ಮಕ್ಕಳೆಂದ ಮೇಲೆ ಅಳೋದು ಮಾಮೂಲಿ. ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳ ಅಳುವನ್ನು ನಾವು ಕೇಳ್ತಿರುತ್ತೇವೆ. ಅದನ್ನು ನಿರ್ಲಕ್ಷ್ಯ ಮಾಡಿ ನಮ್ಮ ಕೆಲಸ ನಾವು ಮಾಡ್ತೇವೆ. ಆದ್ರೆ ವಿಮಾನದಲ್ಲಿ ಕುಳಿತ ಈ ವ್ಯಕ್ತಿ ಮಗು ಅತ್ತಿದ್ದಕ್ಕೆ ಏನೆಲ್ಲ ರಾದ್ದಾಂತ ಮಾಡಿದ್ದಾನೆ ಗೊತ್ತಾ?
ಮಕ್ಕಳೊಂದಿಗೆ ಪ್ರಯಾಣ ಬೆಳೆಸೋದು ಹೇಳಿದಷ್ಟು ಸುಲಭವಲ್ಲ. ಮನೆಯಲ್ಲಿದ್ದಷ್ಟು ಆರಾಮವಾಗಿ ಮಕ್ಕಳಿರೋದಿಲ್ಲ. ಸ್ವಂತ ವಾಹನದಲ್ಲಿ ಮಕ್ಕಳಿಗೆ ಕಿರಿಕಿರಿಯಾದ್ರೆ ದಾರಿ ಮಧ್ಯೆ ನಿಲ್ಲಿಸಿ, ಅವರನ್ನು ಸಂತೈಸಿಬಹುದು. ಅದೇ ಸಾರ್ವಜನಿಕ ವಾಹನದಲ್ಲಿ ಪ್ರಯಾಣ ಬೆಳೆಸುವ ವೇಳೆ ಅಳುವ ಮಕ್ಕಳನ್ನು ಸಂಭಾಳಿಸೋದು ಸವಾಲಾಗುತ್ತದೆ. ಅದ್ರಲ್ಲೂ ವಿಮಾನ ಪ್ರಯಾಣದ ವೇಳೆ ಬಹಳ ಕಷ್ಟ. ವಿಮಾನದ ಪ್ರಯಾಣದ ವೇಳೆ ಅನೇಕರಿಗೆ ಕಿವಿ ಕಟ್ಟಿದ ಅನುಭವವಾಗುತ್ತದೆ. ಮಕ್ಕಳಿಗೆ ಇದು ಅರ್ಥವಾಗೋದಿಲ್ಲ. ಒತ್ತಡ ತಡೆಯಲಾರದೆ ಅವರು ಅಳಲು ಶುರು ಮಾಡ್ತಾರೆ. ವಿಮಾನದಲ್ಲಿ ಮಕ್ಕಳು ಅಳ್ತಿದ್ದರೆ ಸಹ ಪ್ರಯಾಣಿಕರು ಅದನ್ನು ಸಹಿಸಿಕೊಳ್ತಾರೆ. ಸಾರ್ವಜನಿಕ ವಾಹನದಲ್ಲಿ ಪ್ರಯಾಣ ಬೆಳೆಸುವಾಗ ಇಂಥ ಸಣ್ಣಪುಟ್ಟದ್ದಕ್ಕೆ ಹೊಂದಿಕೊಳ್ಳಲೇಬೇಕು. ಆದ್ರೆ ಕೆಲವರಿಗೆ ಸ್ವಲ್ಪವೂ ತಾಳ್ಮೆ ಇರೋದಿಲ್ಲ. ಮಕ್ಕಳ ಅಳು ಕೇಳಿದ್ರೂ ಅವರ ಕೋಪ ನೆತ್ತಿಗೇರುತ್ತದೆ.
