ಈ ದೇಶದಲ್ಲಿ ಹೆಣ್ಣು ಜೀವಕ್ಕೆ ಪ್ರವೇಶವೇ ಇಲ್ಲ! ಯಾಕೀ ವಿಚಿತ್ರ ನಿರ್ಬಂಧ?

Published : May 18, 2025, 01:53 PM ISTUpdated : May 19, 2025, 08:55 AM IST
ಈ ದೇಶದಲ್ಲಿ ಹೆಣ್ಣು ಜೀವಕ್ಕೆ ಪ್ರವೇಶವೇ ಇಲ್ಲ! ಯಾಕೀ ವಿಚಿತ್ರ ನಿರ್ಬಂಧ?

ಸಾರಾಂಶ

ಮೌಂಟ್ ಅಥೋಸ್, ಸಾವಿರ ವರ್ಷಗಳಿಂದ ಹೆಣ್ಣು ಮಕ್ಕಳಿಗೆ  ಪ್ರವೇಶವಿಲ್ಲದ ರಷ್ಯಾದ ಸ್ವಾಯತ್ತ ಪ್ರದೇಶ. ಹೆಣ್ಣು ಜಾತಿಯ ಪ್ರಾಣಿಗಳಿಗಳೂ ಇಲ್ಲಿ ಪ್ರವೇಶವಿಲ್ಲ! ನಿಯಮ ಉಲ್ಲಂಘಿಸಿ ವೇಷ ಮರೆಸಿ ಒಳಹೋದವರಿಗೆ ಜೈಲು ಶಿಕ್ಷೆ ಖಚಿತ.

ಭಾರತೀಯ ಪುರಾಣದಲ್ಲಿ ಗಂಡು ಮಕ್ಕಳಿಗೆ ಪ್ರವೇಶ ಇದ್ದಿಲ್ಲದ ʼಪ್ರಮೀಳಾ ರಾಜ್ಯʼದ ಕತೆಯನ್ನು ನೀವು ಕೇಳಿರಬಹುದು. ಆದರೆ ಹೆಣ್ಣುಮಕ್ಕಳಿಗೆ ಪ್ರವೇಶವೇ ನೀಡದ, ಒಂದು ಹೆಣ್ಣು ಜೀವವೂ ಇಲ್ಲದ, ಹೆಣ್ಣು ಪ್ರಾಣಿಗೂ ಪ್ರವೇಶ ಇಲ್ಲದ ದೇಶ ಇರಬಹುದಾ? ಕತೆಯಲ್ಲೂ ಅದನ್ನು ನೀವು ಊಹಿಸಿಲ್ಲ ಎಂದಾದರೆ, ನಿಮಗೆ ಅಚ್ಚರಿ ಕಾದಿದೆ. ಅಂಥ ಒಂದು ದೇಶವಿದೆ. ಅದರ ಹೆಸರು ಮೌಂಟ್‌ ಅಥೋಸ್ (Mount Athos). 

ಇದು ರಷ್ಯಾಕ್ಕೇ ಸೇರಿದುದಾದರೂ, ಸ್ವಾಯತ್ತ ಪ್ರದೇಶ- ಆದ್ದರಿಂದ ಇದನ್ನು ಸ್ವತಂತ್ರ ರಾಜ್ಯ, ದೇಶ ಅಂತಲೂ ಹೇಳುತ್ತಾರೆ. ಸಾವಿರಾರು ವರ್ಷಗಳಿಂದ ಇಲ್ಲಿ ಗಂಡಸರು ಮಾತ್ರ ನೆಲೆಸಿದ್ದಾರೆ- ಇವರು ರಷ್ಯಾದ ಆರ್ಥೊಡಾಕ್ಸ್ ಸನ್ಯಾಸಿಗಳು. ಆದ್ದರಿಂದಲೇ ಇಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಹೆಂಗಸರಿಗೆ ಪ್ರವೇಶ ನೀಡಿದರೆ ಸನ್ಯಾಸಿಗಳ ಸನ್ಯಾಸ, ಬ್ರಹ್ಮಚರ್ಯ ಹಾಳಾಗುತ್ತದೆ ಎಂಬುದೇ ಇದರ ಹಿಂದಿರುವ ಕಾರಣ. ಮೌಂಟ್ ಅಥೋಸ್‌ ಸುಮಾರು 335 ಚದರ ಕಿಮೀ ವಿಸ್ತೀರ್ಣ ಇರುವ ಒಂದು ದ್ವೀಪ. 

