ಈ ಯುವಕ ಕೇರಳದಿಂದ ಮೆಕ್ಕಾವರೆಗೆ ಕಾಲ್ನಡಿಗೆಯಲ್ಲೇ ಹೋಗಿ ದಾಖಲೆ ಮಾಡಿದ್ದಾನೆ. ಅವನ ಈ ಪ್ರಯಾಣವು ರೋಚಕ ಸಾಹಸದಿಂದ ಕೂಡಿತ್ತು..
ಶಿಹಾಬ್ ಚೋಟ್ಟೂರ್ ಬೆಳೆದಿದ್ದೇ ಪ್ರಾಚೀನ ಕಾಲದಲ್ಲಿ ಕೇರಳದಿಂದ ಮೆಕ್ಕಾಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರ ಕಥೆಗಳನ್ನು ಕೇಳುತ್ತಾ. ಇದು ಅವರಲ್ಲಿ ವಿಶೇಷ ಕುತೂಹಲವನ್ನು ಹುಟ್ಟು ಹಾಕಿತ್ತು. ಕಡೆಗೂ ಕುತೂಹಲ ತಣಿಸಿಕೊಳ್ಳಲು ಕೇರಳದ ತನ್ನ ಹುಟ್ಟೂರಿನಿಂದ ಸೌದಿ ಅರೇಬಿಯಾದ ಮೆಕ್ಕಾವರೆಗೆ ಹಜ್ ಯಾತ್ರೆ ಹೊರಟೇಬಿಟ್ಟರು. ಬರೋಬ್ಬರಿ 12 ತಿಂಗಳ ಕಾಲ್ನಡಿಗೆಯು ಅವರ ಕನಸನ್ನು ಈಡೇರಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ, ಕೇರಳದ ಶಿಹಾಬ್ ಚೋಟ್ಟೂರ್ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಬಳಿಯ ಅಥವನಾಡ್‌ನಿಂದ ಸೌದಿ ಅರೇಬಿಯಾಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಸಕರ ಪ್ರಯಾಣವನ್ನು ಪ್ರಾರಂಭಿಸಿದರು. 8,640 ಕಿ.ಮೀ ಉದ್ದದ ಪ್ರಯಾಣವು ಅವರನ್ನು ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾ ಮೂಲಕ ಹಜ್‌ಗೆ ಕರೆದೊಯ್ಯಿತು. 12 ತಿಂಗಳು ಮತ್ತು 5 ದಿನಗಳಲ್ಲಿ ಜೂನ್ 7 ರಂದು ಶಿಹಾಬ್ ಸೌದಿ ಅರೇಬಿಯಾವನ್ನು ತಲುಪಿದರು.
ಸೂಪರ್ ಮಾರ್ಕೆಟ್ ನಡೆಸುತ್ತಿರುವ ಚೋಟ್ಟೂರ್ ಅವರು ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ, ಮದೀನಾಕ್ಕೆ ಹೋದರು. ಅವರು ಮೆಕ್ಕಾಗೆ ತೆರಳುವ ಮೊದಲು ಮದೀನಾದಲ್ಲಿ 21 ದಿನಗಳನ್ನು ಕಳೆದರು. ಚೋಟ್ಟೂರು ಪ್ರತಿ ದಿನ ಸರಾಸರಿ 25 ಕಿಲೋಮೀಟರ್ ಕ್ರಮಿಸುತ್ತಾ ಅಂತೂ ಸೌದಿ ಅರೇಬಿಯಾ ತಲುಪಿದರು. ಸೌದಿ ಅರೇಬಿಯಾವನ್ನು ತಲುಪಿದ ನಂತರ ಪ್ರತಿದಿನ ಕನಿಷ್ಠ 60 ಕಿಲೋಮೀಟರ್‌ಗಳವರೆಗೆ ನಡೆದರು. ಹೀಗೆ ಒಂಟಿ ಕಾಲ್ನಡಿಗೆ ಪ್ರಯಾಣ ಕೈಗೊಂಡಿದ್ದರೆ ಮತ್ಯಾರಾದರೂ ಮಧ್ಯದಲ್ಲಿ ನಿರ್ಧಾರ ಬದಲಿಸಿ ಬೇರೆ ವಾಹನಗಳ ಸಹಾಯ ಪಡೆಯುತ್ತಿದ್ದರೇನೋ, ಆದರೆ ಶಿಹಾಬ್ ನಿರ್ಧಾರ ಗಟ್ಟಿಯಾಗಿತ್ತು.