ವಿಮಾನ (Plane) ದಲ್ಲಿ ಮಗು ಅಳೋದನ್ನು ಕೇಳಲಾಗದೆ ಕಿರುಚಾಡಿದ ವ್ಯಕ್ತಿಯೊಬ್ಬನ ವಿಡಿಯೋ (Video) ಈಗ ವೈರಲ್ ಆಗಿದೆ. ಫ್ಲೋರಿಡಾ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಮಗು ಅಳ್ತಿದೆ. ಇದ್ರಿಂದ ವ್ಯಕ್ತಿಯೊಬ್ಬ ತಾಳ್ಮೆ ಕಳೆದುಕೊಂಡಿದ್ದಾನೆ. ಆತನ ಕಿರುಚಾಟದ ವಿಡಿಯೋ ಹಾಗೂ ಕೊನೆಯಲ್ಲಿ ಏನಾಯ್ತು ಎನ್ನುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಮಗುವಿನ ಪೋಷಕರು ಮತ್ತು ಫ್ಲೈಟ್ ಅಟೆಂಡೆಂಟ್ ಮೇಲೆ ವ್ಯಕ್ತಿ ಕೂಗುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವ್ಯಕ್ತಿಯನ್ನು ಶಾಂತಗೊಳಿಸಲು ವಿಮಾನ ಸಿಬ್ಬಂದಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದ್ರೆ ಅದು ಸಾಧ್ಯವಾಗಲಿಲ್ಲ. ನೀವು ಕಿರುಚಾಡುತ್ತಿದ್ದೀರಿ ಎಂದು ವಿಮಾನ ಸಿಬ್ಬಂದಿ ಹೇಳಿದ್ದಾರೆ. ಅದಕ್ಕೆ ಮಗು ಕೂಡ ಎಂದು ಆತ ಉತ್ತರಿಸಿದ್ದಾನೆ.
ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..
ಈ ವಿಡಿಯೋವನ್ನು ಮೊದಲು ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಪರಿಚಿತ ವ್ಯಕ್ತಿ, ಗಗನಸಖಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದ ವ್ಯಕ್ತಿಯ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಕೋಪಗೊಂಡ ಪ್ರಯಾಣಿಕನು ತನ್ನ ಹತಾಶೆಯನ್ನು ವಿಮಾನ ಸಿಬ್ಬಂದಿ ಮೇಲೆ ತೋರಿಸಿದ್ದಾನೆ. ಒಂದೇ ಸಮನೆ ವಿಮಾನ ಸಿಬ್ಬಂದಿ ಮೇಲೆ ಕೂಗಾಡ್ತಿದ್ದಾನೆ. ಪಕ್ಕದಲ್ಲಿ ಕುಳಿತಿದ್ದ ಮಹಿಳೆ, ವ್ಯಕ್ತಿಯನ್ನು ಸಂತೈಸುವ ಯತ್ನ ನಡೆಸಿದ್ದಾಳೆ. ಅದು ಸಾಧ್ಯವಾಗದೆ ಹೋದಾಗ ಆಕೆ ಹಣೆಮೇಲೆ ಕೈ ಇಟ್ಟಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಕೊನೆಯಲ್ಲಿ ಒರ್ಲ್ಯಾಂಡೊದಲ್ಲಿ ವಿಮಾನವು ನಿಂತಾಗ, ಆ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಯುವಂತೆ ಕೇಳಲಾಗಿದೆ. ಆರಂಭದಲ್ಲಿ ವ್ಯಕ್ತಿ ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾನೆ. ಪೊಲೀಸರಿಗೆ ತನ್ನ ಹತಾಷೆಯ ಕಾರಣವನ್ನು ವಿವರಿಸಿದ್ದಾರ. ಕೊನೆಯಲ್ಲಿ ಆತನನ್ನು ವಿಮಾನದಿಂದ ಕೆಳಗಿಳಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ದೇವಾಲಯದಲ್ಲಿ ದುರ್ಗೆಗೆ ನಿತ್ಯ ಪೂಜಿಸುವುದು ಮುಸ್ಲಿಂ ಅರ್ಚಕ!
