ವಿಮಾನದಲ್ಲಿ ಯಾವ ಸೀಟು ಸೇಫ್‌? ಇಲ್ಲಿದೆ ಮಾಹಿತಿ!

Published : Mar 08, 2025, 07:46 PM ISTUpdated : Mar 09, 2025, 08:34 AM IST
ವಿಮಾನದಲ್ಲಿ ಯಾವ ಸೀಟು ಸೇಫ್‌? ಇಲ್ಲಿದೆ ಮಾಹಿತಿ!

ಸಾರಾಂಶ

ಒಂದು ವೇಳೆ ಅಪಘಾತ ಸಂಭವಿಸಿದರೆ, ವಿಮಾನದಲ್ಲಿ ಯಾವ ಸೀಟುಗಳು ಸುರಕ್ಷಿತ? ಇದರ ಬಗ್ಗೆ ಅಧ್ಯಯನಗಳು ಆಗಿವೆ. ಎಲ್ಲಿ ಕುಳಿತಿರುವ ಪ್ರಯಾಣಿಕರು ಹೆಚ್ಚಿನ ಬದುಕುಳಿಯುವ ಸಾಧ್ಯತೆಗಳನ್ನು ಹೊಂದಿರುತ್ತಾರೆ ಎಂದು ಸ್ಟಡಿಗಳು ಹೇಳಿವೆ. ಅದರ ವಿವರ ಇಲ್ಲಿವೆ.


ನೀವು ಪದೇ ಪದೇ ವಿಮಾನಗಳಲ್ಲಿ ಪ್ರಯಾಣಿಸುವವರಾದರೆ ಒಂದು ವಿಷಯ ತಿಳಿದಿರಲೇಬೇಕು- ವಿಮಾನದಲ್ಲಿ ಯಾವ ಸೀಟು ಹೆಚ್ಚು ಸೇಫ್‌ ಅಂತ. ಕಜಕಿಸ್ತಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಘೋರ ವಿಮಾನ ಅಪಘಾತಗಳಲ್ಲಿ ಬದುಕುಳಿದವರನ್ನು ಜೆಟ್‌ಗಳ ಹಿಂಭಾಗದಿಂದ ಕಾಪಾಡಲಾಯಿತು. ಅಂದರೆ ಅದರರ್ಥ, ವಿಮಾನದ ಹಿಂತುದಿಯಲ್ಲಿರುವ ಆಸನಗಳು ಇತರ ಕಡೆಗಳಿಗಿಂತ ಸುರಕ್ಷಿತವಾಗಿದೆಯೇ? ಹಿಂದಿನ ಅಪಘಾತಗಳ ಆಧಾರದ ಮೇಲೆ ನಡೆದ ಅಧ್ಯಯನಗಳಿಂದ ಗೊತ್ತಾದ ವಿಷಯ ಅಂದರೆ ವಿಮಾನದ ಹಿಂಭಾಗದಲ್ಲಿರುವ ಆಸನಗಳು ಮುಂಭಾಗದಲ್ಲಿರುವವುಗಳಿಗಿಂತ ಹೆಚ್ಚಿನ ಸುರಕ್ಷತೆ ಹೊಂದಿವೆ ಅಂತ. ಅದು ಹೇಗೆ ಅಂತ ನೋಡೋಣ. 

ಅಪರೂಪದ ಅಪಘಾತಗಳ ಹೊರತಾಗಿಯೂ ವಿಮಾನ ಪ್ರಯಾಣ ಅತ್ಯಂತ ಸುರಕ್ಷಿತ ಸಾರಿಗೆ ವಿಧಾನಗಳಲ್ಲಿ ಒಂದು. ರಸ್ತೆ ಅಪಘಾತಗಳಿಗೆ ಹೋಲಿಸಿದರೆ ಅವು ತುಂಬಾ ಕಡಿಮೆ. ಆಧುನಿಕ ಜೆಟ್‌ಗಳು ಮತ್ತು ಭದ್ರತಾ ವ್ಯವಸ್ಥೆಗಳಲ್ಲಿನ ಪ್ರಗತಿಯ ಹೊರತಾಗಿಯೂ, ಎತ್ತರದ ಪರಿಸರ ಮತ್ತು ವಿಮಾನ ವ್ಯವಸ್ಥೆಗಳ ಸಂಕೀರ್ಣತೆ, ಅಲ್ಲಿನ ಸಣ್ಣ ಯಾಂತ್ರಿಕ ವೈಫಲ್ಯಗಳು ಅಥವಾ ಮಾನವ ದೋಷಗಳು ಸಹ ದುರಂತ ಪರಿಣಾಮಗಳನ್ನು ಉಂಟುಮಾಡಬಹುದು. ಹಿಂದಿನ ಅಪಘಾತಗಳ ಅಧ್ಯಯನಗಳು ಮತ್ತು ವಿಶ್ಲೇಷಣೆಗಳು, ವಿಮಾನದ ಹಿಂಭಾಗದ ಆಸನಗಳು ಮುಂಭಾಗದಲ್ಲಿರುವ ಆಸನಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣವನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ.