ಕಾಶಿ, ಪುರಿ,ಆಯೋಧ್ಯೆ ಸೇರಿ 6 ಪುಣ್ಯಕ್ಷೇತ್ರ ಯಾತ್ರೆಗೆ ಕೈಗೆಟುಕುವ ದರದ ಪ್ಯಾಕೇಜ್ ಘೋಷಿಸಿದ ರೈಲ್ವೇ !
ಶಿಹಾಬ್ ಅವರು ಮದೀನಾ ಮತ್ತು ಮೆಕ್ಕಾ ನಡುವಿನ 440 ಕಿಮೀ ದೂರವನ್ನು ಒಂಬತ್ತು ದಿನಗಳಲ್ಲಿ ಕ್ರಮಿಸಿದರು. ತಾಯಿ ಜೈನಬಾ ಕೇರಳದಿಂದ ಮೆಕ್ಕಾಗೆ ಆಗಮಿಸಿದ ಬಳಿಕ ಶಿಹಾಬ್ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.
ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಶಿಹಾಬ್, ಭಾರತದ ದಕ್ಷಿಣ ರಾಜ್ಯದಿಂದ ಮೆಕ್ಕಾಗೆ ತೆರಳಿದ ತನ್ನ ಪ್ರಯಾಣದ ಬಗ್ಗೆ ತನ್ನ ವೀಕ್ಷಕರಿಗೆ ನಿರಂತರ ಅಪ್ಡೇಟ್ ನೀಡುತ್ತಲೇ ಇದ್ದಾನೆ.
ವಾಘಾ ಗಡಿಯಲ್ಲಿ ವಿರಾಮ
ಕಳೆದ ವರ್ಷ ಜೂನ್‌ನಲ್ಲಿ ತಮ್ಮ ಹಜ್ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಶಿಹಾಬ್ ಅವರು ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.
ಇಲ್ಲಿ, ಅವರು ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದ ಕಾರಣ ಅವರ ಮೊದಲ ಅಡಚಣೆಯನ್ನು ಎದುರಿಸಿದರು.
ಭಾರತದಲ್ಲಿ ನೋಡ್ಲೇಬೇಕಾದ ಅದ್ಭುತ ಸ್ಥಳಗಳು, ಆನಂದ್ ಮಹೀಂದ್ರಾ ಶೇರ್ ಮಾಡಿರೋ ಬಕೆಟ್ ಲಿಸ್ಟ್ ಇಲ್ಲಿದೆ
ಟ್ರಾನ್ಸಿಟ್ ವೀಸಾ ಪಡೆಯಲು ಅವರು ವಾಘಾದ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಅಂತಿಮವಾಗಿ, ಫೆಬ್ರವರಿ 2023ರಲ್ಲಿ, ಶಿಹಾಬ್ ಟ್ರಾನ್ಸಿಟ್ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಪಾಕಿಸ್ತಾನವನ್ನು ಪ್ರವೇಶಿಸಿದರು ಮತ್ತು ಸೌದಿ ಅರೇಬಿಯಾಕ್ಕೆ ಅವರ ಪ್ರಯಾಣವು ಸ್ವಲ್ಪ ವಿರಾಮದ ನಂತರ ಪುನರಾರಂಭವಾಯಿತು. ನಾಲ್ಕು ತಿಂಗಳ ನಂತರ, ಶಿಹಾಬ್ ಚೋಟ್ಟೂರ್ ಹಜ್ ಯಾತ್ರೆಗಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿದರು.