು ಲೀ ಹೇಳಿದರು. ಹಾಂಗ್ ಕಾಂಗ್‌ಗೆ 2019 ರಲ್ಲಿ 56 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, ಕೋವಿಡ್ ನಿರ್ಬಂಧಗಳಿಂದ 3 ವರ್ಷದಿಂದ ತೀವ್ರ ಪ್ರವಾಸಿಗರ ಕೊರತೆ ಇದ್ದು, ಇದು ಪ್ರವಾಸೋದ್ಯಮ ಕ್ಷೇತ್ರ ಮತ್ತು ಅದರ ಆರ್ಥಿಕತೆಯನ್ನು ಧ್ವಂಸಗೊಳಿಸಿದೆ.
ಇದನ್ನೂ ಓದಿ: ಈ ನಗರದಲ್ಲಿ ಬಸ್ಸೇ ಇಲ್ಲ..ಜನರು ಕಾಲೇಜು, ಕಚೇರಿಗೆ ಹೋಗೋದು ವಿಮಾನದಲ್ಲೇ !