ಅಮೆರಿಕದ 'ಏವಿಯೇಷನ್ ​​ಡಿಸಾಸ್ಟರ್ ಲಾ' ವರದಿಯ ಪ್ರಕಾರ, 'ಪಾಪ್ಯುಲರ್ ಮೆಕ್ಯಾನಿಕ್ಸ್' ನಿಯತಕಾಲಿಕೆಯು 1971 ಮತ್ತು 2005 ರ ನಡುವೆ ಸಂಭವಿಸಿದ ವಿಮಾನ ಅಪಘಾತಗಳ ಅಧ್ಯಯನವನ್ನು ನಡೆಸಿತು. ಈ ಅಧ್ಯಯನವು ವಿಮಾನದ ಹಿಂಭಾಗದಲ್ಲಿರುವ ಆಸನಗಳು ಅತ್ಯಂತ ಸುರಕ್ಷಿತವೆಂದು ಬಹಿರಂಗಪಡಿಸಿದೆ. ಹಿಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರು ವಿಮಾನದ ಇತರ ವಿಭಾಗಗಳಲ್ಲಿ ಕುಳಿತಿರುವ ಪ್ರಯಾಣಿಕರಿಗಿಂತ 40% ಹೆಚ್ಚಿನ ಬದುಕುಳಿಯುವ ಸಾಧ್ಯತೆಯನ್ನು ಹೊಂದಿದ್ದಾರಂತೆ.

ಮುಂಭಾಗದ ಆಸನಗಳು ಅಪಘಾತಗಳ ಸಮಯದಲ್ಲಿ ಹೆಚ್ಚು ದುರ್ಬಲ. ಏಕೆಂದರೆ ವಿಮಾನದ ಮೂತಿ ಮೊದಲು ನೆಲಕ್ಕೆ ಕುಕ್ಕುತ್ತದೆ. ಕ್ರ್ಯಾಶ್ ಲ್ಯಾಂಡಿಂಗ್‌ಗಳು, ನೆಲದ ರಚನೆಗಳೊಂದಿಗೆ ಡಿಕ್ಕಿಗಳು ಅಥವಾ ರನ್‌ವೇ ಓವರ್‌ರನ್‌ಗಳಂತಹ ಘಟನೆಗಳಲ್ಲಿ ಮುಂಭಾಗ ಹೆಚ್ಚಿನ ದುಷ್ಪರಿಣಾಮವನ್ನು ಎದುರಿಸುತ್ತದೆ. ಉದಾಹರಣೆಗೆ 2010 ರ ಮಂಗಳೂರು ವಿಮಾನ ಅಪಘಾತ. ಅಲ್ಲಿ ವಿಮಾನ ರನ್‌ವೇಯಿಂದ ಪಾತಾಳಕ್ಕೆ ಜಾರಿತ್ತು. 

ಕಝಾಕಿಸ್ತಾನ್‌ನ ಅಕ್ಟೌ ಬಳಿ ಅಜೆರ್ಬೈಜಾನ್ ಏರ್‌ಲೈನ್ಸ್ ವಿಮಾನ ಅಪಘಾತದ ನಂತರ ಪೋಸ್ಟ್ ಮಾಡಿದ ರೀಲ್‌ನಲ್ಲಿ, US ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಹೇಳಿದೆ- "ಅಪಘಾತವಾದರೆ, ವಿಮಾನದ ಮುಂಭಾಗದಲ್ಲಿ ಕುಳಿತುಕೊಳ್ಳುವವರಿಗೆ ಬದುಕುಳಿಯುವ ಸಾಧ್ಯತೆ 49%, ರೆಕ್ಕೆಗಳಿರುವ ಮಧ್ಯಭಾಗದಲ್ಲಿ 59% ಹಾಗೂ ವಿಮಾನದ ಹಿಂಭಾಗದಲ್ಲಿ ಕುಳಿತಿದ್ದರೆ ನಿಮ್ಮ ಸಾಧ್ಯತೆಗಳು 69%". "ಇದು ಅಗ್ಗದ (ಹಿಂದಿನ) ಸೀಟುಗಳು ಸುರಕ್ಷಿತವೆಂದು ಸೂಚಿಸುತ್ತದೆ" ಎಂದಿದ್ದಾರೆ.