ಮೌಂಟ್ ಅಥೋಸ್‌ನಲ್ಲಿ 1,000 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮಹಿಳೆಯರನ್ನು- ಹೆಣ್ಣು ಪ್ರಾಣಿಗಳನ್ನೂ ಸಹ- ನಿಷೇಧಿಸಿದೆ. ಅಥೋಸ್‌ನ ಸಮುದ್ರ ಕರಾವಳಿಯ 500 ಮೀಟರ್ ಒಳಗೆ ಸಹ ಅವರಿಗೆ ಪ್ರವೇಶವಿಲ್ಲ. ನೀವು ಮೌಂಟ್ ಅಥೋಸ್‌ಗೆ ಭೇಟಿ ನೀಡಲು ಬಯಸಿದರೆ ಮೊದಲ ಅರ್ಹತೆ ನೀವು ಪುರುಷರಾಗಿರಬೇಕು. ನಿಮ್ಮ ಮಹಿಳಾ ಸಂಗಾತಿಗಳನ್ನು ಜೊತೆಗೆ ಕರೆದೊಯ್ಯುವಂತೆಯೇ ಇಲ್ಲ. ಪ್ರತಿದಿನ 100 ಆರ್ಥೊಡಾಕ್ಸ್ ಮತ್ತು 10 ಆರ್ಥೊಡಾಕ್ಸ್ ಅಲ್ಲದ ಪುರುಷ ಯಾತ್ರಿಕರಿಗೆ ಮಾತ್ರ ಪ್ರವೇಶ ಹಾಗೂ ದ್ವೀಪದ 20 ಮಠಗಳಲ್ಲಿ ಒಂದರಲ್ಲಿ ಮೂರು ರಾತ್ರಿಗಳ ವಾಸ್ತವ್ಯಕ್ಕೆ ಅವಕಾಶ. 

ಅಲ್ಲಿನ ಸನ್ಯಾಸಿಗಳಿಗೆ ಬ್ರಹ್ಮಚರ್ಯವನ್ನು ಉಳಿಸಿಕೊಳ್ಳಲು ಇದು ಸರಳವಾದ ಮಾರ್ಗ. ಇಡೀ ಪರ್ಯಾಯ ದ್ವೀಪವನ್ನು ಒಂದು ದೊಡ್ಡ ಮಠವೆಂದು ಪರಿಗಣಿಸಲಾಗಿದೆ. ಕಥೆಯ ಪ್ರಕಾರ, ವರ್ಜಿನ್ ಮೇರಿ ಸೈಪ್ರಸ್‌ಗೆ ನೌಕಾಯಾನ ಮಾಡಲು ಪ್ರಯತ್ನಿಸುತ್ತಿರುವಾಗ ದಿಕ್ಕು ತಪ್ಪಿ ಅಥೋಸ್ ಪರ್ವತಕ್ಕೆ ಬಂದಿಳಿದಳು. ಅದನ್ನು ತುಂಬಾ ಇಷ್ಟಪಟ್ಟಳು. ತನ್ನ ಮಗನಿಗೆ ಅದನ್ನು ತನ್ನದಾಗಿಸಿಕೊಳ್ಳಬೇಕೆಂದು ಪ್ರಾರ್ಥಿಸಿದಳು. ಅವನು ಅದಕ್ಕೆ ಒಪ್ಪಿದ. ಹೀಗಾಗಿ ಇದನ್ನು 'ದೇವರ ತಾಯಿಯ ಉದ್ಯಾನ' ಎಂದು ಕರೆಯಲಾಗುತ್ತದೆ. ಅದು ಅವಳ ಮಹಿಮೆಗೆ ಸಮರ್ಪಿತ. ಅಲ್ಲಿ ಇರಬಹುದಾದ ಏಕೈಕ ಹೆಣ್ಣು ವರ್ಜಿನ್‌ ಮೇರಿ ಮಾತ್ರ.