ಈ ವೀಡಿಯೊ ಇಂಟರ್ನೆಟ್ ಅನ್ನು ಬಿರುಗಾಳಿಯಂತೆ ವೈರಲ್ ಆಗಿದೆ. ಕೆಲವರು ಆತನ ವರ್ತನೆಯನ್ನು ಟೀಕಿಸಿದ್ದಾರೆ. ಮತ್ತೆ ಕೆಲವರು ಆತನ ಪರವಾಗಿ ಮಾತನಾಡಿದ್ದಾರೆ. ಮಗುವಿನ ಅಥವಾ ಅಂಬೆಗಾಲಿಡುವ ಶಿಶುವಿನ ಅಳುವ ಶಬ್ದವನ್ನು ಸಹಿಸಲು ನಿಮಗೆ ಸಾಧ್ಯವಿಲ್ಲ ಎಂದಾದ್ರೆ ವಿಮಾನ ಪ್ರಯಾಣ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸುವುದು ನಿಮಗಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಏರ್ ಕಂಪ್ರೆಷನ್ ಅಥವಾ ಡಿಕಂಪ್ರೆಷನ್‌ನಿಂದ ಕಾರಣಕ್ಕೆ ನೋವಿನಿಂದ ಬಳಲುತ್ತಿರುವ ಮಗುವನ್ನು ನೀವು ಹೇಗೆ ನಿರ್ವಹಿಸುತ್ತೀರಿ? ಪೋಷಕರು ಮತ್ತು ಮಗುವಿನ ಬಗ್ಗೆ ಸಹಾನುಭೂತಿ ತೋರಿಸಬೇಕು. ಆದ್ರೆ ನೀವು, ಮಗುವಿಗಿಂತ ತುಂಬಾ ದುರ್ಬಲರಾಗಿದ್ದೀರಿ. ಸಾರ್ವಜನಿಕ ಸ್ಥಳಗಳಿಂದ ದೂರವಿರಿ ಎಂದು ಇನ್ನೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು ಈ ವ್ಯಕ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕಾಗಿಯೇ ವಿಮಾನಯಾನ ಸಂಸ್ಥೆಗಳು ಕಿಡ್-ಫ್ರೀ ವಿಮಾನಗಳನ್ನು ನೀಡಬಹುದೆಂದು ನಾನು ಬಯಸುತ್ತೇನೆ. ಯಾವುದೇ ಪ್ರಶ್ನೆ ಕೇಳದೆ ನಾನು ಹೆಚ್ಚುವರಿ ಹಣವನ್ನು ಪಾವತಿಸುತ್ತೇನೆ ಎಂದು ಬರೆದಿದ್ದಾನೆ. ಸೌತ್‌ವೆಸ್ಟ್ ಏರ್‌ಲೈನ್ಸ್ ಈ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿಯಿಲ್ಲ, ಆದ್ರೆ ಏರ್ ಲೈನ್ಸ್ ಸಿಬ್ಬಂದಿಯ ವೃತ್ತಿಪರತೆಯನ್ನು ಶ್ಲಾಘಿಸುತ್ತೇವೆ ಎಂದು ಕಂಪನಿ ಹೇಳಿದೆ. ಗಲಾಟೆಯಲ್ಲಿ ಸಾಕ್ಷಿಯಾದ ಪ್ರಯಾಣಿಕರ ಕ್ಷಮೆಯನ್ನು ಏರ್ನೈನ್ ಕೇಳಿದೆ.
I am not part of the community that believes children/babies shouldn’t fly HOWEVER, I do believe certain communities do not properly manage their children in public and I understand why that might drive someone to lose their mind. pic.twitter.com/qAGYviNlye
— I ❤️ Jews, Please dont close my accounts. (@LaCienegaBlvdss)