2015ರಲ್ಲಿ ಅಮೇರಿಕನ್ ನಿಯತಕಾಲಿಕೆ TIME ನಡೆಸಿದ ಅಧ್ಯಯನದಲ್ಲಿ, 35 ವರ್ಷಗಳ ವಿಮಾನ ಅಪಘಾತಗಳ ದತ್ತಾಂಶವು ವಿಮಾನದ ಹಿಂಭಾಗದ ವಿಭಾಗದ ಮಧ್ಯಭಾಗದಲ್ಲಿರುವ ಸೀಟುಗಳು ಅತ್ಯಂತ ಸುರಕ್ಷಿತವೆಂದು ಬಹಿರಂಗಪಡಿಸಿದೆ. ಇಲ್ಲಿನ ಮರಣ ಪ್ರಮಾಣವು 28%ರಷ್ಟಿದೆ. ಎರಡನೇ ಸುರಕ್ಷಿತ ಆಯ್ಕೆಯೆಂದರೆ ವಿಮಾನದ ಮಧ್ಯಭಾಗದಲ್ಲಿರುವ ಸೀಟುಗಳು, ಇದರ ಮರಣ ಪ್ರಮಾಣವು 44% ರಷ್ಟಿತ್ತು.

ಬರೀ 91.5 ಲಕ್ಷ ರೂ. ಕೊಟ್ರೆ ನೀವು ಈ ಸುಂದರ ದ್ವೀಪದ ಪ್ರಜೆ ಆಗಬಹುದು!

ಹೆಚ್ಚಿನ ಆಧುನಿಕ ಪ್ರಯಾಣಿಕ ಜೆಟ್‌ಗಳಲ್ಲಿ ರೆಕ್ಕೆಗಳನ್ನು ಇಂಧನ ಟ್ಯಾಂಕ್‌ಗಳಾಗಿ ಬಳಸುವುದರಿಂದ, ರೆಕ್ಕೆ ಸ್ಫೋಟಗಳ ಅಪಾಯವಿದೆ. ಹೀಗಾಗಿ ಮಧ್ಯದಲ್ಲಿರುವ ಸೀಟುಗಳು ಕಡಿಮೆ ಸುರಕ್ಷಿತ. ತುರ್ತು ನಿರ್ಗಮನಗಳ ಬಳಿ ಇರುವ ಮಧ್ಯದ ಸಾಲುಗಳನ್ನು ಅಪಘಾತದ ನಂತರ ಕೂಡಲೇ ಸ್ಥಳಾಂತರಿಸಲಾಗುವುದರಿಂದ, ಅದನ್ನೂ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ವಿಮಾನದ ಹಿಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರಿಗೆ, ಹಿಂಭಾಗದ ತುರ್ತು ನಿರ್ಗಮನಗಳ ಹೆಚ್ಚು ಸಮೀಪವಿದೆ. ಇದು ಪ್ರಯಾಣಿಕರ ಸ್ಥಳಾಂತರಿಸುವ ಸಮಯವನ್ನು ಕಡಿಮೆ ಮಾಡುತ್ತದೆ. 

ಆದರೂ ವಿಮಾನದ ಹಿಂಭಾಗದ ಆಸನಗಳು ಅಪಘಾತದ ಸಮಯದಲ್ಲಿ ತಮ್ಮದೇ ಆದ ಅಪಾಯಗಳನ್ನು ಹೊಂದಿವೆ. ಬಾಲವು ಮೊದಲು ನೆಲಕ್ಕೆ ಬಡಿಯಬಹುದು, ಆಗ ಹಿಂಭಾಗದಲ್ಲಿ ಹೆಚ್ಚಿನ ಸಾವುನೋವು ಸಂಭವಿಸಬಹುದು. ಹಾಗಾಗಿ, ಅಪಘಾತದ ಮಾದರಿಯನ್ನು ಅನುಸರಿಸಿ ಸುರಕ್ಷತೆ ನಿರ್ಧಾರವಾಗಲಿದೆ. ಹಾಗೆ ನೋಡಿದರೆ, ಯಾವುದೇ ವಿಭಾಗವು ಇನ್ನೊಂದಕ್ಕಿಂತ ಅಂತರ್ಗತವಾಗಿ ಸುರಕ್ಷಿತವಲ್ಲ ಎಂದು US ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಹೇಳುತ್ತದೆ. 

ಮದುವೆ ನಂತ್ರ ಅತ್ತೆ ಮನೆಯ ಪರ್ಮನೆಂಟ್ ಅತಿಥಿ ಅಳಿಯ! ಭಾರತದಲ್ಲಿದೆ ವಿಚಿತ್ರ ಪದ್ಧತಿ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್