ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಕ್ಷೇತ್ರಗಳ ಯಾತ್ರಾರ್ಥಿಗಳಿಗಾಗಿ ಜಾರಿ ಮಾಡಿದ್ದ ವಿಶೇಷ ಕಾಶಿ ಯಾತ್ರೆ ದರ್ಶನ್ ರೈಲು ಸೇವೆಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಈ ರೈಲು ರದ್ದಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಕ್ಷೇತ್ರಗಳ ಯಾತ್ರಾರ್ಥಿಗಳಿಗಾಗಿ ಜಾರಿ ಮಾಡಿದ್ದ ವಿಶೇಷ ಕಾಶಿ ಯಾತ್ರೆ ದರ್ಶನ್ ರೈಲು ಸೇವೆಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಈ ರೈಲು ರದ್ದಾಗಿದೆ. ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಚುನಾವಣಾ ಆಯೋಗ ಈ ಕಾಶಿ ಯಾತ್ರೆ ವಿಶೇಷ ರೈಲಿಗೆ (Special Train) ಅನುಮತಿ ನಿರಾಕರಿಸಿದೆ. ಏಪ್ರಿಲ್ 14 ಹಾಗೂ 28 ರಂದು ಎರಡು ಹಂತಗಳಲ್ಲಿ ರಾಜ್ಯದ ಯಾತ್ರಾರ್ಥಿಗಳನ್ನು ಬೆಂಗಳೂರಿನಿಂದ ಕಾಶಿಗೆ ಕರೆದುಕೊಂಡು ಹೋಗಬೇಕಾದ ಈ ರೈಲು ಸೇವೆ ಸ್ಥಗಿತಗೊಂಡಿದೆ. ಕರ್ನಾಟಕ ಸರ್ಕಾರದ ಧಾರ್ಮಿಕ ಹಾಗೂ ದತ್ತಿ (Karnataka Religious Endowment department) ಇಲಾಖೆ ವತಿಯಿಂದ ಈ ಕಾಶಿಯಾತ್ರೆ ಯೋಜನೆ ಆಯೋಜನೆಯಾಗಿತ್ತು.
ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ (Assembly election) ಇರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಕರ್ನಾಟಕ ಸರ್ಕಾರ ಭಾರತ್ ಗೌರವ್ ಕಾಶಿ ದರ್ಶನ್ (Bharat Govrav kashi darshan) ಯೋಜನೆಯಡಿ ರಾಜ್ಯದ ಜನರಿಗೆ ಹಿಂದೂ ಪುಣ್ಯ ಕ್ಷೇತ್ರಗಳಾದ ಅಯೋಧ್ಯೆ ಕಾಶಿ ವಾರಣಾಶಿಗೆ ಈ ವಿಶೇಷ ರೈಲು ಯೋಜನೆಯನ್ನು ರೂಪಿಸಿತ್ತು. ಆದರೆ ಈಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗವೂ ಈ ಯೋಜನೆಗೆ ಅನುಮತಿ ನಿರಾಕರಿಸಿದ್ದು, ರಾಜ್ಯ ಸರ್ಕಾರವೂ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ.
ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ
ಈ ಯೋಜನೆಯನ್ವಯ ಎರಡು ಹಂತಗಳಲ್ಲಿ ಏಪ್ರಿಲ್ 14 ಹಾಗೂ ಏಪ್ರಿಲ್ 28 ರಂದು ರಾಜ್ಯದ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಆದರೆ ಈಗ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಚುನಾವಣಾ ಆಯೋಗ ಏಪ್ರಿಲ್ 14 ರಂದು ಬರೆದಿರುವ ಪತ್ರದಲ್ಲಿ ಮಾರ್ಚ್ 29 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಿರುವುದರಿಂದ ಈ ರೈಲಿಗೆ ಸಂಬಂಧಿಸಿದ ಬುಕ್ಕಿಂಗ್ ಅನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿತ್ತು.
ಭಾರತ್ ಗೌರವ್‌ನಿಂದ ಕರ್ನಾಟಕಕ್ಕೆ ಕಾಶಿ ಹತ್ತಿರ: ಮೋದಿ
ಈ ಯಾತ್ರೆಗಾಗಿ ರೈಲ್ವೆ ಇಲಾಖೆಯು ಮಾರ್ಚ್ 25 ರಿಂದ ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನ ಪೋರ್ಟಲ್ ಮೂಲಕ ಬುಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿತ್ತು. ಆದರೆ ನಂತರ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ರೈಲಿಗೆ ಅನುಮತಿ ನೀಡುವಂತೆ ಚುನಾವಣಾ ಆಯೋಗವನ್ನು ಸಂಪರ್ಕಿಸಿತ್ತು. ಆದರೆ ಕೂಡಲೇ ಚುನಾವಣಾ ಆಯೋಗ ಕೂಡಲೇ ಈ ರೈಲಿನ ಬುಕ್ಕಿಂಗ್ ರದ್ದುಪಡಿಸುವಂತೆ ಆದೇಶಿಸಿತ್ತು. ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಭಾರತ್ ಗೌರವ್ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಐಆರ್‌ಟಿಸಿ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವ ರೈಲು ಸೇವೆ ಇದಾಗಿದ್ದು, ಇದರಲ್ಲಿ ಟಿಕೆಟ್ ಬುಕ್ ಮಾಡಿದ ಯಾತ್ರಾರ್ಥಿಗಳಿಗೆ ಪ್ರತಿ ಟಿಕೆಟ್‌ಗೆ 20 ಸಾವಿರ ರೂಪಾಯಿ ಇದ್ದು, 5 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿತ್ತು.