Travel Tips : ವಿಮಾನ ನಿಲ್ದಾಣದಲ್ಲಿ ಕಾಯೋದು ಬೋರ್ ಅಲ್ವಾ? ಹೀಗ್ ಮಾಡ್ಬಹುದು

By Suvarna News  |  First Published Jun 12, 2023, 5:08 PM IST

ವಿಮಾನ ನಿಲ್ದಾಣದಲ್ಲಿ ತುಂಬಾ ಸಮಯ ಕಳೆಯೋದು ಸುಲಭವಲ್ಲ. ಏನೇ ಮಾಡಿದ್ರೂ ಅನೇಕ ಬಾರಿ ಟೈಂ ಪಾಸ್ ಆಗೋದಿಲ್ಲ. ವಿಮಾನಕ್ಕಿಂತ ನಿಲ್ದಾಣದಲ್ಲೇ ಹೆಚ್ಚು ಸುಸ್ತಾಗುತ್ತೆ ಎನ್ನುವವರು ಮನರಂಜನೆ ಜೊತೆ ಸಮಯಕಳೆಯಲು ಕೆಲ ಉತ್ತಮ ಮಾರ್ಗ ಅನುಸರಿಸಬಹುದು.
 


ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಈಗ ಮೊದಲಿನಷ್ಟು ಕಷ್ಟವಲ್ಲ. ಮೊದಲಿಗಿಂತ ಹೆಚ್ಚು ವಿಮಾನ ನಿಲ್ದಾಣ, ವಿಮಾನ ಸೌಲಭ್ಯ ಈಗಿದೆ. ಬಹುಬೇಗ ತಲುಪಬಹುದು ಎನ್ನುವ ಕಾರಣಕ್ಕೆ ಅನೇಕರ ಮೊದಲ ಆಯ್ಕೆ ವಿಮಾನವಾಗಿದೆ. ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ ವಿಮಾನದಲ್ಲಿ ಪ್ರಯಾಣ ಬೆಳೆಸುವವರು ಅನೇಕರಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಮಯ ಕಳೆಯುವುದು ಮಾತ್ರ ಬೇಸರದ ಸಂಗತಿ. ವಿಮಾನ ವಿಳಂಬವಾದ್ರೆ ಅಥವಾ ಕನೆಕ್ಟಿಂಗ್ ಫ್ಲೈಟ್‌ಗಾಗಿ ನೀವು ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯಬೇಕು. ಈ ಸಮಯದಲ್ಲಿ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್ ನಲ್ಲಿ ಅನೇಕರು ಸಮಯ ದೂಡಿದ್ರೆ ಮತ್ತೆ ಕೆಲವರು ಫೋನ್ ನೋಡ್ತಾ, ಕೋಪಗೊಳ್ತಾ, ಕಿರಿಕಿರಿ ಅನುಭವಿಸ್ತಾ ಸಮಯ ಕಳೆಯುತ್ತಾರೆ. 

ದೀರ್ಘಕಾಲ ಒಂದೇ ಜಾಗದಲ್ಲಿ ಸುಮ್ಮನೆ ಕುಳಿತುಕೊಂಡ್ರೆ ಹೆಚ್ಚು ದಣಿವಾಗುತ್ತದೆ. ಪ್ರಯಾಣ (Travel) ದ ಸಂತೋಷವೆಲ್ಲ ಇಲ್ಲಿಯೇ ನಾಶವಾಗುತ್ತದೆ. ವಿಮಾನ ನಿಲ್ದಾಣ (Airport ) ದಲ್ಲಿ ಸಮಯ ಹೋದದ್ದೇ ತಿಳಿಯಬಾರದು ಅಂದ್ರೆ ಏನು ಮಾಡ್ಬೇಕು ಅಂತ ನಾವಿಂದು ನಿಮಗೆ ಹೇಳ್ತೇವೆ.

Tap to resize

Latest Videos

ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ

ವಿಮಾನ ನಿಲ್ದಾಣದಲ್ಲಿ ಹೀಗೆ ಸಮಯ ಕಳೆಯಿರಿ : 

ಪುಸ್ತಕ (Book) ಓದಿ : ಓದುವುದು ಒಳ್ಳೆಯ ಅಭ್ಯಾಸ. ವಿಮಾನ ನಿಲ್ದಾಣದಲ್ಲಿ ಸುಮ್ಮನೆ ಕುಳಿತು, ಓಡಾಡುವ ಜನರನ್ನು ನೋಡ್ತಾ ಬೋರ್ ಆಗುವ ಬದಲು ಇಷ್ಟದ ಪುಸ್ತಕವನ್ನು ನೀವು ಓದಬಹುದು. ಯಾವಾಗ್ಲೂ ನಿಮ್ಮ ಬ್ಯಾಗ್ ನಲ್ಲಿ ಒಂದು ಪುಸ್ತಕ ಇರುವಂತೆ ನೋಡಿಕೊಳ್ಳಿ. ಒಂದ್ವೇಳೆ ಇದು ಸಾಧ್ಯವಿಲ್ಲ ಎನ್ನುವವರು ಮೊಬೈಲ್ ಅಥವಾ ಟ್ಯಾಬ್ ನಲ್ಲಿ ನೀವು ಇ –ಬುಕ್ ಡೌನ್ಲೋಡ್ ಮಾಡಿಕೊಂಡು ಪುಸ್ತಕ ಓದಬಹುದು. ಇದು ನಿಮ್ಮ ಜ್ಞಾನವನ್ನು ಹೆಚ್ಚಿಸುವ ಜೊತೆಗೆ ಮನರಂಜನೆ ನೀಡುತ್ತದೆ. ನಿಮ್ಮ ಸಮಯ ಸುಲಭವಾಗಿ ಸರಿಯಲು ನೆರವಾಗುತ್ತದೆ.

