ಚೆನ್ನಾಗಿದೆ ಅಂತ ರೈಲಿನಲ್ಲಿ ಸಿಗೋ ಬೆಡ್ ಶೀಟ್ ಬ್ಯಾಗಿಗೆ ಹಾಕಿಕೊಳ್ತೀರಾ? ನಿಮ್ಮ ತಪ್ಪು, ಯಾರಿಗೋ ಶಿಕ್ಷೆ !

Published : Jul 14, 2026, 01:01 PM IST
Railway AC Coach

ಸಾರಾಂಶ

ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ಸೌಕರ್ಯ ಹೆಚ್ಚು ಮಾಡ್ತಿದೆ. ಆದ್ರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ತಾರೆ. ಸಾರ್ವಜನಿಕ ಆಸ್ತಿಗೆ ಹಾನಿ, ಕಳ್ಳತನದಂತ ಕೆಲ್ಸಕ್ಕೆ ಕೈ ಹಾಕ್ತಾರೆ. ಇದ್ರಿಂದ ನಷ್ಟ ಯಾರಿಗೆ?

ಭಾರತೀಯ ರೈಲ್ವೆ ಇಲಾಖೆ ಎಸಿ ಕೋಚ್ ಪ್ರಯಾಣಿಕರ ಅನುಕೂಲಕ್ಕೆ ಬೆಡ್‌ ಶೀಟ್‌ ಗಳು, ಟವೆಲ್‌ ಗಳು, ದಿಂಬು ಮತ್ತು ಕಂಬಳಿಗಳಂತಹ ಅಗತ್ಯ ವಸ್ತುಗಳನ್ನು ಒದಗಿಸುತ್ತದೆ. ಆದ್ರೆ ಕೆಲವು ಪ್ರಯಾಣಿಕರು ಈ ಸರ್ಕಾರಿ ಆಸ್ತಿಗಳನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗ್ತಾರೆ. ಇದು ರೈಲ್ವೆ ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಮಾಹಿತಿ ಪ್ರಕಾರ ಪ್ರತಿ ವರ್ಷ ಲಕ್ಷಾಂತರ ಬೆಡ್ಶೀಟ್ಗಳು ಮತ್ತು ಟವೆಲ್ಗಳು ರೈಲಿನಿಂದ ಕಾಣೆಯಾಗುತ್ವೆ. ಇದರಿಂದ ರೈಲ್ವೆ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವಾಗ್ತಿದೆ.

ಕಳ್ಳತನಕ್ಕೆ ಯಾರು ಹೊಣೆ? 

ರೈಲ್ವೆ ಇಲಾಖೆ ನೀಡುವ ವಸ್ತುಗಳನ್ನು ಸಾರ್ವಜನಿಕರ ಕೊಂಡೊಯ್ದೆ ಅದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡೋದು ಸಹಜ. ಪ್ರಯಾಣಿಕರ ತಪ್ಪಿಗೆ ಪ್ರಾಮಾಣಿಕ ರೈಲ್ವೆ ನೌಕರರು ಹೊಣೆ ಹೊರಬೇಕಾ? ರೈಲ್ವೆ ಇಲಾಖೆ ಅಧಿಕೃತ ನಿಯಮಗಳು ಮತ್ತು ಸೇವಾ ಷರತ್ತುಗಳ ಪ್ರಕಾರ, ರೈಲುಗಳಿಂದ ಕದ್ದ ಈ ವಸ್ತುಗಳನ್ನು ಮರುಪಡೆಯುವುದು ಬಹಳ ಕಠಿಣ ಕೆಲ್ಸ. ನಿಯಮದ ಪ್ರಕಾರ, ಕೋಚ್ ಅಟೆಂಡೆಂಟ್ ಅಥವಾ ಬೆಡ್ರೋಲ್ಗಳಿಗೆ ಜವಾಬ್ದಾರರಾಗಿರುವ ಹೊರಗುತ್ತಿಗೆ ಮಾರಾಟಗಾರ ಇದಕ್ಕೆ ನೇರ ಜವಾಬ್ದಾರರಾಗಿರುತ್ತಾರೆ.

ದಕ್ಷಿಣ ಭಾರತದ 'ಕಾಶ್ಮೀರ' ಎಂದು ಕರೆಯಲ್ಪಡುವ ಸುಂದರ ತಾಣ ಯಾವುದು ಗೊತ್ತಾ?

