
ನೀವು ವಿದೇಶ ಪ್ರವಾಸ ಮಾಡುವ ಕನಸು ಕಾಣುತ್ತಿದ್ದರೆ, ಈ ದೇಶಕ್ಕೆ ನೀವು ಭೇಟಿ ಮಾಡೋದನ್ನು ಮರಿಬೇಡಿ. ಯಾಕಂದ್ರೆ ಇಲ್ಲಿ ನೀವು ಜೇಬಲ್ಲಿ 1000 ರೂ ಹಿಡ್ಕೊಂಡು ಹೋದ್ರೂ ರಿಚ್ ಫೀಲ್ ಆಗ್ತೀರಿ. ಸ್ಥಳೀಯ ಕರೆನ್ಸಿಗೆ ಹೋಲಿಸಿದರೆ ಭಾರತೀಯ ರೂಪಾಯಿ ಗಮನಾರ್ಹವಾಗಿ ಹೆಚ್ಚಿನ ಮೌಲ್ಯವನ್ನು ಹೊಂದಿರುವ ದೇಶ ಇದಾಗಿದೆ. ಕೇಳಿ ಶಾಕ್ ಆಯ್ತು ಅಲ್ವಾ? ಆ ದೇಶ ಬೇರೆ ಯಾವುದೂ ಅಲ್ಲ ಉಜ್ಬೇಕಿಸ್ತಾನ್.. ಇಲ್ಲಿ, ನೀವು ₹100 ಗೆ ಸುಮಾರು 13,000–15,000 ಉಜ್ಬೇಕಿಸ್ತಾನ್ ಸೋಮ್ (UZS) ಪಡೆಯಬಹುದು, ಆದರೂ ಈ ಅಂಕಿ ಅಂಶವು ವಿನಿಮಯ ದರಗಳ ಆಧಾರದ ಮೇಲೆ ಏರಿಳಿತಗೊಳ್ಳುತ್ತದೆ. ಭಾರತೀಯ ಕರೆನ್ಸಿಗೆ ಇಲ್ಲಿ ಹೆಚ್ಚಿನ ಫೇಸ್ ವ್ಯಾಲ್ಯೂ ಇರೋದರಿಂದ ಹೆಚ್ಚಿನ ಜನರು ಇದೀಗ ಉಜ್ಬೇಕಿಸ್ತಾನ್ ಟ್ರಾವೆಲ್ ಮಾಡುತ್ತಿದ್ದಾರೆ.
ಉಜ್ಬೇಕಿಸ್ತಾನ್‌ನ ಅಧಿಕೃತ ಕರೆನ್ಸಿ ಉಜ್ಬೇಕಿಸ್ತಾನ್ ಸೋಮ್ (UZS). ಇದರ ಪ್ರತಿ ಯೂನಿಟ್‌ನ ಮೌಲ್ಯವು ಭಾರತೀಯ ರೂಪಾಯಿಗಿಂತ ತುಂಬಾನೆ ಕಡಿಮೆಯಾಗಿದೆ. ಹಾಗಾಗಿ, ನೀವು ಸಣ್ಣ ಪ್ರಮಾಣದ ಭಾರತೀಯ ಕರೆನ್ಸಿಗೆ ಬದಲಾಗಿ ಸಾವಿರಾರು ಸೋಮ್‌ಗಳನ್ನು ಪಡೆಯಬಹುದು. ಆದರೆ ಅಲ್ಲಿ ವಸ್ತು, ಆಹಾರಗಳ ಬೆಲೆ ಕೂಡ ಹೆಚ್ಚಾಗಿಯೇ ಇರುತ್ತದೆ.
ಉಜ್ಬೇಕಿಸ್ತಾನ್ ತನ್ನ ಶ್ರೀಮಂತ ಸಿಲ್ಕ್ ರೋಡ್ ಕಲ್ಚರ್, ಪ್ರಾಚೀನ ಮಸೀದಿಗಳು, ನೀಲಿ ಗುಮ್ಮಟಗಳು, ಐತಿಹಾಸಿಕ ಕಟ್ಟಡಗಳು ಮತ್ತು ರುಚಿಕರವಾದ ಮಧ್ಯ ಏಷ್ಯಾದ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಹೋಟೆಲ್‌ಗಳು, ಸ್ಥಳೀಯ ಸಾರಿಗೆ ಮತ್ತು ಆಹಾರವು ಅನೇಕ ಪಾಶ್ಚಿಮಾತ್ಯ ದೇಶಗಳಿಗಿಂತ ತುಂಬಾನೆ ಅಗ್ಗ. ಹಾಗಾಗಿ ಇದು ಬಜೆಟ್ ಟ್ರಾವೆಲರ್ ನಡುವೆ ಹೆಚ್ಚು ಜನಪ್ರಿಯವಾಗಿದೆ.
100 ಭಾರತೀಯ ರೂಪಾಯಿಗಳಿಗೆ ಸರಿಸುಮಾರು 13,000 ಅಥವಾ ಅದಕ್ಕಿಂತ ಹೆಚ್ಚು ಉಜ್ಬೇಕಿಸ್ತಾನಿ ಸೋಮ್‌ಗಳನ್ನು ಪಡೆಯಬಹುದಾದ ದೇಶಗಳಲ್ಲಿ ಉಜ್ಬೇಕಿಸ್ತಾನ್ ಕೂಡ ಒಂದು. ಆದರೆ, ಸ್ಥಳೀಯ ಕರೆನ್ಸಿಯ ಪ್ರಮಾಣವನ್ನು ಆಧರಿಸಿ ಒಂದು ದೇಶವನ್ನು "ಅಗ್ಗ" ಎಂದು ಪರಿಗಣಿಸಲಾಗುವುದಿಲ್ಲ, ಯಾಕಂದ್ರೆ ನಿಜವಾದ ವೆಚ್ಚಗಳು ಸರಕು ಮತ್ತು ಸೇವೆಗಳ ಬೆಲೆಗಳನ್ನು ಅವಲಂಬಿಸಿರುತ್ತದೆ. ಆದರೆ, ನೀವು ಇತಿಹಾಸ, ಸಂಸ್ಕೃತಿ ಮತ್ತು ಭವ್ಯವಾದ ವಾಸ್ತುಶಿಲ್ಪವನ್ನು ಕಡಿಮೆ ಬಜೆಟ್‌ನಲ್ಲಿ ಅನುಭವಿಸಲು ಬಯಸಿದರೆ, ನಿಮ್ಮ ಮುಂದಿನ ವಿದೇಶ ಪ್ರವಾಸಕ್ಕೆ ಉಜ್ಬೇಕಿಸ್ತಾನ್ ಬೆಸ್ಟ್ ಆಯ್ಕೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.