ಫೋನ್ ಗ್ಯಾಲರಿ ಕ್ಲೀನ್ ಮಾಡಿ : ಯಸ್, ಫೋನ್ ಗ್ಯಾಲರಿ ತುಂಬಿದೆ, ತುಂಬಿದೆ ಅಂತಾ ಸಂದೇಶ ಬರ್ತಾನೆ ಇರುತ್ತೆ. ಆದ್ರೆ ಅದನ್ನು ಕ್ಲೀನ್ ಮಾಡೋಕೆ ನಮಗೆ ಸಮಯ ಸಿಗೋದಿಲ್ಲ. ಫೋನ್ ಗ್ಯಾಲರಿ ಕ್ಲೀನ್ ಮಾಡಲು ಇದು ಒಳ್ಳೆ ಸಮಯ. ಯಾವ ಫೋಟೋ, ವಿಡಿಯೋ ನಿಮಗೆ ಅಗತ್ಯವಿಲ್ಲವೋ ಅದನ್ನು ಡಿಲಿಟ್ ಮಾಡುವ ಮೂಲಕ ನೀವು ಸಮಯ ಕಳೆಯಬಹುದು. ಗ್ಯಾಲರಿ ಕ್ಲೀನ್ ಮಾಡಲು ತುಂಬಾ ಸಮಯ ಅಗತ್ಯವಿರುತ್ತದೆ. ಅಲ್ಲದೆ ನೀವು ಅದನ್ನು ರೀ ಅರೆಂಜ್ ಮಾಡಬಹುದು. 

ಗಗನಸಖಿ ಬಂದ್ರು ಅಂತ ತಕ್ಷಣ ಹಲ್ಲು ಕಿರೀಬೇಡಿ: ಈ ವಿಮಾನದ ಪುರುಷ ಸಿಬ್ಬಂದಿಗೂ ಮೇಕಪ್‌ಗೆ ಅವಕಾಶ!

ಸ್ವಲ್ಪ ನಿದ್ರೆ ಮಾಡಿ :  ದೀರ್ಘಕಾಲ ಪ್ರಯಾಣ ನಿಮ್ಮದಾಗಿದ್ದರೆ  ವಿಮಾನ ನಿಲ್ದಾಣದಲ್ಲಿ ಕಾಯುವುದು ಮತ್ತಷ್ಟು ದಣಿವು ನೀಡುತ್ತದೆ. ನೀವು ಫ್ರೆಶ್ ಆಗ್ಬೇಕೆಂದ್ರೆ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ನಿದ್ರೆ ಮಾಡಿ.   ಅನೇಕ ವಿಮಾನ ನಿಲ್ದಾಣಗಳು ವಿಶ್ರಾಂತಿ ಪ್ರದೇಶ ಲಭ್ಯವಿದೆ. ಅಲ್ಲಿ ನೀವು ಯಾವುದೇ ತೊಂದರೆಯಿಲ್ಲದೆ  ನಿದ್ರೆ ಮಾಡಬಹುದು. ಆದ್ರೆ ಅಲ್ರಾಂ ಇಡಲು ಮೆರೆಯಬೇಡಿ.

ನಿಮ್ಮಿಷ್ಟದ ಸಿನಿಮಾ ನೋಡಿ : ಮೊಬೈಲ್ ನಲ್ಲಿ ಅದು – ಇದು ನೋಡುವ ಬದಲು ನೀವು ನಿಮ್ಮಿಷ್ಟದ ಸಿನಿಮಾ ವೀಕ್ಷಣೆ ಮಾಡ್ಬಹುದು. ಬ್ಯಾಗ್ ನಲ್ಲಿ ಅದಾ ಇಯರ್ ಫೋನ್ ಇಟ್ಟುಕೊಳ್ಳಿ. ವಿಮಾನ ನಿಲ್ದಾಣದಲ್ಲಿ ತುಂಬಾ ಸಮಯ ಕುಳಿತುಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ನೀವೊಂದು ಸಿನಿಮಾ ನೋಡಿ ಮುಗಿಸಬಹುದು. ಇಲ್ಲವೆ ನಿಮಗೆ ಖುಷಿ ಎನ್ನಿಸುವ ಬ್ಲಾಗ್ ವೀಕ್ಷಣೆ ಮಾಡಬಹುದು.

ಬರವಣಿಗೆ : ಅನೇಕರಿಗೆ ಬರೆಯುವ ಅಭ್ಯಾಸವಿರುತ್ತದೆ. ನೀವು ಮೊಬೈಲ್ ನಲ್ಲಿ ಅಥವಾ ನೋಟ್ ಬುಕ್ ನಲ್ಲಿ ಬರೆಯಬಹುದು. ವಿಮಾನ ನಿಲ್ದಾಣದಲ್ಲಿ ಸಮಯ ಸಿಕ್ಕಾಗ ಯಾವುದಾದ್ರೂ ಒಂದು ಕಥೆಯನ್ನೋ ಅಥವಾ ಲೇಖನವನ್ನೂ ನೀವು ಬರೆದು ಮುಗಿಸಬಹುದು.
 

click me!