ಇಲ್ಲಿ ಹೆಣ್ಣು ಸಾಕುಪ್ರಾಣಿಗಳೂ ಇರುವಂತಿಲ್ಲ. ಹೆಣ್ಣು ನಾಯಿಗಳು ನೋ ನೋ. ಬೆಕ್ಕುಗಳಿಗೆ ವಿನಾಯಿತಿ ಇದೆ. ಇಲ್ಲಿ ಬಹಳಷ್ಟು ಬೆಕ್ಕುಗಳಿವೆ. ಏಕೆಂದರೆ ಅವು ಇಲಿಗಳ ಕಾಟದಿಂದ ಸನ್ಯಾಸಿಗಳನ್ನು ಕಾಪಾಡುತ್ತವೆ. ಡೈರಿ ಪ್ರಾಣಿಗಳು ಹಾಗೂ ಹೆಣ್ಣು ಕೋಳಿಗಳು ಇಲ್ಲವಾದ್ದರಿಂದ ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಹೊರಗಿನಿಂದ ತರಬೇಕಾಗುತ್ತದೆ. ಆದರೆ ಇವರು ಬಳಸುವ ಡೈರಿ ಉತ್ಪನ್ನಗಳು ಕಡಿಮೆ. ಹೆಣ್ಣು ಕಾಡು ಪ್ರಾಣಿಗಳಿಗೆ, ಹೆಣ್ಣು ಸೊಳ್ಳೆಗಳಿಗೆ ಮತ್ತು ಕೀಟಗಳಿಗೆ ವಿನಾಯಿತಿ ಇದೆ! ಯಾಕೆಂದರೆ ಇವುಗಳನ್ನು ನಿಯಂತ್ರಿಸಲು ಅಸಾಧ್ಯ. 

ಅತ್ಯಂತ ಸಂತೋಷವಾಗಿರೋ ರಾಷ್ಟ್ರ ಫಿನ್ ಲ್ಯಾಂಡ್… ಭಾರತ ಯಾಕೆ ಹ್ಯಾಪಿ ಆಗಿಲ್ಲ?!

ಇನ್ನು ಪುರುಷರು ಅಥೋಸ್‌ಗೆ ಹೋಗುವುದಾದರೆ ಗಡ್ಡವನ್ನು ಬೆಳೆಸಲು ಸಮರ್ಥರಾಗಿರಬೇಕು ಎಂಬುದು ನಿಯಮ. ಈ ಹಿಂದೆ ಅಲ್ಲಿಗೆ ನಪುಂಸಕರು ಮತ್ತು ಸಣ್ಣ ಹುಡುಗರು ಹೋಗುವುದಕ್ಕೂ ನಿಷೇಧವಿತ್ತು. ಯಾಕೆಂದರೆ ಮಹಿಳೆಯರು ಇಲ್ಲಿ ಒಳನುಸುಳಲು ಹುಡುಗ ಅಥವಾ ನಪುಂಸಕನಂತೆ ನಟಿಸಬಹುದೆಂಬ ಭಯ. ಇತ್ತೀಚಿನ ದಿನಗಳಲ್ಲಿ ಹುಡುಗರು ಆಗಾಗ್ಗೆ ಪೋಷಕರೊಂದಿಗೆ ಬರುತ್ತಾರೆ. ಸನ್ಯಾಸಿಗಳು ಹುಡುಗರನ್ನು ಇಷ್ಟಪಡುತ್ತಾರೆ.

ಭಾರತದ ಈ ಐತಿಹಾಸಿಕ ತಾಣಗಳಿಗೆ ಒಮ್ಮೆಯಾದರು ಭೇಟಿ ನೀಡಿ

ನಿಷೇಧದ ಹೊರತಾಗಿಯೂ ಕೆಲವು ಸಲ ಮಹಿಳೆಯರು ಈ ದ್ವೀಪಕ್ಕೆ ಭೇಟಿ ನೀಡಿದ್ದುಂಟು. 1946 ಮತ್ತು 1949 ರ ನಡುವಿನ ಗ್ರೀಕ್ ಅಂತರ್ಯುದ್ಧದ ಸಮಯದಲ್ಲಿ, ಮೌಂಟ್ ಅಥೋಸ್ ರೈತರ ಹಿಂಡುಗಳಿಗೆ ಆಶ್ರಯ ನೀಡಿತು. ಮಹಿಳೆಯರು ಮತ್ತು ಹುಡುಗಿಯರು ಅಥೋಸ್‌ಗೆ ಪ್ರವೇಶಿಸಿದ ಗುಂಪಿನ ಭಾಗವಾಗಿದ್ದರು. 1953ರಲ್ಲಿ ಪುರುಷನಂತೆ ವೇಷ ಧರಿಸಿದ ಗ್ರೀಕ್ ಮಹಿಳೆ ಮಾರಿಯಾ ಪೊಯಿಮೆನಿಡೌ ಮೂರು ದಿನ ದ್ವೀಪದಲ್ಲಿದ್ದಳು. ಇದರ ನಂತರ ಮಹಿಳೆಯರು ಅಥೋಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದು, ಅದನ್ನು ಉಲ್ಲಂಘಿಸುವವರಿಗೆ ಗರಿಷ್ಠ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್