ಅಟೆಂಡೆಂಟ್ ಜವಾಬ್ದಾರಿ ಏನು?

 ರೈಲು ಹೊರಡುವ ಮತ್ತು ಗಮ್ಯಸ್ಥಾನ ನಿಲ್ದಾಣಕ್ಕೆ ಬರುವ ನಡುವೆ ಕೋಚ್ನಲ್ಲಿ ಸಂಗ್ರಹವಾಗಿರುವ ಎಲ್ಲಾ ಬೆಡ್ರೋಲ್ಗಳು ಮತ್ತು ಬಟ್ಟೆಗಳ ಸುರಕ್ಷತೆಗೆ ಕೋಚ್ ಗೈಡ್ ಅಥವಾ ಅಟೆಂಡೆಂಟ್ ಜವಾಬ್ದಾರಿ. ಅವರು ಡಿಪೋದಿಂದ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಗಮ್ಯಸ್ಥಾನಕ್ಕೆ ಹಿಂತಿರುಗಿದ ನಂತ್ರ ಲಿನಿನ್ ಇಲಾಖೆ ವಸ್ತುಗಳನ್ನು ಮರುಎಣಿಕೆ ಮಾಡುತ್ತದೆ. ಈ ಸಮಯದಲ್ಲಿ ವಸ್ತುಗಳ ಸಂಖ್ಯೆ ಕಡಿಮೆ ಇದ್ದರೆ ಅಟೆಂಡೆಂಟ್ನ ಸಂಬಳದಿಂದ ಕದ್ದ ವಸ್ತುಗಳ ಮೌಲ್ಯವನ್ನು ಕಡಿತಗೊಳಿಸಲಾಗುತ್ತದೆ.

ನಿಯಮಗಳೇನು?

ಕೆಲ ಮಾರ್ಗಗಳಲ್ಲಿ ಬೆಡ್ರೋಲನ್ನು ಖಾಸಗಿ ಮಾರಾಟಗಾರರಿಗೆ ಹೊರಗುತ್ತಿಗೆ ನೀಡಲಾಗುತ್ತದೆ. ಇಲ್ಲಿ ವಸ್ತುಗಳು ಕಳ್ಳತನವಾದ್ರೆ ಹೊರಗುತ್ತಿಗೆ ನೀಡಿದವರ ಮಾಸಿಕ ಬಿಲ್ ನಲ್ಲಿ ಹಣ ಕಡಿತವಾಗುತ್ತದೆ. ಅವರು ತಮ್ಮ ಸಿಬ್ಬಂದಿಯಿಂದ ನಷ್ಟ ವಸೂಲಿ ಮಾಡ್ತಾರೆ.

Famous Forts: ಭಾರತದ ಅತ್ಯಂತ ಸುಂದರ ಮತ್ತು ನಿಗೂಢ ಕೋಟೆಗಳು; ಇವುಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?

ಇದು ಕಷ್ಟ 

ನಿದ್ರಿಸುತ್ತಿರುವ ಪ್ರಯಾಣಿಕರ ಬ್ಯಾಗ್ಗಳನ್ನು ಹುಡುಕುವುದು ಅಥವಾ ಇಳಿಯುವಾಗ ಅವರ ವಸ್ತುಗಳನ್ನು ಬಲವಂತವಾಗಿ ಪರಿಶೀಲಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಇದರ ಹೊರತಾಗಿಯೂ, ರೈಲ್ವೆ ತನ್ನ ಕಠಿಣ ನಿಯಮಗಳ ಅಡಿಯಲ್ಲಿ, ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡುತ್ತದೆ. ಈ ನಷ್ಟ ಮತ್ತು ನೌಕರರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ರೈಲ್ವೆ ರಕ್ಷಣಾ ಪಡೆ (RPF) ಈಗ ರೈಲುಗಳಲ್ಲಿ ಆಗಾಗ್ಗೆ ಅನಿರೀಕ್ಷಿತ ತಪಾಸಣೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಭಾರತದ 'ಕಾಶ್ಮೀರ' ಎಂದು ಕರೆಯಲ್ಪಡುವ ಸುಂದರ ತಾಣ ಯಾವುದು ಗೊತ್ತಾ?
Famous Forts: ಭಾರತದ ಅತ್ಯಂತ ಸುಂದರ ಮತ್ತು ನಿಗೂಢ ಕೋಟೆಗಳು; ಇವುಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?